ETV Bharat / state

ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ, ಸಂಪುಟ ಸಭೆ ನಿರ್ಧಾರ ತೆಗೆದುಕೊಳ್ಳುತ್ತದೆ: ಗೃಹ ಸಚಿವ

ಜಾತಿ ಗಣತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್​ ಅವರು ಹೇಳಿದರು.

Home Minister Parameshwar  Caste census report  Karnataka state government  ಜಾತಿ ಗಣತಿ ವರದಿ  ಗೃಹ ಸಚಿವ ಪರಮೇಶ್ವರ್​
ಗೃಹ ಸಚಿವ ಪರಮೇಶ್ವರ್​
author img

By ETV Bharat Karnataka Team

Published : Mar 1, 2024, 12:37 PM IST

ಗೃಹ ಸಚಿವ ಪರಮೇಶ್ವರ್​ ಹೇಳಿಕೆ

ಬೆಂಗಳೂರು: ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆಯಾಗಿದೆ. ಆದರೆ, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಶೀಲ್ಡ್ ಆಗಿ ಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದರಂತೆ ಮುಂದುವರಿಯೋಣವೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂತಾ ಗೃಹ ಸಚಿವ ಡಾ.ಜಿ.‌ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡೇಟಾ ಹೊರಗೆ ಬರುವವರೆಗೂ ಏನೂ ಹೇಳಲಾಗದು. ವರದಿಯನ್ನು ತೆಗೆದು ನಂತರ ಚರ್ಚೆ ಮಾಡಿ ನೋಡೋಣ ಎಂದರು.

ಜಾತಿ ಗಣತಿ ವರದಿಗೆ ಲಿಂಗಾಯತ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಅವರ ಸಮುದಾಯದ ನಂಬರ್ ಕಡಿಮೆ ಇರಬಹುದು ಎಂಬ ಆತಂಕ ಇರಬಹುದು. ಈಗ ನೀಡಿರುವ ವರದಿ ಕಮಿಷನ್ ರಿಪೋರ್ಟ್ ಅಂತ ಆಗುತ್ತದೆ. ಕಾಂತರಾಜ್ ವರದಿ, ಜಯಪ್ರಕಾಶ್ ಹೆಗ್ಡೆ ವರದಿ ಅಂತ ಬರಲ್ಲ ಎಂದು ಹೇಳಿದರು.

ಪಾಕಿಸ್ತಾನ ಪರ ಘೋಷಣೆ ಸಂಬಂಧದ ಎಫ್​ಎಸ್​ಎಲ್ ವರದಿ ಇನ್ನೂ ಬಂದಿಲ್ಲ. ವರದಿ ಬರಬೇಕಿದೆ. ಅದರಲ್ಲಿ ಒಂದೇ ಒಂದು ಕ್ಲಿಪಿಂಗ್ ಅಲ್ಲ, ಸಾಕಷ್ಟು ಕ್ಲಿಪಿಂಗ್ ಇವೆ. ಎಫ್​ಎಸ್​ಎಲ್ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 7 ಮಂದಿಯನ್ನು ಕರೆಸಿ, ಅವರ ಧ್ವನಿಯನ್ನು ರೆಕಾರ್ಡಿಂಗ್ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಿನ್ನೆ ನಿಧನರಾದ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅಂತ್ಯಕ್ರಿಯೆಗೆ ಛಲವಾದಿ ಮಹಾಸಭಾಂಗಣದಲ್ಲಿ ಜಾಗ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಡಿಪಿಆರ್ ಜೊತೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಓದಿ: ಜಾತಿಗಣತಿ ವರದಿ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ಸಿಎಂ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.