ETV Bharat / state

'ಚಾಮುಂಡೇಶ್ವರಿ ದೇವಾಲಯ ಪ್ರಾಧಿಕಾರದಲ್ಲಿ ತೀರ್ಮಾನ ಕೈಗೊಳ್ಳುವ ಮುನ್ನ ಕೋರ್ಟ್‌ ಅನುಮತಿ ಕಡ್ಡಾಯ'

ಅರ್ಜಿ ಇತ್ಯರ್ಥವಾಗುವವರೆಗೆ ಚಾಮುಂಡೇಶ್ವರಿ ದೇವಾಲಯದ ಚರ, ಸ್ಥಿರಾಸ್ತಿಗಳನ್ನು ಪ್ರಾಧಿಕಾರ ವಿಲೇವಾರಿ ಮಾಡುವಂತಿಲ್ಲ ಎಂದು ಹೈಕೋರ್ಟ್‌ ತಿಳಿಸಿದೆ.

chamundeshwari-development-authority-case-highcourt-hearing-on-temple-property
ಹೈಕೋರ್ಟ್​​ (ETV Bharat)
author img

By ETV Bharat Karnataka Team

Published : Oct 16, 2024, 5:33 PM IST

ಬೆಂಗಳೂರು: ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ದೇವಾಲಯದ ನಿರ್ವಹಣೆಗಾಗಿ ರೂಪಿಸಲಾಗಿರುವ ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾಯಿದೆ ಸೆಕ್ಷನ್‌ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೈಕೋರ್ಟ್‌ ಇಂದು ಮಧ್ಯಂತರ ಆದೇಶ ನೀಡಿತು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 2024 ಅನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿ ದಿವಂಗತ ಶ್ರೀಕಂಠ ದತ್ತ ಒಡೆಯರ್‌ ಅವರ ಪತ್ನಿ ಪ್ರಮೋದಾ ದೇವಿ ಒಡೆಯರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೇಮಂತ್‌ ಚಂದನ್‌ಗೌಡರ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿತು.

ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಗಣಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ದೇವಾಲಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಪ್ರಾಧಿಕಾರ ವಿಲೇವಾರಿ ಮಾಡುವಂತಿಲ್ಲ. ಹಾಲಿ ದೇವಾಲಯದಲ್ಲಿ ಜಾರಿಯಲ್ಲಿರುವ ಸಂಪ್ರದಾಯದಲ್ಲಿ ಬದಲಾವಣೆ ಅಥವಾ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದೆ.

ಅಲ್ಲದೆ, ಪ್ರಾಧಿಕಾರ ಕಾಯಿದೆ ಸೆಕ್ಷನ್‌ 16 ಅಥವಾ 17ರ ಅಡಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯದ ಅನುಮತಿ ಪಡೆಯಬೇಕು. ಅರ್ಜಿ ವಿಲೇವಾರಿ ಬಾಕಿ ಇರುವಾಗ ರಾಜ್ಯ ಸರ್ಕಾರ ನಿಯಮ ರೂಪಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಸಭೆಯಲ್ಲಿ ಭಾಗವಹಿಸುವಂತೆ ಪ್ರಮೋದಾ ದೇವಿ ಅವರಿಗೆ ಪ್ರಾಧಿಕಾರ ನೋಟಿಸ್‌ ನೀಡಬೇಕು. ಅವರು ಸಭೆಯಲ್ಲಿ ಭಾಗವಹಿಸದಿದ್ದರೆ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಸ್ವತಂತ್ರವಾಗಿರುತ್ತದೆ ಎಂದು ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದಾಸ್, ಪ್ರಾಧಿಕಾರದ ಸೆಕ್ಷನ್‌ 17ರ ಅನ್ವಯ ಯಾವುದೇ ರೀತಿಯಲ್ಲೂ ಅರ್ಜಿದಾರರ ಹಕ್ಕುಗಳಿಗೆ ಅಡ್ಡಿ ಮಾಡುವುದಿಲ್ಲ. ಸೆಕ್ಷನ್‌ 16ರ ಅನ್ವಯ ಎಲ್ಲರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ನೋಟಿಸ್‌ ನೀಡಲಾಗುತ್ತದೆ. ಇಲ್ಲಿ ಪ್ರಾಧಿಕಾರದ ಅಧ್ಯಕ್ಷರು (ಮುಖ್ಯಮಂತ್ರಿ) ನಿರ್ಣಯ ಕೈಗೊಂಡರೂ ಅದು ಸಚಿವ ಸಂಪುಟದ ತೀರ್ಮಾನಕ್ಕೆ ಒಳಪಡುತ್ತದೆ. ಪ್ರಾಧಿಕಾರ ಅಥವಾ ಸಿಎಂ ಸೆಕ್ಷನ್‌ 17ರ ಅನ್ವಯ ಯಾವುದೇ ಅಧಿಕಾರ ಚಲಾಯಿಸಿಲ್ಲ. ಹೀಗಿರುವಾಗ ಅರ್ಜಿದಾರರಿಗೆ ಸಮಸ್ಯೆಯಾದರೆ ಅವರು ಅರ್ಜಿ ಸಲ್ಲಿಸಬಹುದು ಎಂದು ಪೀಠಕ್ಕೆ ವಿವರಿಸಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿ. ಅಲ್ಲಿ ಯಾವುದೇ ಅಭಿಪ್ರಾಯಭೇದವಿದ್ದರೆ ಅದು ಸಂಪುಟಕ್ಕೆ ಹೋಗುತ್ತದೆ. ಒಂದೊಮ್ಮೆ ಪ್ರಾಧಿಕಾರದ ಸದಸ್ಯರ ನಡುವೆ ಅಭಿಪ್ರಾಯ ಭೇದ ಉಂಟಾದರೆ ಅದನ್ನು ಮುಖ್ಯಮಂತ್ರಿ ನಿರ್ಧರಿಸಬಾರದು ಎಂಬುದಾಗಿ ನ್ಯಾಯಪೀಠ ಆದೇಶಿಸಬೇಕು. ಅದಕ್ಕೆ ನ್ಯಾಯಪೀಠ, ಮುಖ್ಯಮಂತ್ರಿಯವರು ಸಂಪುಟದ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು. ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಆದೇಶಿಸಲಾಗುವುದು ಎಂದಿತು.

