ETV Bharat / state

ರೌಡಿಶೀಟರ್ಸ್ ಹೆಸರಿನ ಫ್ಯಾನ್ ಪೇಜ್​ಗಳಿಗೆ ಸಿಸಿಬಿ ಪೊಲೀಸರ ಕೊಕ್ಕೆ - Fan Pages Of Rowdy Sheeters

ರೌಡಿಶೀಟರ್‌​ಗಳ ಫ್ಯಾನ್​ ಪೇಜ್​ಗಳಿಗೆ ಫಾಲೋವರ್ಸ್​ ಹೆಚ್ಚಾಗುತ್ತಿದ್ದು, ಯುವಕರು ರೌಡಿಸಂನತ್ತ ಆಕರ್ಷಿತರಾಗುವುದನ್ನು ತಡೆಯಲು ಸಿಸಿಬಿ ಪೊಲೀಸರು ಇಂಥ ಪೇಜ್​ಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

CCB Police
ಸಿಸಿಬಿ (ETV Bharat)
author img

By ETV Bharat Karnataka Team

Published : Jul 5, 2024, 1:11 PM IST

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿರುವ ರೌಡಿ ಶೀಟರ್ಸ್ ಫ್ಯಾನ್ಸ್ ಪೇಜ್​ಗಳಿಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೌಡಿಶೀಟರ್ಸ್ ಫ್ಯಾನ್ ಪೇಜ್ ಹೆಚ್ಚಾಗುತ್ತಿದ್ದು ಸೈಬರ್ ಕ್ರೈಂ ಪೊಲೀಸರ ಸಹಾಯದೊಂದಿಗೆ ಅಂಥ ಪೇಜ್​ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಸಿಸಿಬಿ ಆರಂಭಿಸಿದೆ.

ಕುಖ್ಯಾತ ರೌಡಿಶೀಟರ್​ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಸೈಕಲ್ ರವಿ ಸೇರಿದಂತೆ ಹಲವರ ಹೆಸರಿನಲ್ಲಿ 'ಬಾಸ್' ಟ್ಯಾಗ್​ಲೈನ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್​ಗಳನ್ನು ತೆರೆಯಲಾಗುತ್ತಿದೆ. ಸಿನಿಮಾಗಳ ಡೈಲಾಗ್, ಹಾಡುಗಳನ್ನು ಬಳಸಿ ಪ್ರಚೋದಿಸಲಾಗುತ್ತಿದೆ. ಇಂತಹ ಪೇಜ್‌ಗಳಿಗೆ ಹಿಂಬಾಲಕರ ಸಂಖ್ಯೆ ಹಾಗು ರೌಡಿಸಂನತ್ತ ಆಕರ್ಷಿತರಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ.

ಇದನ್ನು ಮನಗಂಡಿರುವ ಸಿಸಿಬಿ, ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಈಗಾಗಲೇ ಹಲವು ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಬ್ರ್ಯಾಂಡ್‌ ಉತ್ಪನ್ನಗಳ ನಕಲು ಮಾರಾಟ ಮಾಡುತ್ತಿದ್ದವನ ಬಂಧನ: 1.38 ಕೋಟಿ ಮೌಲ್ಯದ ಬಟ್ಟೆ ಜಪ್ತಿ - Fake brand products seller arrested

ETV Bharat Logo

Copyright © 2024 Ushodaya Enterprises Pvt. Ltd., All Rights Reserved.