ETV Bharat / state

ದಾಬಸ್ ಪೇಟೆ- ದೊಡ್ಡಬಳ್ಳಾಪುರ ಮಧ್ಯೆ ತಲೆಎತ್ತಲಿದೆ ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ - KWIN CITY PROJECT

author img

By ETV Bharat Karnataka Team

Published : 16 hours ago

Updated : 14 hours ago

ನಾವಿನ್ಯತೆಯ ಪರಂಪರೆಯನ್ನು ಮುಂದುವರೆಸುತ್ತ, ಜ್ಞಾನ, ಆರೋಗ್ಯ, ನಾವೀನ್ಯತೆ ಹಾಗೂ ಸಂಶೋಧನೆಯನ್ನು ಸಂಯೋಜಿಸುವ ಕ್ವಿನ್ ಸಿಟಿಯಂತಹ ವಿಶಿಷ್ಟ ಯೋಜನೆಯ ಮೊದಲನೇ ಹಂತಕ್ಕೆ ಸಿಎಂ ಇಂದು ಚಾಲನೆ ನೀಡಿದರು.

CM SIDDARAMAIAH LAUNCHED THE 'KWIN CITY' PROJECT
'ಕ್ವಿನ್ ಸಿಟಿ' ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ (ETV Bharat)

ಬೆಂಗಳೂರು: ಸಮೀಪದ ಡಾಬಸಪೇಟೆ ಮತ್ತು ದೊಡ್ಡಬಳ್ಳಾಪುರದ ನಡುವೆ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಆಸುಪಾಸಿನಲ್ಲಿ ಅಭಿವೃದ್ಧಿಪಡಿಸಲಿರುವ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಯೋಜನೆಯ ಮೊದಲನೆಯ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ ಅವರು, "ಕರ್ನಾಟಕವು ದೇಶದ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕ್ವಿನ್ ಸಿಟಿಯು ಕರ್ನಾಟಕ ಮತ್ತು ಭಾರತದ ಪಾಲಿಗೆ ಹೊಸ ಭಾಷ್ಯ ಬರೆಯಲಿದೆ. ಇಲ್ಲಿ ಜಾಗತಿಕ ಮಟ್ಟದ ಸಹಭಾಗಿತ್ವ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಇರಲಿದ್ದು, 'ಸ್ಮಾರ್ಟ್ ಲಿವಿಂಗ್' ಪರಿಕಲ್ಪನೆಗೆ ಒತ್ತು ಕೊಡಲಾಗುವುದು. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು, ಸುಸ್ಥಿರ ಬೆಳವಣಿಗೆ ಸಾಧಿಸಲಾಗುವುದು" ಎಂದು ಹೇಳಿದರು.

ಕರ್ನಾಟಕಕ್ಕಿದೆ ಭವ್ಯ ಇತಿಹಾಸ: "ಕರ್ನಾಟಕ ಹಾಗೂ ಭಾರತದ ಭವಿಷ್ಯವನ್ನು ರೂಪಿಸುವ ಕ್ವಿನ್ ಸಿಟಿ ಎಂಬ ದೂರದೃಷ್ಟಿಯ ಯೋಜನೆಯಾಗಿದೆ. ಕದಂಬ ರಾಜವಂಶಜರು ಬನವಾಸಿಯನ್ನು ತಮ್ಮ ರಾಜಧಾನಿಯಾಗಿಸಿದ್ದ ಕ್ರಿಸ್ತಶಕ 4 ನೇ ಶತಮಾನದಿಂದಲೂ ಕರ್ನಾಟಕ ಕ್ಷೇತ್ರಕ್ಕೆ ತನ್ನದೇ ಆದ ಶ್ರೀಮಂತ ನಾವಿನ್ಯತೆ ಹಾಗೂ ಅಭಿವೃದ್ಧಿಯ ಇತಿಹಾಸವಿದೆ. 1909 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ , 1940 ಯಲ್ಲಿ ಹೆಚ್​ಎಎಲ್ ಹಾಗೂ 1970 ರಲ್ಲಿ 'ಎಲೆಕ್ಟ್ರಾನಿಕ್ ಸಿಟಿ' ಯ ಸ್ಥಾಪನೆಯ ಮೂಲಕ, 20ನೇ ಶತಮಾದಲ್ಲಿಯೇ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ" ಎಂದು ವಿವರಿಸಿದರು.

