ETV Bharat / state

ಸಿಎಂಗೆ ಯಾರ‍್ಯಾರನ್ನು ಯಾವ್ಯಾವ ರೀತಿ ಸಂಬೋಧಿಸಬೇಕೆಂದು ನಾನೇ ಹೇಳಿ ಕೊಡುವೆ: ಛಲವಾದಿ ನಾರಾಯಣಸ್ವಾಮಿ - ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

ರಾಷ್ಟ್ರಪತಿ ವಿರುದ್ಧ ಏಕವಚನ ಪದ ಬಳಕೆ ವಿಚಾರಕ್ಕೆ ಸಿಎಂ ವಿರುದ್ಧ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

author img

By ETV Bharat Karnataka Team

Published : Jan 29, 2024, 7:41 PM IST

Updated : Jan 29, 2024, 11:04 PM IST

ಛಲವಾದಿ ನಾರಾಯಣಸ್ವಾಮಿ ಹೇಳಿಕೆ

ಬೆಂಗಳೂರು: ರಾಷ್ಟ್ರಪತಿ ಅವರನ್ನು ಅವಮಾನ ಮಾಡಿದ ಸಿಎಂ ಸಿದ್ದರಾಮಯ್ಯ ಈ ದೇಶದ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದು, ಸಿದ್ದರಾಮಯ್ಯ ತಮ್ಮ ಕೆಟ್ಟ ಭಾಷೆ ಬದಲಿಸಲು ಟೀಚರ್ ಇಟ್ಟುಕೊಳ್ಳಲಿ ಅಥವಾ ನಾನೇ ಟೀಚರ್ ಆಗಿ ಬರುವೆ ಎಂದು ವಾಗ್ದಾಳಿ ನಡೆಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಿನ್ನೆ ಅಹಿಂದ ಹೆಸರಿನಲ್ಲಿ ಕರೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳಾದ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದು ಖಂಡನೀಯ, ಒಬ್ಬ ದಲಿತ ಮಹಿಳೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಇಷ್ಟೊಂದು ಕೀಳಾಗಿ ಅವರನ್ನು ಸಂಬೋಧಿಸಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಸರಿಯಾದ ಪದಗಳಲ್ಲ. ಅದಾದ ಬಳಿಕವೂ ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಹಿರಿಯರನ್ನು ಹಳ್ಳಿ ಭಾಷೆಯಲ್ಲಿ ಹಾಗೇ ಕರೆಯುವುದಾಗಿ ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ ಹಳ್ಳಿಯ ಜನರನ್ನೂ ಅವರು ಅಪಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಯಾವ ಹಳ್ಳಿ ಜನರು, ಬಡವರು ಯಾರೇ ಇದ್ದರೂ ಕೂಡ ಯಾವತ್ತೂ ಯಾರನ್ನು ಕೇವಲವಾಗಿ ಅಥವಾ ಏಕವಚನದಲ್ಲಿ ಸಂಬೋಧಿಸುವುದಿಲ್ಲ ಎಂದು ವಿಶ್ಲೇಷಿಸಿದರು. ಹಳ್ಳಿ ಜನರು ಹಿರಿಯರ ಬಗ್ಗೆ ಗೌರವದಿಂದಲೇ ಮಾತನಾಡುತ್ತಾರೆ, ಮುಖ್ಯಮಂತ್ರಿಗಳು ಯಾಕೆ ಇಷ್ಟು ಸುಳ್ಳುಗಳನ್ನು ಹೇಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ನೀವು ಹಿರಿಯರನ್ನು ಹೋಗೋ ಬಾರೋ ಅನ್ನುವುದಾದರೆ, ಅವಳು ಇವಳು ಎಂಬ ಭಾಷೆ ಪ್ರಯೋಗ ಮಾಡುವುದೇ ಆದರೆ, ಸೋನಿಯಾ ಗಾಂಧಿಯವರು ಹಿರಿಯರಲ್ಲವೇ? ಎಷ್ಟು ಸಾರಿ ನೀವು ಸೋನಿಯಾ ಗಾಂಧಿಯವರನ್ನು ಅವಳು, ಇವಳು ಎಂದು ಮಾತನಾಡಿದ್ದೀರಿ ಎಂದು ಕೇಳಿದರು.

