ETV Bharat / state

ಆಧಾರ್ ನೈಜತೆ ಪರಿಶೀಲಿಸಿ ನೋಂದಣಿ ಕಾರ್ಯ ನಡೆಸಿ: ಹೈಕೋರ್ಟ್ - ಹೈಕೋರ್ಟ್

ಯಾವುದೇ ಆಸ್ತಿ ಮಾರಾಟ ಸೇರಿದಂತೆ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮುನ್ನ ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ನೈಜತೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

Aadhaar authenticity  High Court  ಹೈಕೋರ್ಟ್  ಆಧಾರ್
ಹೈಕೋರ್ಟ್
author img

By ETV Bharat Karnataka Team

Published : Jan 20, 2024, 7:20 AM IST

ಬೆಂಗಳೂರು: ಯಾವುದೇ ಆಸ್ತಿ ಮಾರಾಟ ಅಥವಾ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮುನ್ನ ಆ ದಾಖಲೆಗಳನ್ನು ಸಲ್ಲಿಸುವ ವ್ಯಕ್ತಿಯ ಆಧಾರ್ ನೈಜತೆಯನ್ನು ಪರಿಶೀಲನೆ ನಡೆಸಬೇಕು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾನಿರ್ದೇಶಕರಿಗೆ ಹೈಕೋರ್ಟ್​ ಆದೇಶ ನೀಡಿದೆ.

ಅನಾಮಧೇಯ ವ್ಯಕ್ತಿ ಮಾರಾಟ ಮಾಡಿದ್ದಾರೆಂಬ ಆಧಾರದ ಮೇಲೆ ತಮ್ಮ ಭೂಮಿಯ ಖುಣಭಾರ ಪತ್ರದಲ್ಲಿ (ಇಸಿ) ನೋಂದಾಯಿಸಿರುವ ಹೆಸರು ತೆಗೆಯುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಿದ್ದ ಸಬ್ ರಿಜಿಸ್ಟ್ರಾರ್ ಕ್ರಮ ಪ್ರಶ್ನಿಸಿ ರಾಜೇಶ್ ತಿಮ್ಮಣ್ಣ ಉಮಾರಾಣಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಆಧಾರ್ (ನಿರ್ದಿಷ್ಟ ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ವಿತರಣೆ) ಕಾಯಿದೆ 2016 ರ ಪ್ರಕಾರ ಯುಐಡಿಎಐನೊಂದಿಗೆ ನೋಂದಣಿ ಮಾಡಿಕೊಂಡಿರುವ ಯಾವುದೇ ಸೇವಾ ಪೂರೈಕೆದಾರರು ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಅದರ ನೈಜತೆಯನ್ನು ಪರಿಶೀಲಿಸಬೇಕು ಎಂದು ಪೀಠ ತಿಳಿಸಿದೆ.

ಆಧಾರ್ ಕಾಯಿದೆ 2016 ರ ಅನ್ವಯ ಇನ್ಸಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಯುಐಎಡಿಐ ಜತೆ ನೋಂದಾಯಿಸಿಕೊಳ್ಳಬೇಕು. ಆನಂತರ ಯಾವುದೇ ವ್ಯಕ್ತಿ ನಿವೇಶನ ಅಥವಾ ಮನೆ ಮಾರಾಟ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಆಗಮಿಸಿದಾಗ ಅವರು ನೀಡಿರುವ ಆಧಾರ್‌ನ ನೈಜತೆ ಪರಿಶೀಲಿಸಬೇಕು ಮತ್ತು ಆ ರೀತಿ ಪರಿಶೀಲನೆ ನಡೆಸಿದ ನಂತರವೇ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿದೆ.

ದಾಖಲೆ ನಕಲು ಮಾಡಿ ಭೂಮಿ ಮಾರಾಟ ಮಾಡಿದ್ದಾರೆಂದು ಆರೋಪಿಸಲಾದ ರಮೇಶ್ ಎಂಬ ವ್ಯಕ್ತಿ ನೋಂದಣಿ ವೇಳೆ ಆಧಾರ್ ದಾಖಲೆ ಸಲ್ಲಿಸಿದ್ದು, ಅದನ್ನು ಅಧಿಕೃತ ದಾಖಲೆ ಅಥವಾ ಗುರುತಿನ ಚೀಟಿ ಎಂದು ಪರಿಗಣಿಸಿ ಉಪ ನೋಂದಣಾಧಿಕಾರಿ ನೋಂದಣಿ ಮಾಡಿದ್ದಾರೆ. ಆದರೆ ಆಧಾರ್ ನೈಜತೆಯನ್ನು ಪರಿಶೀಲಸದೇ ಇರುವುದರಿಂದ ವ್ಯಾಜ್ಯಕ್ಕೆ ಕಾರಣವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ಅರ್ಜಿದಾರರು ಅರೆ ನ್ಯಾಯಿಕ ಪ್ರಾಧಿಕಾರದ ಮುಂದೆ ಹೋಗಿ ಕ್ರಯ ಒಪ್ಪಂದವನ್ನು ರದ್ದುಗೊಳಿಸುವಂತೆ ಕೋರಬಹುದಾಗಿದೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನಾನು ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.