1980 ರಲ್ಲಿ ಬೆಂಗಳೂರನ್ನು, ಭಾರತದ ಸಿಲಿಕಾನ್ ವ್ಯಾಲಿಯಾಗಿ ಪರಿವರ್ತಿಸುವ ಮೂಲಕ ಕರ್ನಾಟಕ ಐಟಿ ಕ್ರಾಂತಿಯತ್ತ ದೊಡ್ಡ ಹೆಜ್ಜೆಯನ್ನು ಇರಿಸಿತ್ತು. ಇಂದು ಕರ್ನಾಟಕ ರಾಜ್ಯ, ಭಾರತದ 45 ಯೂನಿಕಾರ್ನ್ಸ್​ಗೆ ತವರೂರಾಗಿದ್ದು, ಭಾರತದ ಒಟ್ಟು ಯೂನಿಕಾರ್ನ್ ಮೌಲ್ಯದಲ್ಲಿ ಶೇ. 50ರಷ್ಟು ಪಾಲನ್ನು ಹೊಂದಿದೆ. ಇಂದು ಬೆಂಗಳೂರು, 17,000ಕ್ಕೂ ಹೆಚ್ಚು ಏಂಜಲ್ ಹೂಡಿಕೆದಾರರ ಹಾಗೂ 1,500 ವಿಸಿ ಹೂಡಿಕೆಗಳ ತವರೂರಾಗಿದೆ. ಈ ಸಾಧನೆಯನ್ನು ನಾವಿನ್ಯತೆಯನ್ನು ಪ್ರೋತ್ಸಾಹಿಸುವ ಹಾಗೂ ಪ್ರತಿಭೆಯನ್ನು ಪೋಷಿಸುವ ಹಾಗೂ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಮೂಲಕ ವಾಣಿಜ್ಯೋದ್ಯಮಕ್ಕೆ ಸಹಕರಿಸುವ ನಮ್ಮ ಸರ್ಕಾರದ ಬದ್ಧತೆಯಿಂದ ಸಾಧ್ಯವಾಗಿದೆ. ನಾವಿನ್ಯತೆಯ ನಮ್ಮ ಪರಂಪರೆಯನ್ನು ಮುಂದುವರೆಸುತ್ತ, ಜ್ಞಾನ, ಆರೋಗ್ಯ, ನಾವೀನ್ಯತೆ ಹಾಗೂ ಸಂಶೋಧನೆಯನ್ನು ಸಂಯೋಜಿಸುವ ಕ್ವಿನ್ ಸಿಟಿಯಂತಹ ವಿಶಿಷ್ಟ ಯೋಜನೆಯನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ" ಎಂದು ಹೇಳಿದರು.

