ETV Bharat / state

ತಿಂಗಳ ಹಿಂದೆ ಸಸ್ಪೆಂಡ್‌ ಆಗಿದ್ದ ಹೆಡ್‌ ಕಾನ್ಸ್​ಟೇಬಲ್​ಗೆ ಮುಖ್ಯಮಂತ್ರಿಗಳ ಪದಕ! - Medal For Suspended Head Constable

author img

By ETV Bharat Karnataka Team

Published : Aug 15, 2024, 6:24 PM IST

Updated : Aug 15, 2024, 7:28 PM IST

ಕರ್ನಾಟಕ ಸರ್ಕಾರ ಪ್ರಕಟಿಸಿದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸೇವಾ ಪದಕ ವಿಜೇತರ ಪಟ್ಟಿಯಲ್ಲಿ ಅಮಾನತಾದ ಹೆಡ್‌ ಕಾನ್ಸ್​ಟೇಬಲ್ ಒಬ್ಬರ ಹೆಸರೂ ಕೂಡಾ ಪ್ರಕಟವಾಗಿದ್ದು ಚರ್ಚೆಗೀಡು ಮಾಡಿದೆ.

Mysuru: Chief Minister's medal for suspended head constable
ಸಂಗ್ರಹ ಚಿತ್ರ (ETV Bharat)

ಮೈಸೂರು: 2023ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪಟ್ಟಿ ಪ್ರಕಟವಾಗಿದೆ. ಕಳೆದ ತಿಂಗಳು ಪ್ರಕರಣವೊಂದರ ಆರೋಪದಡಿ ಅಮಾನತಾದ ಸಿಸಿಬಿ ಘಟಕದ ಹೆಡ್‌ ಕಾನ್ಸ್​ಟೇಬಲ್​ ಸಲೀಂ ಪಾಷಾ ಎಂಬವರ ಹೆಸರು ಈ ಪಟ್ಟಿಯಲ್ಲಿರುವುದು ಅಚ್ಚರಿ ತರಿಸಿದೆ.

ಮೈಸೂರು ಸಿಸಿಬಿ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಲೀಂ ಪಾಷಾ ಅವರನ್ನು ಅಪರಾಧಿಗಳೊಂದಿಗೆ ಶಾಮೀಲಾದ ಆರೋಪದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅಮಾನತು ಮಾಡಲಾಗಿತ್ತು.

Mysuru: Chief Minister's medal for suspended head constable
ಅಮಾನತು ಆದೇಶ ಪ್ರತಿ (Karnataka Police Department)

ಗಂಭೀರ ಆರೋಪದಡಿ ಸಸ್ಪೆಂಡ್: ಸಲೀಂ ಪಾಷಾ ನಗರದ ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಕಳ್ಳತನ ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಹೊಂದಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಅಲ್ಲದೇ ಇಲಾಖೆಯ ಆಂತರಿಕ ವಿಚಾರಗಳ ಸೋರಿಕೆ, ಪೊಲೀಸ್​ ಇಲಾಖೆಯಲ್ಲಿ ವಶಪಡಿಸಿಕೊಂಡ ಸ್ವತ್ತುಗಳು ಕಾಣೆಯಾದ ಹಿನ್ನೆಲೆಯಲ್ಲಿ ಪಾಷ ಅವರನ್ನು ಕಳೆದ ತಿಂಗಳು ನಗರ ಪೊಲೀಸ್​ ಆಯುಕ್ತರ ಆದೇಶದ ಮೇರೆಗೆ ಅಮಾನತು ಮಾಡಲಾಗಿದೆ.

ಈ ಬಗ್ಗೆ 'ಈಟಿವಿ ಭಾರತ' ಪ್ರತಿನಿಧಿ ಮಾಹಿತಿ ಪಡೆಯಲು ನಗರ ಪೊಲೀಸ್​ ಕಮಿಷನರ್‌ ಸೀಮಾ ಲಾಟ್ಕರ್‌ ಅವರನ್ನು ಸಂಪರ್ಕಿಸಿದ್ದು, ಅವರು ದೂರವಾಣಿ ಕರೆ ಸ್ವೀಕರಿಸಲಿಲ್ಲ.

ಇದನ್ನೂ ಓದಿ: ರಾಜ್ಯದ 24 ಮಂದಿ ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ - President Medal

Last Updated : Aug 15, 2024, 7:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.