ETV Bharat / state

ಧಾರವಾಡ: 3 ಚೆಕ್​ಪೋಸ್ಟ್​ಗಳಲ್ಲಿ ಒಂದೇ ದಿನ ₹6 ಲಕ್ಷಕ್ಕೂ ಹೆಚ್ಚು ನಗದು ಜಪ್ತಿ - Cash Seized In Check Posts

ನೀತಿ ಸಂಹಿತೆ ಉಲ್ಲಂಘಿಸಿ, ಸೂಕ್ತ ದಾಖಲೆ ಇಲ್ಲದೆ ವಾಹನಗಳಲ್ಲಿ ಸಾಗಿಸುತ್ತಿದ್ದ ನಗದು ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

rs-689-500-cash-seized-in-3-check-posts-of-dharwad-in-one-day
ಧಾರವಾಡ: 3 ಚೆಕ್​ಪೋಸ್ಟ್​ಗಳಲ್ಲಿ ಒಂದೇ ದಿನ ಸೂಕ್ತ ದಾಖಲೆ ಇಲ್ಲದ 6,89,500 ರೂ. ನಗದು ಸೀಜ್​
author img

By ETV Bharat Karnataka Team

Published : Mar 29, 2024, 2:07 PM IST

ಧಾರವಾಡ: "ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಜಿಲ್ಲೆಯ 24 ಚೆಕ್​ಪೋಸ್ಟ್​ಗಳಲ್ಲಿ ಪ್ರತೀ ವಾಹನಗಳನ್ನೂ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಮೂರು ಚೆಕ್​ಪೋಸ್ಟ್​ಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ, ಸರಿಯಾದ ದಾಖಲೆ ಹೊಂದಿರದ ಒಟ್ಟು 6,89,500 ರೂ. ನಗದು ಹಣವನ್ನು ಸೀಜ್ ಮಾಡಲಾಗಿದೆ" ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, "ಲೋಕಸಭೆ ಚುನಾವಣೆ ಘೋಷಣೆಯಾದ ಮಾರ್ಚ್ 16ರಿಂದ ಚೆಕ್​ಪೋಸ್ಟ್​ಗಳನ್ನು ತೆರೆದು ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅದರಲ್ಲೂ ಸಂಶಯಾಸ್ಪದ ವಾಹನಗಳನ್ನು ತಡೆದು, ತೀವ್ರತರವಾಗಿ ಅಧಿಕಾರಿಗಳಿಂದ ಪರಿಶೀಲಿಸಲಾಗುತ್ತಿದೆ. ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಮತ್ತು ಸರಿಯಾದ ದಾಖಲೆ ಹೊಂದಿರದ ಒಟ್ಟು 17,91,970 ರೂ. ನಗದು ವಶಕ್ಕೆ ಪಡೆದು, ಜಿಲ್ಲಾ ಖಜಾನೆಯಲ್ಲಿ ಠೇವಣಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

ಶೇರೆವಾಡ ಚೆಕ್​ಪೋಸ್ಟ್‌ನಲ್ಲಿ ಸಿಕ್ಕಿದ್ದೆಷ್ಟು?: ಕುಂದಗೋಳ ಕ್ರಾಸ್ ಹತ್ತಿರ ತೆರೆದಿರುವ ಚೆಕ್​ಪೋಸ್ಟ್​ನಲ್ಲಿ ಗುರುವಾರ ಸಂಜೆ ಅದರಗುಂಚಿಯಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಕೆಎ-63 ಎನ್- 3173 ಎರಟಿಗಾ ಕಾರನ್ನು ತಪಾಸಣೆ ಮಾಡಲಾಯಿತು. ಆಗ ಅದರಲ್ಲಿ ಪ್ರಯಾಣಿಸುತ್ತಿದ್ದ ಅದರಗುಂಚಿ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಬೇಗೂರ ಅವರ ಬಳಿ ಸರಿಯಾದ ದಾಖಲೆ ಇಲ್ಲದ 2,10,000 ಹಣ ಪತ್ತೆಯಾಗಿದೆ. ಅವರು ಸರಿಯಾದ ದಾಖಲೆಯನ್ನು ನೀಡದ ಕಾರಣ ಮತ್ತು ಅಧಿಕಾರಿಗಳು ವಿಚಾರಿಸಿದಾಗ ಸಮಂಜಸ ಉತ್ತರ ನೀಡದಿರುವುದರಿಂದ ಅವರ ಹಣವನ್ನು ಜಪ್ತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಸಿಪಿಐ ಮುರಗೇಶ ಚನ್ನನವರ, ಎಂಸಿಸಿ ನೋಡಲ್ ಅಧಿಕಾರಿ ಎಸ್.ವಿ.ಕುಲಕರ್ಣಿ ಹಾಗೂ ಎಪ್.ಎಸ್.ಟಿ ನೋಡಲ್ ಅಧಿಕಾರಿ ಅಶೋಕ ಕಲಕೇರಿ ಸೇರಿದಂತೆ ಹಲವರು ಇದ್ದರು.