ಜಾಗತಿಕ ನಾಯಕನ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ: "ಕರ್ನಾಟಕವನ್ನು ನಾವಿನ್ಯತೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕ ನಾಯಕನ ಸ್ಥಾನಕ್ಕೆ ಕೊಂಡೊಯ್ಯುವ ನಮ್ಮ ಪ್ರಯತ್ನವಾಗಿದ್ದು, ಕ್ವಿನ್ ಸಿಟಿಯ ಲೋಕಾರ್ಪಣೆ ಮೈಲಿಗಲ್ಲು ಸಾಧನೆಯಾಗಿದೆ. ಈ ಸಾಧನೆ ಕರ್ನಾಟಕವನ್ನು ಸಾರ್ವಜನಿಕ- ಖಾಸಗಿ ಬಂಡವಾಳದ ಹಬ್ ಆಗಿ ಅಭಿವೃದ್ಧಿಗೊಳ್ಳಲು ಹಾಗೂ ರಾಜ್ಯದ ಜಿಡಿಪಿಗೆ ಸುಸ್ಥಿರ ಕೊಡುಗೆ ನೀಡಲೂ ಸಹಕರಿಸುತ್ತದೆ. ರಾಜ್ಯದ ಗಮನಾರ್ಹ ಬೆಳವಣಿಗೆಯ ಹಿಂದೆ ನಾವೀನ್ಯತೆ, ತಂತ್ರಜ್ಞಾನ ಮತ್ತು ಶಿಕ್ಷಣದಲ್ಲಿ ಕರ್ನಾಟಕಕ್ಕಿರುವ ಮೇಲುಗೈ ಚಾಲನಾ ಶಕ್ತಿಯಾಗಿ ನಿಂತಿದೆ. ಕ್ವಿನ್ ಸಿಟಿ ಉದ್ಘಾಟನೆಗೊಳ್ಳುವ ಮೂಲಕ ಈ ಬಳುವಳಿಯನ್ನು ಮುಂದುವರೆಸುವುದರ ಜೊತೆಗೆ ಜಾಗತಿಕ ವೇದಿಕೆಯಲ್ಲಿ ನಮ್ಮ ನಾಯಕತ್ವವನ್ನು ಬಲಪಡಿಸಲು ಸನ್ನದ್ಧರಾಗಿದ್ದೇವೆ" ಎಂದರು.

"ಪ್ರಗತಿ, ಅತ್ಯಾಧುನಿಕ ಸಂಶೋಧನೆ, ಪ್ರತಿಭಾ ಪೋಷಣೆಗೆ ಹಾಗೂ ಆರೋಗ್ಯ, ಬಯೋಟೆಕ್ನಾಲಜಿ ವಲಯಗಳಲ್ಲಿ ಅವಕಾಶಗಳನ್ನು ಸೃಜಿಸುವ ನಿಟ್ಟಿನಲ್ಲಿ ಕ್ವಿನ್ ಸಿಟಿ ಕ್ರಿಯಾತ್ಮಕ ಇಂಜಿನ್ ನಂತೆ ವರ್ತಿಸಲಿದೆ. ಜ್ಞಾನ ಮತ್ತು ಸಂಶೋಧನೆಯನ್ನು ಸಂಯೋಜಿಸುವ ಸಹಯೋಗದ ಪರಿಸರವನ್ನು ಪೋಷಿಸುವುದರ ಮೂಲಕ ಕೆ.ಹೆಚ್.ಐ.ಆರ್ ಸಿಟಿ ನಾವೀನ್ಯತೆ ಮತ್ತು ಆರೋಗ್ಯ ವಲಯಗಳಲ್ಲಿ ಕರ್ನಾಟಕದ ಜಾಗತಿಕ ಸ್ಥಾನವನ್ನು ಎತ್ತರಕ್ಕೇರಿಸುವ ಗುರಿಯನ್ನು ಹೊಂದಿದೆ. ತನ್ಮೂಲಕ ರಾಜ್ಯವನ್ನು ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಮಾದರಿಯನ್ನಾಗಿಸಿದೆ. ಜ್ಞಾನ ಹಂಚಿಕೆ, ಸಹಯೋಗ ಹಾಗೂ ಉದ್ಯಮಶೀಲತೆಗೆ ಪೂರಕ ಪರಿಸರವನ್ನು ನಿರ್ಮಿಸುವ ಮೂಲಕ ಕ್ವಿನ್ ಸಿಟಿ ಕರ್ನಾಟಕಕ್ಕೆ ಮಾತ್ರ ಲಾಭದಾಯಕವಾಗಿರದೇ ಭಾರತದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗೂ ಕೊಡುಗೆ ನೀಡಲಿದೆ" ಎಂದು ಹೇಳಿದರು.

