ETV Bharat / state

ಕನ್ನಡ, ಕನ್ನಡಿಗರ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ, ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ: ಸಿಎಂ ಎಚ್ಚರಿಕೆ

ಕನ್ನಡ, ಕನ್ನಡಿಗರ ಹೀಯಾಳಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

CM SIDDARAMAIAH  KANNADA RAJYOTSAVA CELEBRATION  HOISTED KANNADA RAJYOTSAVA FLAG  BENGALURU
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ, ಅಂತವರ ವಿರುದ್ಧ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 69ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಮಾತನಾಡಿದ ಸಿಎಂ, ಕನ್ನಡ ಯಾರು ಸರಿಯಾಗಿ ಮಾತಾನಾಡುವುದಿಲ್ಲ ಅಂತಹವರಿಗೆ ಕನ್ನಡ ಕಲಿಸುವ ಕೆಲಸ ಆಗ್ತಿದೆ. ನಾವೆಲ್ಲರೂ ಕನ್ನಡಿಗರಾಗಬೇಕು. ದುರಾಭಿಮಾನ ಇರಬಾರದು. ಅಭಿಮಾನ ಇರಬೇಕು. ಬೇರೆ ರಾಜ್ಯಗಳಲ್ಲಿ ದುರಾಭಿಮಾನ ಇರುತ್ತೆ. ಹಾಗೆ ಇರಬಾರದು. ಯಾರು ಕನ್ನಡ ಮಾತನಾಡುವುದಕ್ಕೆ ಬರೊಲ್ಲಾ ಅಂತ ಜನರಿಗೆ ಅವರಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕು. ಇಂದು ನಾವೆಲ್ಲಾ ಕನ್ನಡಿಗರಾಗಿರುತ್ತೇವೆ. ವ್ಯವಹಾರದಲ್ಲಿ ಕನ್ನಡಿಗರಾಗಿರುತ್ತೇವೆ ಎಂದು ಶಪಥ ಮಾಡೋಣಾ ಎಂದು ಕರೆ ನೀಡಿದರು.

ಕರ್ನಾಟಕ ಏಕೀಕರಣ ಆಗಿ 68 ವರ್ಷ ಪೂರ್ಣ: ಕರ್ನಾಟಕ ಏಕೀಕರಣ ಆಗಿ 68 ವರ್ಷ ತುಂಬಿ 69ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. 1953ರಲ್ಲಿ ಫಜಲ್ ಆಲಿ ಅಧ್ಯಕ್ಷೆಯಲ್ಲಿ ರಾಜ್ಯಗಳು ಪುನರ್ ವಿಂಗಡನೆ ಸಮಿತಿ ರಚನೆ ಆಯ್ತು. ಅವರು ಕೊಟ್ಟ ವರದಿ ಆಧಾರದ ಮೇಲೆ ಭಾಷವಾರು ರಾಜ್ಯ ವಿಂಗಡನೆ ಆಯ್ತು. 1956 ನವಂಬರ್ 1 ರ ದಿನವನ್ನ ನಾವೆಲ್ಲಾ ಜವಾಬ್ದಾರಿಯಿಂದ ಇಡೀ ದೇಶದಲ್ಲಿ ರಾಜ್ಯಗಳ ಏಕೀಕರಣ ದಿನವೆಂದು ಆಚರಣೆ ಮಾಡ್ತಿದ್ದೇವೆ. ದಿವಂಗತ ಮಾಜಿ ಸಿಎಂ ದೇವರಾಜ ಅರಸು ಅವರಿದ್ದಾಗ 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಆಯ್ತು. ಇಡೀ ವರ್ಷ ಕರ್ನಾಟಕ ಸಂಭ್ರಮ ಆಚರಣೆ ಮಾಡ್ತಿದ್ದೇವೆ. ’ಹೆಸರಾಯಿತು, ಕರ್ನಾಟಕ ಉಸಿರಾಯಿತು‘, ಕನ್ನಡ ಎಂಬ ಘೋಷ ವಾಕ್ಯದಲ್ಲಿ ಇಡೀ ವರ್ಷ ಆಚರಣೆ ಮಾಡಿದ್ದೇವೆ. ನಮ್ಮ ಮಾತೃ ಭಾಷೆ ಕನ್ನಡವನ್ನು ನಮ್ಮ ವ್ಯವಹಾರಿಕ ಭಾಷೆಯನ್ನಾಗಿ ಮಾಡುವುದರ ಜತೆಗೆ ಬೇರೆಯವರ ಜೊತೆ ಕನ್ನಡದಲ್ಲಿ ಮಾತಾಡುತ್ತೇವೆ ಎಂಬ ಶಪಥ ಮಾಡಬೇಕು ಎಂದು ಕರೆ ನೀಡಿದರು.

ನಾವೆಲ್ಲ ಕನ್ನಡದ ಅಭಿಮಾನಿಳಾಗಬೇಕು: ಕರ್ನಾಟಕದಲ್ಲಿ ಸುಮಾರು 200 ಭಾಷೆಗಳಿವೆ. ಯಾವ ಭಾಷೆ, ಧರ್ಮ ಇರಲಿ, ನಾವೆಲ್ಲಾ ಕನ್ನಡಿಗರು, ಕನ್ನಡ ಬಹಳ ಪ್ರಾಚೀನವಾದ ಭಾಷೆ. ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆಯನ್ನಾಗಿ ಪರಿಗಣಿಸಿದೆ. ನಮ್ಮ ಭಾಷೆಯನ್ನ ಬಲಿಕೊಡಬಾರದು. ಭಾಷೆಯನ್ನ ಬಲಿಕೊಟ್ಟು ಉದಾರಿಗಳಾಗಬಾರದು. ನಾವೆಲ್ಲರೂ ಕನ್ನಡದ ಅಭಿಮಾನಿಗಳು ಆಗಬೇಕು. ಭಾಷೆಯನ್ನ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾದರೆ ನಾವೆಲ್ಲಾ ಕನ್ನಡಿಗರಾಗಬೇಕು. ಬೇರೆ ಭಾಷೆಯನ್ನ ಕಲಿಯಿರಿ ಆದರೆ ಕನ್ನಡ ಮಾತನಾಡುವುದನ್ನು ಮರೆಯಬೇಡಿ ಎಂದು ಕರೆ ‌ನೀಡಿದರು.

