ETV Bharat / state

ಪ್ರಾಪರ್ಟಿ ಮ್ಯಾನೇಜ್​ಮೆಂಟ್​ ಹೆಸರಲ್ಲಿ ಮನೆ ಮಾಲೀಕರು, ಬಾಡಿಗೆದಾರರಿಗೆ ವಂಚಿಸುತ್ತಿದ್ದ‌ ದಂಪತಿ ಬಂಧನ - frauding house owner - FRAUDING HOUSE OWNER

ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ವಂಚಿಸುತ್ತಿದ್ದ ಆರೋಪಿ ದಂಪತಿಯನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

Ahmed Ali Baig and Mueeda Samdani Banu
ಅಹಮದ್ ಅಲಿ‌ ಬೇಗ್ ಹಾಗೂ ಮುಯಿದಾ ಸಮ್ದಾನಿ ಬಾನು (ETV Bharat)
author img

By ETV Bharat Karnataka Team

Published : Aug 25, 2024, 3:25 PM IST

ಬೆಂಗಳೂರು: ನಗರದಲ್ಲಿ ಬಾಡಿಗೆಗೆ ಮನೆಗಳನ್ನ ಪಡೆದು ನಂತರ ಅದೇ ಮನೆಗಳನ್ನ ಇತರರಿಗೆ ಭೋಗ್ಯಕ್ಕೆ ನೀಡುವ ಮೂಲಕ ಹಲವರಿಗೆ ವಂಚಿಸಿದ್ದ ದಂಪತಿಯನ್ನ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಜಿಯೂ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ನಡೆಸುತ್ತಿದ್ದ ಅಹಮದ್ ಅಲಿ‌ ಬೇಗ್ ಹಾಗೂ ಅವರ ಪತ್ನಿ ಮುಯಿದಾ ಸಮ್ದಾನಿ ಬಾನು ಬಂಧಿತ ಆರೋಪಿಗಳು.

ಜಿಯೂ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಪ್ರಾಪರ್ಟಿ ಮ್ಯಾನೇಜ್​ಮೆಂಟ್​ ಕಂಪನಿ ತೆರೆದಿದ್ದ ಆರೋಪಿಗಳು, ಹೆಚ್.ಬಿ.ಆರ್ ಲೇಔಟ್‌ನಲ್ಲಿ ಕಚೇರಿ ಹೊಂದಿದ್ದರು. ಖಾಲಿ ಇರುವ ಮನೆ, ಫ್ಲ್ಯಾಟ್‌ಗಳ ಮಾಲೀಕರನ್ನ ಮಧ್ಯವರ್ತಿಗಳ ಮೂಲಕ ಸಂಪರ್ಕಿಸುತ್ತಿದ್ದ ಆರೋಪಿಗಳು, ತಾವು ಬಾಡಿಗೆದಾರರನ್ನ ಹುಡುಕಿಕೊಡುವ ಮೂಲಕ ನಿರ್ವಹಣೆ ಮಾಡುವುದಾಗಿ ನಂಬಿಸುತ್ತಿದ್ದರು. ಬಾಡಿಗೆಗೆ ಎಂದು ಕರಾರು ಮಾಡಿಕೊಂಡು ಬಳಿಕ ಅವುಗಳನ್ನ ಬೇರೆಯವರಿಗೆ ಭೋಗ್ಯಕ್ಕೆ ನೀಡುತ್ತಿದ್ದರು.

ಒಂದೆರಡು ತಿಂಗಳುಗಳ ಬಳಿಕ ಮಾಲೀಕರಿಗೆ ಬಾಡಿಗೆ ನೀಡುತ್ತಿರಲಿಲ್ಲ. ಮಾಲೀಕರು ಮನೆ ಬಳಿ ಹೋಗಿ ನೋಡಿದಾಗ ಮನೆಯಲ್ಲಿರುವವರು ಭೋಗ್ಯಕ್ಕೆ ಪಡೆದಿರುವುದು ತಿಳಿಯುತ್ತಿತ್ತು. ಮನೆ ಮಾಲೀಕರು ಹಾಗೂ ಬಾಡಿಗೆದಾರರನ್ನ ಏಕಕಾಲಕ್ಕೆ ವಂಚಿಸುತ್ತಿದ್ದ ಜಿಯೂ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸ್ಥಾಪಕ ಅಹಮದ್ ಅಲಿ ಬೇಗ್, ನೂರ್ ಅಹಮದ್ ಅಲಿ ಬೇಗ್, ಅಕ್ರಂ ಪಾಶಾ, ಅಬ್ಧುಲ್ ರಹೀಂ ಹಾಗೂ ಸೈಯ್ಯದ್ ಮತ್ತಿತರರ ವಿರುದ್ಧ ಕಳೆದ ಏಪ್ರಿಲ್‌ನಲ್ಲಿ ಬಾಣಸವಾಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಬಯಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು.

ವಂಚನೆಗೊಳಗಾದ ಮನೆಗಳ ಮಾಲೀಕರು, ಭೋಗ್ಯಕ್ಕೆ ವಾಸವಿದ್ದವರು ಸೇರಿದಂತೆ ನೂರಾರು ಜನರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೂನ್‌ನಲ್ಲಿ ಕ್ವೀನ್ಸ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದರು. ಬಳಿಕ ಸಿಸಿಬಿಯ ಆರ್ಥಿಕ ಅಪರಾಧ ದಳಕ್ಕೆ ಪ್ರಕರಣದ ತನಿಖೆಯನ್ನ ವರ್ಗಾಯಿಸಲಾಗಿತ್ತು. ಸದ್ಯ ಸಿಸಿಬಿ ಅಧಿಕಾರಿಗಳು ಹೈದರಾಬಾದ್‌‌ನಲ್ಲಿದ್ದ ಅಹಮದ್ ಅಲಿ ಬೇಗ್ ಹಾಗೂ ಆತನ ಪತ್ನಿ ಮುಯಿದಾ ಸಮ್ದಾನಿ ಬಾನು ಅವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಕೆಲ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಲಾಗಿದೆ.

ಇದನ್ನೂ ಓದಿ : ಉಡುಪಿ: ಸೈಬರ್ ಪೊಲೀಸರ ಹೆಸರಿನಲ್ಲಿ ಟೆಕ್ಕಿಗೆ ಕರೆ ಮಾಡಿ 4.80 ಲಕ್ಷ ರೂ. ವಂಚನೆ! - Fraud Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.