ಗುಣಮಟ್ಟದ ಆರೋಗ್ಯ ವ್ಯವಸ್ಥೆಯತ್ತ ಚಿತ್ತ: "ಆರೋಗ್ಯದೆಡೆಗಿನ ಕ್ವಿನ್ ಸಿಟಿಯ ಗಮನವು ವೈದ್ಯಕೀಯ ಸಂಶೋಧನೆ, ಹೊಸ ಚಿಕಿತ್ಸೆಗಳ ಅಭಿವೃದ್ಧಿ ಮತ್ತು ಗುಣಮಟ್ಟದ ಆರೋಗ್ಯ ವ್ಯವಸ್ಥೆಗೆ ಎಲ್ಲರಿಗೂ ಸುಧಾರಿತ ಅವಕಾಶಗಳನ್ನು ಒದಗಿಸಲಿದೆ. ವಿವಿಧ ವಲಯಗಳಲ್ಲಿ ನಾವೀನ್ಯತೆ ಮತ್ತು ಸಂಶೋಧನೆಯ ಸಮನ್ವಯವು ಹೊಸ ತಂತ್ರಜ್ಞಾನ, ಉತ್ಪನ್ನಗಳು ಮತ್ತು ಸೇವೆಗಳನ್ನು ಸೃಜಿಸಲಿದ್ದು , ಇವು ನಮ್ಮ ಸಮಾಜದ ಮೇಲೆ ದೂರಗಾಮಿ ಪರಿಣಾಮವನ್ನು ಬೀರಲಿವೆ. ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಸಾರ್ವಜನಿಕ – ಖಾಸಗಿ ಪಾಲುದಾರಿಕೆ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ಕ್ವಿನ್ ಸಿಟಿ ಇತರ ರಾಜ್ಯಗಳಿಗೂ ಅನುಸರಣಾ ಮಾದರಿಯಾಗಲಿದೆ" ಎಂದು ತಿಳಿಸಿದರು.

"ಇದು ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುವುದಲ್ಲದೇ ಅಂತರರಾಷ್ಟ್ರೀಯ ಸಹಭಾಗಿತ್ವವನ್ನು ಪೋಷಿಸುತ್ತದೆ. ಹಾಗೂ ಕರ್ನಾಟಕವನ್ನು ವ್ಯವಹಾರಗಳಿಗೆ ಮತ್ತು ಜಗತ್ತಿನಾದ್ಯಂತ ನಾವೀನ್ಯತೆ ತರುವವರು ಆಯ್ಕೆ ಮಾಡುವ ಗಮ್ಯ ತಾಣವಾಗಿಸಲಿದೆ. ಕ್ವಿನ್ ಸಿಟಿ ಕರ್ನಾಟಕ ಹಾಗೂ ರಾಷ್ಟ್ರಕ್ಕೆ ಗೇಮ್ ಚೇಂಜರ್ ಆಗಲಿದೆ ಎಂದು ನನಗೆ ವಿಶ್ವಾಸವಿದೆ. ಆಶಯ ಮತ್ತು ಸ್ಪೂರ್ತಿಗೆ ಅದು ದಾರಿದೀಪವಾಗಿದ್ದು, ನಾವೀನ್ಯತೆಯ ಶಕ್ತಿಯನ್ನು ಪ್ರದರ್ಶಿಸಲಿದೆ" ಎಂದು ಹೇಳಿದರು.

ವೈಶಿಷ್ಟ್ಯಪೂರ್ಣ ಯೋಜನೆ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, "ಒಟ್ಟು 5,800 ಎಕರೆಯಲ್ಲಿ ಕ್ವಿನ್ ಸಿಟಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದ್ದು, ಮೊದಲ ಹಂತದಲ್ಲಿ 2,000 ಎಕರೆಯಲ್ಲಿ ಇದನ್ನು ಸಾಕಾರಗೊಳಿಸಲಾಗುವುದು. 5 ಲಕ್ಷ ಜನವಸತಿಯ ಗುರಿಯುಳ್ಳ ವಿನೂತನ ನಗರದ ಪರಿಧಿಯಲ್ಲಿ ಶೇ 40ರಷ್ಟು ಜಾಗವನ್ನು ಉದ್ಯಾನಗಳಿಗೆ ಮೀಸಲಿಡಲಾಗಿದೆ. ಜೊತೆಗೆ 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ 465 ಎಕರೆ, ವರ್ಷಕ್ಕೆ 7 ಸಾವಿರ ಟನ್ ಹಣ್ಣು-ತರಕಾರಿ ಬೆಳೆಯಲು 200 ಎಕರೆ, ಶೇಕಡಾ 50ರಿಂದ 70ರಷ್ಟು ಜಲ ಮರುಪೂರಣ ವ್ಯವಸ್ಥೆ ಇರಲಿದೆ" ಎಂದು ತಿಳಿಸಿದರು.

