ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು: ವಿಜಯೇಂದ್ರ - B Y Vijayendra - B Y VIJAYENDRA

ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ನಿಗಮ ಹಗರಣ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಕೆಲವು ಅಂಕಿ-ಅಂಶಗಳನ್ನು ನೀಡಿದ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ, ಸಿಎಂ ರಾಜೀನಾಮೆಗೆ ಒತ್ತಾಯಿಸಿದರು.

BY Vijayendra Seeks CM Resignation
ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ (ETV Bharat)
author img

By ETV Bharat Karnataka Team

Published : Jul 17, 2024, 7:25 AM IST

ಬೆಂಗಳೂರು: ಕೊಲೆ ಮಾಡುವುದು ಎಷ್ಟು ಅಪರಾಧವೋ ಕೊಲೆ ಮಾಡುತ್ತಿರುವುದನ್ನು ನೋಡುವುದೂ ಅಷ್ಟೇ ದೊಡ್ಡ ಅಪರಾಧ. ಹಾಗಾಗಿ ವಾಲ್ಮೀಕಿ ನಿಗಮ ಹಗರಣ ಅಕ್ರಮದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ವಾಲ್ಮೀಕಿ ನಿಗಮದ ಹಗರಣ ಕುರಿತ ಚರ್ಚೆಯ ವೇಳೆ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಇಲ್ಲ. ಉತ್ತಮ ಆಡಳಿತ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ. 2022-23ನೇ ಸಾಲಿನಲ್ಲಿ ದೇವರಾಜ್ ಅರಸ್ ನಿಗಮಕ್ಕೆ 190 ಕೋಟಿ ಮಿಸಲಿಟ್ಟಿದ್ದೀರಿ. ವೆಚ್ಚ ಆಗಿರೋದು 145 ಕೋಟಿ ರೂ. ಮರಾಠ ನಿಗಮದಲ್ಲಿ 100 ಕೋಟಿ ರೂ. ಹಂಚಿದ್ದರೆ, ವೆಚ್ಚ ಆಗಿದ್ದು 70 ಕೋಟಿ ರೂ., ವಿಶ್ವಕರ್ಮ ಸಮುದಾಯಕ್ಕೆ 20 ಕೋಟಿ ರೂ.‌ ಹಂಚಿಕೆಯಾಗಿದ್ದರೆ, ವೆಚ್ಚ ಆಗಿರುವುದು 14 ಕೋಟಿ ರೂ. ಅಂಬಿಗರ ನಿಗಮಕ್ಕೆ 14 ಕೋಟಿ ಮೀಸಲಿಟ್ಟಿದ್ದರೆ, ವೆಚ್ಚ ಆಗಿರುವುದು 9 ಕೋಟಿ ರೂ., ವೀರಶೈವ ನಿಗಮಕ್ಕೆ 100 ಕೋಟಿ ರೂ. ಹಂಚಿಕೆಯಾಗಿದ್ದರೆ, ವೆಚ್ಚ ಆಗಿರುವುದು 13 ಕೋಟಿ ಮಾತ್ರ ಎಂದು ತಿಳಿಸಿದರು.

