ETV Bharat / state

ಗರ್ಭಕೋಶ ಕಳೆದುಕೊಂಡ ಪ್ರಕರಣ: ಹಾವೇರಿ ಡಿಸಿ ಕಚೇರಿಗೆ ಮಹಿಳೆಯರಿಂದ ಮುತ್ತಿಗೆ ಯತ್ನ - WOMEN PROTEST - WOMEN PROTEST

ಗರ್ಭಕೋಶ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

WOMEN TRIED TO BESIEGE  DISTRICT COLLECTOR OFFICE  HAVERI
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಹಿಳೆಯರು (ETV Bharat)
author img

By ETV Bharat Karnataka Team

Published : Jul 2, 2024, 5:37 PM IST

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಹಿಳೆಯರು (ETV Bharat)

ಹಾವೇರಿ: ವೈದ್ಯನ ನಿರ್ಲಕ್ಷ್ಯದಿಂದ ಗರ್ಭಕೋಶ ಕಳೆದುಕೊಂಡ ರಾಣೆಬೆನ್ನೂರು ತಾಲೂಕಿನ ಮಹಿಳೆಯರು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮುತ್ತಿಗೆ ಹಾಕಲು ಬಂದ ಮಹಿಳೆಯರನ್ನು ಪೊಲೀಸರು ಗೇಟ್​ ಬಳಿ ತಡೆದರು. ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆಯಿತು. ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆ ಒಳಗಾದ ಮಹಿಳೆಯರು ಸಚಿವ ಶಿವಾನಂದ ಪಾಟೀಲ ಭೇಟಿಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು.

ಮಹಿಳೆಯರು ಕೈಯಲ್ಲಿ ಕಲ್ಲು ಹಿಡಿದು, ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಲು ಮುಂದಾದರು. ಅಷ್ಟೇ ಅಲ್ಲ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ನಮ್ಮನ್ನು ಬಂಧಿಸಿ, ಇಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಲು ಅನುಮತಿ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನಮ್ಮನ್ನು ಮೈ ಕೈ ಮುಟ್ಟಿ ತಳ್ಳಾಡಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆರೋಪಿಸಿದರು.

800 ಕ್ಕೂ ಹೆಚ್ಚು ಮಹಿಳೆಯರು ಅಧಿಕೃತ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗರ್ಭಕೋಶ ಕಳೆದುಕೊಂಡಿದ್ದಾರೆ. ಅವರಿಗೆಲ್ಲಾ ದುಡಿದುಕೊಂಡು ತಿನ್ನಲು ಆಗುತ್ತಿಲ್ಲಾ. ಸರ್ಕಾರ ಪರಿಹಾರ ನೀಡಬೇಕು. ಎಂಟು ವರ್ಷದಿಂದ ಪ್ರತಿಭಟನೆ ಮಾಡುತ್ತಿದ್ದರೂ ಸಹ ನಮ್ಮ ಕಡೆ ಗಮನ ಹರಿಸಿಲ್ಲಾ ಎಂದು ಆರೋಪಿಸಿದರು.

50ಕ್ಕೂ ಹೆಚ್ಚು ಮಹಿಳೆಯರು ಕಣ್ಣೀರು ಹಾಕಿದರು. ನಮಗೆ ನ್ಯಾಯ ಕೊಡಿಸಿ ಎಂದು ಸ್ತ್ರೀಯರು ಆಕ್ರೋಶ ವ್ಯಕ್ತಪಡಿಸಿದರು. ಅನಧಿಕೃತ ಗರ್ಭ ಕೋಶ ಶಸ್ತ್ರಚಿಕಿತ್ಸೆ ಒಳಗಾದ ಮಹಿಳೆಯರ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಸ್ಥಳಕ್ಕೆ ಆಗಮಿಸಿ ಮಹಿಳೆಯರ ಮನವಿ ಆಲಿಸಿದರು.

ಓದಿ: ರೈತರಿಗೆ ಅನುಕೂಲವಾಗುವುದು ವಿಪಕ್ಷಗಳಿಗೆ ಇಷ್ಟವಿಲ್ಲ, ಅನ್ನದಾತರಿಗೆ ಸಹಾಯ ಮಾಡಲು ಹಾಲಿನ ದರ ಏರಿಕೆ: ಸಿಎಂ - CM ON MILK PRICE HIKE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.