ಮೈಸೂರು: ಮಕ್ಕಳ ಹಾಜರಾತಿಯಿಲ್ಲದೆ ಮುಚ್ಚುವ ಸ್ಥಿತಿಯಲ್ಲಿದ್ದ, ಮಹಾರಾಜರು ನಿರ್ಮಿಸಿದ ಶತಮಾನದ ಶಾಲೆಯನ್ನು ದಾನಿಗಳ ಹಾಗೂ ಸ್ವಂತ ಸಂಪಾದನೆಯ ಹಣದಿಂದ ಅಭಿವೃದ್ಧಿಪಡಿಸಿದ ಶಿಕ್ಷಕನಿಗೆ ಈ ಬಾರಿಯ ಜಿಲ್ಲಾ ಅತ್ಯತ್ತಮ ಶಿಕ್ಷಕ ಪ್ರಶಸ್ತಿ ಒದಗಿ ಬಂದಿದೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಇಲ್ಲಿದೆ ವಿಶೇಷ ಸ್ಟೋರಿ.
ಮೈಸೂರಿನ ಲಕ್ಷ್ಮೀಪುರಂ ಅಂದರೆ ಗಾಡಿಚೌಕದ ಬಳಿಯಿರುವ ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆಯನ್ನು 1918ರಲ್ಲಿ ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದ್ದರು. ಶತಮಾನ ಪೂರೈಸಿರುವ ಈ ಶಾಲೆ ಸಂರ್ಪಕ ನಿರ್ವಹಣೆಯಿಲ್ಲದೆ ಹಾಗೂ ನಗರದ ಖಾಸಗಿ ಶಾಲೆಯ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳ ಹಾಜರಾತಿ ಕೊರೆತೆಯಿಂದ ಮುಚ್ಚುವ ಸ್ಥಿತಿಯಲ್ಲಿತ್ತು. ಅದೇ ಸಂದರ್ಭದಲ್ಲಿ ಈ ಶಾಲೆಗೆ 2016 ರಲ್ಲಿ ಮುಖ್ಯ ಶಿಕ್ಷಕರಾಗಿ ಬಂದ ರವಿಕುಮಾರ್ ಮಹತ್ತರ ಬದಲಾವಣೆಯನ್ನೇ ತಂದಿದ್ದಾರೆ.
ರವಿಕುಮಾರ್ ಮುಖ್ಯ ಶಿಕ್ಷಕರಾಗಿ ಬಂದ ಸಂದರ್ಭದಲ್ಲಿ ಶಾಲೆಯಲ್ಲಿ ಕೇವಲ 1ರಿಂದ 7ನೇ ತರಗತಿವರೆಗೆ 6 ವಿದ್ಯಾರ್ಥಿಗಳು ಮಾತ್ರ ಇದ್ದರು. ಆದರೆ ಈಗ ಇದೇ ಶಾಲೆಯಲ್ಲಿ ಒಟ್ಟು 60 ವಿದ್ಯಾರ್ಥಿಗಳು ಇದ್ದಾರೆ.
ಸಮವಸ್ತ್ರದ ಜತೆ ಕಲಿಕಾ ಸಾಮಗ್ರಿ ಉಚಿತ: ಈ ಶಾಲೆಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ವರ್ಷ ಪೂರ್ತಿ ಒಂದು ರೂಪಾಯಿ ಖರ್ಚಿಲ್ಲದೆ ಸರ್ಕಾರದ ವತಿಯಿಂದ ಇರುವ ಸಮವಸ್ತ್ರದ ಜತೆಗೆ ಎಲ್ಲಾ ಮಕ್ಕಳಿಗೂ ಮತ್ತೊಂದು ಜೊತೆ ಸಮವಸ್ತ್ರ, ಕಲಿಕಾ ಸಾಮಗ್ರಿಗಳು, ಸೇರಿದಂತೆ ಎಲ್ಲಾ ರೀತಿಯ ಸಹಾಯವನ್ನು ಮಾಡಲಾಗುತ್ತಿದೆ. ಶಾಲೆಯಲ್ಲಿ ಉತ್ತಮ ಕಲಿಕೆಗೆ ಬೇಕಾದ ಲ್ಯಾಬ್, ಜತೆಗೆ ಇತರ ಎಲ್ಲಾ ವ್ಯವಸ್ಥೆಗಳು ಇವೆ.
ಹೊಸ ಶಾಲಾ ಕೊಠಡಿಗಳಿಗೂ ಸಿದ್ಧತೆ:
"ಅವರು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ಮೌಲ್ಯದ ಸಭಾಂಗಣ ನಿರ್ಮಿಸಲು ಹಣ ನೀಡಿದರು. ಈಗ ಸಭಾಂಗಣ ನಿರ್ಮಾಣವಾಗಿ ಉಪಯೋಗಕ್ಕೆ ಬರುತ್ತಿದೆ. ಇದರ ಜತೆಗೆ ಒಂದೆರಡು ದಿನಗಳಲ್ಲಿ ಹಳೆ ಕೊಠಡಿಗಳನ್ನು ಒಡೆದು, ಇದೇ ಜಾಗದಲ್ಲಿ ಅಮೆರಿಕಾದಲ್ಲಿರುವ ಅದೇ ಹಳೆಯ ವಿದ್ಯಾರ್ಥಿ ಡಾ. ಸಚ್ಚಿದಾನಂದ ಮೂರ್ತಿಯವರ ಸಹಕಾರದೊಂದಿಗೆ ಒಂದು ಕೋಟಿ ಎಂಬತ್ತು ನಾಲ್ಕು ಲಕ್ಷ ಹಣದಲ್ಲಿ ಏಳು ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಮಹಾರಾಜರು ನಿರ್ಮಿಸಿದ ನೂರು ವರ್ಷ ಹಳೆಯಾದಾದ ಈ ಶಾಲೆಯನ್ನು ಮುಚ್ಚಬಾರದು ಎಂದು ಪಣ ತೊಟ್ಟು, ಸ್ವಂತ ಖರ್ಚು ಹಾಗೂ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಈ ಶಾಲೆಯನ್ನು ಉಳಿಸಿದ್ದೇನೆ. ಇಲ್ಲಿ ಆಧುನಿಕ ರೀತಿಯ ಎಲ್ಲಾ ವ್ಯವಸ್ಥೆಗಳನ್ನು ಕಲಿಕೆಗಾಗಿ ಒದಗಿಸಿದ್ದೇವೆ" ಎಂದು ಡಾ. ರವಿಕುಮಾರ್ ಈಟಿವಿ ಭಾರತಕ್ಕೆ ವಿವರಿಸಿದರು.
ಇದನ್ನೂ ಓದಿ: ಹತ್ತೂರು ಸುತ್ತಿ ದೇಣಿಗೆ ಸಂಗ್ರಹಿಸಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸಿದ ಶಿಕ್ಷಕ! - Teachers Day Special