ಯಾವುದೇ ರಾಜಕೀಯಕ್ಕಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ವಿಚಾರ ಸದನದಲ್ಲಿ ಪ್ರಸ್ತಾಪಿಸಿಲ್ಲ. ಈ ಹಗರಣದಲ್ಲಿ ಅಧಿಕಾರಿಗಳು, ಸಚಿವರು ಮತ್ತು ಶಾಸಕರ ಹೆಸರು ಕೂಡ ಕೇಳಿ ಬರ್ತಿದೆ. ಅನುಭವಿ ಸಿಎಂ ರಾಜ್ಯದಲ್ಲಿದ್ದಾಗ, ಅವರು ಹಣಕಾಸಿನ ಇಲಾಖೆ ನಿರ್ವಹಣೆ ಮಾಡುತ್ತಿದ್ದಾರೆ. ಹಗರಣ ಬಗ್ಗೆ ಗೊತ್ತಿಲ್ಲ ಅಂತ ಹೇಳಿದ್ರೆ ಹೇಗೆ?. ಇದು ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮೋಸ ಮಾಡ್ತಿದ್ದಾರೆ ಅನಿಸುತ್ತೆ. ಚಂದ್ರಶೇಖರ್ ಎಂಬ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ತಾರೆ. ಸಚಿವರು, ಶಾಸಕರ ಪಾತ್ರ ಇಲ್ಲ ಅಂತ ಸಿಎಂ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಡಿಸಿಎಂ ಸದನದಲ್ಲೂ ಹೇಳಿದ್ರು. ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡಿದ್ರು. ಇದು ರಾಜ್ಯ ಸರ್ಕಾರ ದಲಿತರಿಗೆ ಮಾಡಿರೋ ಅನ್ಯಾಯ. ಹೊಸ ಸರ್ಕಾರ ಬಂದ ಬಳಿಕ 187 ಕೋಟಿ ಹಣ ಹೊರ ರಾಜ್ಯಕ್ಕೆ ಕಳಿಸಿದ್ದಾರೆ. ಹಂತ ಹಂತವಾಗಿ ಕೋಟಿಗಟ್ಟಲೆ ಹಣ ವರ್ಗಾವಣೆ ಮಾಡ್ತಾರೆ. ರಾಜ್ಯ ಖಜನೆಯಿಂದಲೂ ಹಣ ವರ್ಗಾವಣೆ ಆಗಿದೆ. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ, ನೂರಾರು ಕೋಟಿ ಹಣ ಹೊರರಾಜ್ಯಕ್ಕೆ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿದ ಮರುಕ್ಷಣ ಎಸ್​ಐಟಿ ರಚನೆ ಮಾಡಿದ್ದರೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆವು. ಆದರೆ, ಸಿಬಿಐ ಎಫ್​​ಐಆರ್ ಹಾಕಿದ ಮೇಲೆ ಎಸ್​ಐಟಿ ರಚನೆ ಮಾಡುತ್ತಾರೆ. ಸಚಿವರನ್ನು, ಶಾಸಕರನ್ನು ರಕ್ಷಣೆ ಮಾಡುವ ಕೆಲಸ ಆಗುತ್ತಿದೆ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ ಮೊದಲಿನಂತೆ ಖಡಕ್ ಆಗಿಲ್ಲ: ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಮೊದಲ ಅಧಿಕಾರಾವಧಿಯಲ್ಲಿ ಖಡಕ್ ಆಗಿದ್ದಿರಿ.‌ ಆದರೆ, ಈ ಅವಧಿಯಲ್ಲಿ ಜಾಳ್ ಜಾಳ್ ಆಗಿದ್ದೀರಿ. ಬಹುಶಃ ಎರಡೂವರೆ ವರ್ಷ ಸಿಎಂ ಆಗಿರುತ್ತೇನೆ. ಹೀಗಾಗಿ ಎಲ್ಲರ ಜೊತೆಗೂ ಚೆನ್ನಾಗಿರೋಣ ಎಂಬ ಭಾವನೆ ಸಿಎಂ ಅವರಲ್ಲಿ ಇರಬಹುದು. ನಿಮ್ಮ‌ ಆಡಳಿತ ಶಿಥಿಲಾವಸ್ಥೆಗೆ ಬಂದಿದೆ ಅನ್ನಿಸುತ್ತೆ. ಸರ್ಕಾರದ ನೇತೃತ್ವ ವಹಿಸಿರುವವರು ನೀವು ಕೈಚೆಲ್ಲಿದರೆ ಹೇಗೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ವಾಲ್ಮೀಕಿ ನಿಗಮದ ಅಕ್ರಮ ಕುರಿತ ಚರ್ಚೆ: ಆಡಳಿತ ಪಕ್ಷದ ಜೊತೆ ಸ್ವಪಕ್ಷೀಯರಿಗೂ ತಿವಿದ ಯತ್ನಾಳ್ - valmiki corporation scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.