ಕೇಂದ್ರದಿಂದ ಅನುದಾನ ತಾರತಮ್ಯ: ಇಡೀ ದೇಶದಲ್ಲಿ ನಾಲ್ಕು ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಕರ್ನಾಟಕ ಸಂಗ್ರಹಿಸುತ್ತಿದೆ. ನಮಗೆ ಕೇಂದ್ರದಿಂದ ವಾಪಸ್​ ಬರುವ ಪಾಲು ಸುಮಾರು 55 ಸಾವಿರ ಕೋಟಿ ರೂ. ಮಾತ್ರ. ಅಂದರೆ ಒಂದು ರೂಪಾಯಿ ತೆರಿಗೆ ಕೊಟ್ರೆ 15 ಪೈಸೆ ಮಾತ್ರ ವಾಪಸ್ ಪಡೆಯುತ್ತಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ ಅನ್ನುವ ಕಾರಣಕ್ಕಾಗಿ, ನಾವು ಮುಂದುವರೆದ ರಾಜ್ಯ ಅಂತಾ ಅನ್ಯಾಯ ಮಾಡಬಾರದು. ಹಸು ಹಾಲು ಕೊಡುತ್ತೆ ಅಂತಾ ಎಲ್ಲ ಹಾಲನ್ನ ಕರೆಯಬಾರದು. ಕರುಗೆ ಹಾಲು ಬಿಡಬೇಕು ಎಂದು ಇದೇ ವೇಳೆ ಟೀಕಿಸಿದರು.

ನಾವು ಕೊಟ್ಟಿರುವ ತೆರಿಗೆ ಸರಿಯಾಗಿ ಕೊಡ್ರಪ್ಪ ಅಂತಾ ಕೇಳಿದಾಗ, ಅದಕ್ಕೆ ರಾಜಕೀಯ ಬಣ್ಣ ಕಟ್ಟಲಾಗ್ತಿದೆ. ನಮ್ಮ ಹಕ್ಕುಗಳನ್ನ ಪಡೆಯಲು ಹೋರಾಟ ಮಾಡಬೇಕಾಗುತ್ತದೆ. ಎಲ್ಲ ಲೋಕಸಭಾ ಸಸದ್ಯರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನ ಪ್ರತಿಭಟಿಸಬೇಕು. ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ನ್ಯಾಯಯುತ ತೆರಿಗೆ ಪಾಲನ್ನು ಕೊಡಿ ಎಂಬ ಶಕ್ತಿಯನ್ನ ಬೆಳೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕನ್ನಡ ಬಾವುಟ ಹಾರಿಸುವುದು ಕಡ್ಡಾಯ: ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕದ ಕೀರ್ತಿ ಪತಾಕೆ ಎಲ್ಲರೂ ಹಾರಿಸಬೇಕಿದೆ. ಈ ವರ್ಷ ಬೆಂಗಳೂರು ನಗರ ಜಿಲ್ಲೆಯಲ್ಲಿ ಎಲ್ಲ ಖಾಸಗಿ ಸಂಸ್ಥೆಗಳು, ಖಾಸಗಿ ಶಾಲೆಗಳು, ಉಳಿದ ಖಾಸಗಿ ಸಂಸ್ಥೆಗಳು ಈ ವರ್ಷದಿಂದ ಕನ್ನಡ ಬಾವುಟ ಹಾರಿಸಲು ಕಡ್ಡಾಯ ಮಾಡಲಾಗಿದೆ. ಎಲ್ಲ ಖಾಸಗಿ ಸಂಸ್ಥೆಗಳಿಗೂ ಧ್ವಜಾರೋಹಣ ಸಂಭ್ರಮದಿಂದ ಆಚರಿಸಲು ಮನವಿ ಮಾಡಲಾಗಿದೆ. ಇದರ ವರದಿ ಇವತ್ತು ಸಂಜೆ ಅಧಿಕಾರಿಗಳಿಂದ ಪಡೆಯುತ್ತೇನೆ ಎಂದರು.

ಇಡೀ ದೇಶದಲ್ಲಿ ಯಾವುದೇ ರಾಜ್ಯಕ್ಕೆ ಧ್ವಜ ಗೀತೆ ಇಲ್ಲ. ಕನ್ನಡವೇ ನಮ್ಮ ಮನಸ್ಸಿನ ಭಾಷೆ. ಕನ್ನಡ ಭಾಷೆಗೆ 2000 ವರ್ಷದ ಇತಿಹಾಸ ಇದೆ. ಕರ್ನಾಟಕ ಅಭಿವೃದ್ಧಿ ಮಿಂಚಿನ ಓಟದಲ್ಲಿ ಹೋಗ್ತಿದೆ. ನಮ್ಮ ನಾಡನ್ನು, ಭಾಷೆ ಸಂಸ್ಕೃತಿ ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಓದಿ: ಅಂದು - ಇಂದು ಬೆಳಗಾವಿ ಕನ್ನಡ ರಾಜ್ಯೋತ್ಸವ: ಹೋರಾಟಗಾರರು, ಸಾಹಿತಿಗಳು ಹೇಳೋದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.