ಇದಕ್ಕೊಪ್ಪಿದ ಅರ್ಜಿದಾರರ ಪರ ವಕೀಲರು, ದೇವಸ್ಥಾನದ ರಚನೆ ಮತ್ತು ಬೆಟ್ಟಕ್ಕೆ ಯಾವುದೇ ಪ್ರಮುಖವಾದ ರಚನಾತ್ಮಕ ಬದಲಾವಣೆ ಮಾಡಬಾರದು. ಏಕೆಂದರೆ ಈಗಾಗಲೇ ಸಾಕಷ್ಟು ಸಮಸ್ಯೆಯಾಗಿದೆ. ನೀತಿಯ ಬದಲಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಬರಲು ನಮಗೆ ಅನುಮತಿಸಬೇಕು. ಹಣಕಾಸಿನ ಹೊಣೆಗಾರಿಕೆಯ ಬಗ್ಗೆ ನಿಗದಿತವಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಕೋರಿದರು.

ಅಲ್ಲದೆ, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಾಧಿಕಾರವನ್ನು ವಿಸರ್ಜಿಸಬಾರದು. ಒಮ್ಮೆ ಪ್ರಾಧಿಕಾರ ವಿಸರ್ಜನೆಯಾದರೆ ನಮ್ಮ ಸ್ಥಾನ ಹೋಗುತ್ತದೆ. ಸೆಕ್ಷನ್‌ 16ರ ಅನ್ವಯ ಪ್ರಾಧಿಕಾರದ ಸದಸ್ಯರ ನಡುವೆ ಒಮ್ಮತ ಮೂಡದಿದ್ದರೆ ನ್ಯಾಯಾಲಯದ ಅನುಮತಿ ಇಲ್ಲದೇ ನಿರ್ಧಾರ ಕೈಗೊಳ್ಳುವಂತಿಲ್ಲ. ದೇವಸ್ಥಾನ ಮತ್ತು ಬೆಟ್ಟದ ಸ್ಥಿರ ಮತ್ತು ಚರಾಸ್ತಿಯನ್ನು ಬದಲಾಯಿಸಬಾರದು. ಸೆಕ್ಷನ್‌ 40ರ ಅನ್ವಯ ಸಂಪ್ರದಾಯ ಮತ್ತು ವಿಧಿ-ವಿಧಾನಗಳಿಗೆ ಬದಲಾವಣೆ ಮಾಡಬಾರದು. ದೇವಸ್ಥಾನದ ಖರ್ಚು-ವೆಚ್ಚದ ದಾಖಲೆ ಪರಿಶೀಲಿಸಲು ಪ್ರಾಧಿಕಾರದ ಕಾಯಂ ಸದಸ್ಯರಿಗೆ ಅನುಮತಿಸಬೇಕು ಎಂದು ಮನವಿ ಮಾಡಿದರು.

ವಾದ, ಪ್ರತಿವಾದ ಆಲಿಸಿದ ಬಳಿಕ ಪೀಠ ಮುಂದಿನ ವಿಚಾರಣೆಯನ್ನು ನವೆಂಬರ್‌ 22ಕ್ಕೆ ಮುಂದೂಡಿತು.

ಇದನ್ನೂ ಓದಿ: ಮುಸ್ಲಿಂರ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುವ ಅಧಿಕಾರ ವಕ್ಫ್​ ಮಂಡಳಿಗೆ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.