ಸಿದ್ದರಾಮಯ್ಯನವರು ಶಿಕ್ಷರೊಬ್ಬರನ್ನ ಇಟ್ಟುಕೊಳ್ಳಲಿ: ಸಿದ್ದರಾಮಯ್ಯನವರು ತಮ್ಮ ಕೆಟ್ಟ ಭಾಷೆಯನ್ನು ಬದಲಿಸಲು ಟೀಚರ್​​ವೊಬ್ಬರನ್ನು ಇಟ್ಟುಕೊಳ್ಳಲಿ. 'ನೋಡಿ ಬೇಕಾದರೆ ನಾನೇ ಬರುವೆ' ಎಂದ ಛಲವಾದಿ ನಾರಾಯಣಸ್ವಾಮಿ ಯಾರ‍್ಯಾರನ್ನು ಯಾವ್ಯಾವ ರೀತಿ ಸಂಬೋಧಿಸಬೇಕೆಂದು ಹೇಳಿ ಕೊಡುವೆ ಎಂದು ಟಕ್ಕರ್ ಕೊಟ್ಟರು.

ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಬಗ್ಗೆ ಎಷ್ಟು ಸಾರಿ ನೀವು ಅವನು, ಇವನು ಎಂದು ಮಾತನಾಡಿದ್ದೀರಿ? ರಾಹುಲ್ ಗಾಂಧಿಯವರನ್ನು ಎಷ್ಟು ಸಾರಿ ನೀವು ಈ ರೀತಿ ಕರೆದಿದ್ದೀರಿ, ಮಾನ್ಯ ಖರ್ಗೆಜೀ ಅವರ ಬಗ್ಗೆ ಎಷ್ಟು ಸಾರಿ ನೀವು ಈ ರೀತಿ ಮಾತನಾಡಿದ್ದೀರಿ? ನಿದರ್ಶನ ಬೇಕಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

ಇವತ್ತು ರಾಜ್ಯ ಹೊತ್ತಿ ಉರಿಯುತ್ತಿದೆ. ಕೆರಗೋಡಿನಲ್ಲಿ ಈ ಪರಿಸ್ಥಿತಿ ಇದೆ. ಈ ದೇಶದಲ್ಲಿ ಭಾರತದ ಧ್ವಜ ಹಾರಿಸಲು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿದ್ದೀರಾ? ಕಂಬ 108 ಅಡಿ ಇದೆ. ಆ ಕಂಬದಲ್ಲಿ ಮುಕ್ಕಾಲು ಭಾಗದಲ್ಲಿ ಧ್ವಜ ಹಾರಿಸಿದ್ದಾರೆ. ಇದರ ಅರ್ಥ ಏನು? ನೀವು ಯಾರನ್ನು ಓಲೈಸಲು ಈ ರೀತಿ ಮಾಡುತ್ತಿದ್ದೀರಿ? ಪೊಲೀಸರು ಬೂಟುಗಾಲಿನಲ್ಲೇ ಸಂಜೆ 3 ಗಂಟೆಗೆ ಧ್ವಜ ಹಾರಿಸಿದ್ದಾರೆ. ಏನು ನಿಯಮಗಳು ಗೊತ್ತಿದೆಯೇ ನಿಮಗೆ? ಎಂದು ಖಾರವಾಗಿ ಪ್ರಶ್ನೆ ಮುಂದಿಟ್ಟರು. ಹನುಮಧ್ವಜ ಇಳಿಸಿದ್ದಕ್ಕೆ ಜನರು ನಿಮಗೆ ಉತ್ತರ ಕೊಡುತ್ತಾರೆ ಎಂದು ನುಡಿದರು.

ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ದಲಿತರಿಗೆ ಮೀಸಲಾತಿ ಕೊಟ್ಟು ಸಂವಿಧಾನ ಜಾರಿ ಮಾಡಿದವರನ್ನು ಸಂವಿಧಾನ ವಿರೋಧಿ ಎನ್ನುತ್ತೀರಾ? ದಲಿತರಿಗೆ ಅಲ್ಲಿ 370 ರದ್ದು ಮಾಡುವವರೆಗೆ ಮೀಸಲಾತಿ ಸಿಕ್ಕಿರಲಿಲ್ಲ. ಮೀಸಲಾತಿ ಕೊಡಿಸಿದ್ದು ಮೋದಿ ಅವರು ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಬಾಯಲ್ಲಿ ರಾಷ್ಟ್ರಪತಿ ಬಗ್ಗೆ ಅಗೌರವದ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ: ಬಿ ವೈ ವಿಜಯೇಂದ್ರ

Last Updated : Jan 29, 2024, 11:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.