ಸಂಗಟಿಕೋಪ್ಪ ಚೆಕ್​ಪೊಸ್ಟ್ ಶೋಧ: ಹುಬ್ಬಳ್ಳಿ-ಕಾರವಾರ ರಸ್ತೆಯ ಸಂಗಟಿಕೊಪ್ಪ ಚೆಕ್​ಪೋಸ್ಟ್​ನಲ್ಲಿ ನಿನ್ನೆ ರಾತ್ರಿ ವಾಹನ ತಪಾಸಣೆ ಮಾಡುವಾಗ ಕಾರವಾರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇನ್ನೋವಾ ಕ್ರಿಸ್ಟಾ ಕಾರು ಜಿಎ-06 ಇ-4482 ವಾಹನವನ್ನು ತಪಾಸಣೆ ಮಾಡಲಾಯಿತು. ಈ ವೇಳೆ ಅದರಲ್ಲಿ ಪ್ರಯಾಣಿಸುತ್ತಿದ್ದ ಶಿರಸಿಯ ಸತ್ಯಂ ಎಸ್.ವಿ. ಎಂಬವರ ಬಳಿ ರೂ.1,09,500 ನಗದು ಪತ್ತೆಯಾಗಿದೆ. ತಪಾಸಣೆ ಸಮಯದಲ್ಲಿ ಇದಕ್ಕೆ ಸರಿಯಾದ ದಾಖಲೆ ತೋರಿಸದ ಕಾರಣ ತಕ್ಷಣ ಎಸ್.ಎಸ್.ಟಿ. ಮ್ಯಾಜಿಸ್ಟ್ರೇಟ್ ದೇವರಾಜ ಅವರು ಆ ಹಣವನ್ನು ಜಪ್ತಿ ಮಾಡಿ ಸೀಜ್ ಮಾಡಿದ್ದಾರೆ.

ಕೃವಿವಿ ಚೆಕ್​ಪೋಸ್ಟ್: ಶುಕ್ರವಾರ ಬೆಳಗ್ಗೆ 10.45 ಸುಮಾರಿಗೆ ಕೃಷಿ ವಿಶ್ವವಿದ್ಯಾಲಯ ಬಳಿ ಸ್ಥಾಪಿಸಿರುವ ಚೆಕ್​ಪೋಸ್ಟ್​ನಲ್ಲಿ ಅಥಣಿಯಿಂದ ಧಾರವಾಡಕ್ಕೆ ಹೋಗುತ್ತಿದ್ದ ಬೊಲೆರೊ ಕೆಎ- 71 ಎಮ್- 0969 ವಾಹನವನ್ನು ಪರಿಶೀಲನೆ ಮಾಡಲಾಯಿತು. ಈ ವೇಳೆ ವಾಹನದಲ್ಲಿದ್ದ ಮಲ್ಲಿಕಾರ್ಜುನ ಬಶೆಟ್ಟೆಪ್ಪ ಹೊಳ್ಳದಮಳ ಎಂಬುವವರ ಬಳಿ ದಾಖಲೆ ಇಲ್ಲದ ರೂ.3,70,000 ಹಣ ಪತ್ತೆಯಾಗಿದೆ. ಈ ಕುರಿತು ದಾಖಲೆ ಸಲ್ಲಿಸಲು ಸೂಚಿಸಲಾಗಿದ್ದು, ಅವರು ಯಾವುದೇ ದಾಖಲೆ ಇಲ್ಲವೆಂದು ತಿಳಿಸಿದ್ದಾರೆ. ತಕ್ಷಣ ಎಸ್ಎಸ್.ಟಿ ಮ್ಯಾಜಿಸ್ಟ್ರೇಟ್ ಎಂ.ಎಚ್.ಹೊನ್ಯಾಳ ಅವರು ಆ ಹಣವನ್ನು ವಶಪಡಿಸಿಕೊಂಡು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ವಜ್ರ ವಶಕ್ಕೆ - Diamonds seized

ETV Bharat Logo

Copyright © 2024 Ushodaya Enterprises Pvt. Ltd., All Rights Reserved.