ETV Bharat / state

ದಾವಣಗೆರೆ: 101ನೇ ಜನ್ಮದಿನ ಅದ್ಧೂರಿಯಾಗಿ ಆಚರಿಸಿಕೊಂಡ ಲಕ್ಕಮ್ಮ; ಕುಟುಂಬದಲ್ಲಿ ಹೇಗಿತ್ತು ನೋಡಿ ಸಂಭ್ರಮ - centenarian OLD WOMAN BIRTHDAY - CENTENARIAN OLD WOMAN BIRTHDAY

ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ಲಕ್ಕಮ್ಮ ಅವರು 101 ವರ್ಷ ಪೂರೈಸಿದ ಹಿನ್ನೆಲೆ ಕುಟುಂಬಸ್ಥರು ಅದ್ಧೂರಿಯಾಗಿ ಜನ್ಮದಿನ ಆಚರಿಸಿದರು.

ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಲಕ್ಕಮ್ಮ
ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಲಕ್ಕಮ್ಮ (ETV Bharat)
author img

By ETV Bharat Karnataka Team

Published : Jul 21, 2024, 9:53 PM IST

Updated : Jul 21, 2024, 10:11 PM IST

ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಲಕ್ಕಮ್ಮ (ETV Bharat)

ದಾವಣಗೆರೆ: ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ಲಕ್ಕಮ್ಮ ಅವರು 101 ವರ್ಷ ಪೂರೈಸಿದ ಹಿನ್ನೆಲೆ ಕುಟುಂಬಸ್ಥರು ಅದ್ಧೂರಿಯಾಗಿ ಜನ್ಮದಿನ ಆಚರಿಸಿದರು.

ಶತಾಯುಷಿ ಲಕ್ಕಮ್ಮ ಮೂಲತಃ ಚಿತ್ರದುರ್ಗ ಜಿಲ್ಲೆಯಾವರಾಗಿದ್ದು, ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿ ಗಂಡನ ಮನೆಯಾಗಿದೆ. 20 ವರ್ಷಗಳ ಹಿಂದೆಯೇ ಶತಾಯುಷಿ ಅಜ್ಜಿ ಲಕ್ಕಮ್ಮ ಅವರ ಪತಿ ಸಾವನ್ನಪ್ಪಿದ್ದಾರೆ. ಸದ್ಯ ಅವರನ್ನು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಲಕ್ಕಮ್ಮ ಅವರಿಗೆ 10 ಜನ ಮಕ್ಕಳು, 30 ಜನ ಮೊಮ್ಮಕ್ಕಳು, 42 ಜನ ಮರಿಮೊಮ್ಮಕ್ಕಳು ಇದ್ದಾರೆ.

ಎಲ್ಲರೂ ಸೇರಿ ಮನೆಯ ಮುಂದೆ ಪೆಂಡಾಲ್, ಮಹಾರಾಜ ಚೇರ್ ಹಾಕಿಸಿ ದೊಡ್ಡ ಕೇಕ್ ಕತ್ತರಿಸಿ ಸಂಭ್ರಮದಿಂದ ಲಕ್ಕಮ್ಮ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ. ಇದಲ್ಲದೆ ಅಜ್ಜಿ ಲಕ್ಕಮ್ಮ ರೇಷ್ಮೆ ಸೀರೆ ತೊಟ್ಟು ಕುಟುಂಬಸ್ಥರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಂಡು ಸಂತಸಪಟ್ಟರು.

ಇದನ್ನೂ ಓದಿ: ದಾವಣಗೆರೆ: ನಮ್ಮ ಕ್ಲಿನಿಕ್​ಗಳಲ್ಲಿ ಲಭಿಸದ ಗುಣಮಟ್ಟದ ಚಿಕಿತ್ಸೆ, ಔಷಧಗಳ ಕೊರತೆ; ಸಮಸ್ಯೆ ಸರಿಪಡಿಸಲು ಜನರ ಒತ್ತಾಯ - Namma clinics

Last Updated : Jul 21, 2024, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.