ರಾಮನಗರ: ಚನ್ನಪಟ್ಟಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಇಂದು ನಾಮಪತ್ರ ಸಲ್ಲಿಸಿದ್ದು, ಇದೇ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ. 27,94,06,412 ರೂ ಮೌಲ್ಯದ ಸ್ಥಿರಾಸ್ತಿ ಹಾಗೂ 7,25,20,470 ರೂ. ಮೌಲ್ಯದ ಚರಾಸ್ತಿ ಸೇರಿದಂತೆ ಒಟ್ಟು 70 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇವರು ಹೊಂದಿದ್ದಾರೆ.
ಪತ್ನಿ ಶೀಲಾ ಅವರ ಹೆಸರಲ್ಲಿ 25,35,37,740 ಮೌಲ್ಯದ ಸ್ಥಿರಾಸ್ತಿ, 7,10,80,556 ರೂ. ಮೌಲ್ಯದ ಚರಾಸ್ತಿ ಇದೆ. ಯೋಗೇಶ್ವರ್ ಹೆಸರಲ್ಲಿ 22,02,47,157 ರೂ. ಮತ್ತು ಶೀಲಾ ಹೆಸರಿನಲ್ಲಿ 2,14,52,740 ರೂ. ಮೌಲ್ಯದ ಕೃಷಿ ಭೂಮಿ ಇದೆ.
ಶೀಲಾ ಹೆಸರಿನಲ್ಲಿ 6.65 ಕೋಟಿ ರೂ ಮೌಲ್ಯದ ಕೃಷಿಯೇತರ ಭೂಮಿ ಇದೆ. ಯೋಗೇಶ್ವರ್ ಹೆಸರಿನಲ್ಲಿ 2,37,62,000 ರೂ. ಮತ್ತು ಶೀಲಾ ಹೆಸರಿನಲ್ಲಿ 15.45 ಕೋಟಿ ರೂ ಮೌಲ್ಯದ ಮನೆಗಳಿವೆ.
ಸಾಲದ ವಿವರ: ಯೋಗೇಶ್ವರ್ ಹೆಸರಲ್ಲಿ 25,86,31,284 ರೂ. ಸಾಲ ಇದೆ. ಪತ್ನಿ ಹೆಸರಿನಲ್ಲಿ 3,41,42,184 ರೂ. ಸಾಲವಿದೆ.
250 ಗ್ರಾಂ ಚಿನ್ನಾಭರಣವನ್ನು ಯೋಗೇಶ್ವರ್ ಹೊಂದಿದ್ದಾರೆ. ಶೀಲಾ ಬಳಿ 1 ಕೆ.ಜಿ 500 ಗ್ರಾಂ ಚಿನ್ನಾಭರಣ, 20 ಕೆ.ಜಿ ಬೆಳ್ಳಿ ಇದೆ. ಸಾರ್ವಜನಿಕರಿಂದ 1 ಕೆ.ಜಿ ಚಿನ್ನ, 50 ಕೆ.ಜಿ ಬೆಳ್ಳಿಯನ್ನು ಶೀಲಾ ಉಡುಗೊರೆಯಾಗಿ ಸ್ವೀಕರಿಸಿದ್ದಾರೆ.
ಯೋಗೇಶ್ವರ್ ಬಳಿ ಒಂದು ಮರ್ಸಿಡಿಸ್ ಬೆಂಜ್ ಮತ್ತು ಬಿಎಂಡಬ್ಲೂ ಕಾರು ಇದೆ. ಇವರ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಸಿಎಂ, ಡಿಸಿಎಂ ನೇತೃತ್ವದಲ್ಲಿ ಬೃಹತ್ ಮೆರವಣಿಗೆ: ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