"ಉದ್ದೇಶಿತ ನಗರದಲ್ಲಿ ಮೊದಲಿಗೆ ಅತ್ಯುತ್ತಮ ಗುಣಮಟ್ಟದ ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಜಗತ್ತಿನ ಅಗ್ರ 500 ವಿ.ವಿ.ಗಳು ತಮ್ಮ ಕ್ಯಾಂಪಸ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಉತ್ಕೃಷ್ಟ ದರ್ಜೆಯ ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆಯಿಂದ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ" ಎಂದು ಯೋಜನೆಯ ವೈಶಿಷ್ಟ್ಯಗಳನ್ನು ವಿವರಿಸಿದರು.

"ಕ್ವಿನ್ ಸಿಟಿಯು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮತ್ತು ಶ್ರೇಷ್ಠತೆಗೆ ಮಾನದಂಡವಾಗಿ ಹೊರಹೊಮ್ಮಲಿದೆ. ಬೆಂಗಳೂರಿನಲ್ಲಿರುವ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ನವೋದ್ಯಮ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಗಳ ಕಾರ್ಯ ಪರಿಸರವನ್ನು ಇದಕ್ಕೆ ಪೂರಕವಾಗಿ ಬಳಸಿಕೊಳ್ಳಲಾಗುವುದು. ಇಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಳು ನಾಲ್ಕು ಪ್ರಮುಖ ವಲಯಗಳಾಗಿದ್ದು, ಮುಂಬರುವ ದಿನಗಳ ಸ್ಮಾರ್ಟ್ ಸಿಟಿಗಳಿಗೆ ಮೇಲ್ಪಂಕ್ತಿಯಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇವರೆಲ್ಲ ಭಾಗಿ: ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್, ಚೆಲುವರಾಯಸ್ವಾಮಿ, ಡಾ.ಎಂ.ಸಿ ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಎನ್.ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಮಂಕಾಳ ವೈದ್ಯ, ಬೋಸರಾಜು, ಶಿವಾನಂದ ಪಾಟೀಲ, ಮಧು ಬಂಗಾರಪ್ಪ, ರಹೀಂ ಖಾನ್ ಮತ್ತು ಆರ್.ಬಿ.ತಿಮ್ಮಾಪುರ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಉದ್ಯಮಿಗಳಾದ ಪ್ರಶಾಂತ್ ಪ್ರಕಾಶ್, ಗೀತಾಂಜಲಿ ಕಿರ್ಲೋಸ್ಕರ್, ರಂಗೇಶ್ ರಾಘವನ್, ವೈದ್ಯ ಡಾ.ವಿವೇಕ ಜವಳಿ, ಕೆಐಎಡಿಬಿ ಸಿಇಒ ಡಾ.ಮಹೇಶ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತಿರಿದ್ದರು.
ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಯೋಜನೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು.

ಇದನ್ನೂ ಓದಿ: ಶೀಘ್ರದಲ್ಲೇ 'ಮುಖ್ಯಮಂತ್ರಿ ಬಹುಮಹಡಿ ವಸತಿ ಯೋಜನೆ'ಯಡಿ ವಸತಿ ಸೌಲಭ್ಯ: ಎಲ್ಲೆಲ್ಲಿ ಜಾರಿ? - CM Multistorey Housing Scheme

Last Updated : 14 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.