ಕಾರವಾರ(ಉತ್ತರ ಕನ್ನಡ): ಆಟವಾಡುತ್ತಿದ್ದಾಗ ಮೈಮೇಲೆ ಕಬ್ಬಿಣದ ಗೇಟ್ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಸಾವನ್ನಪ್ಪಿದ ಘಟನೆ ಅಂಕೋಲಾ ತಾಲೂಕಿನ ಕನಸೆಗದ್ದೆಯಲ್ಲಿ ನಡೆದಿದೆ.
ಆಜಾನ ಜಾವೀದ ಶೇಖ್(6) ಮೃತಪಟ್ಟ ಮಗು. ಪಟ್ಟಣದ ಉರ್ದು ಮಾಧ್ಯಮದ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಮಗು, ಮನೆಯೆದುರಿನ ಗೇಟ್ನಲ್ಲಿ ತನ್ನ ಸಹಪಾಠಿಗಳೊಂದಿಗೆ ಆಟ ಆಡುತ್ತಿದ್ದಾಗ ಗೇಟ್ಗೆ ಅಳವಡಿಸಿದ್ದ ಲಾಕ್ ತುಂಡಾಗಿ ಬಿದ್ದಿದೆ.
ಗಾಯಗೊಂಡ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಹೊನ್ನಾವರ ಸಮೀಪ ಸಾವನ್ನಪ್ಪಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕೋಡಿ: ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ಮಗು ಸಾವು - child died