ETV Bharat / state

ನಕಲಿ‌ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ಯುವಕರ ವಿರುದ್ಧ ಪ್ರಕರಣ - Fake pistol - FAKE PISTOL

ನಕಲಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋ ಪೋಸ್ಟ್ ಮಾಡಿದ ಇಬ್ಬರು ಯುವಕರ ವಿರುದ್ಧ ಕೇಸ್​ ದಾಖಲಾಗಿದೆ.

Etv Bharat
Etv Bharat
author img

By ETV Bharat Karnataka Team

Published : Mar 30, 2024, 7:36 AM IST

ಕಲಬುರಗಿ: ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಡುವ ಮೂಲಕ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸಿರುವ ಆರೋಪದ ಮೇಲೆ ಇಬ್ಬರು ಯುವಕರ ಮೇಲೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೇಡಂ ಪಟ್ಟಣದ ಇಂದಿರಾನಗರದ ನಿವಾಸಿಗಳಾದ ಮಹೇಶ ಹಾಗೂ ಬಸವರಾಜ ಎಂಬ ಯುವಕರು ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋ ಹರಿಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಕರೆಯಿಸಿ ವಿಚಾರಣೆ ನಡೆಸಿದ್ದು, ಅವರಿಂದ ನಕಲಿ‌ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಭಾವಚಿತ್ರಗಳನ್ನು ಹರಿಬಿಡದಂತೆ ಎಚ್ಚರಿಸಿದ್ದಾರೆ.

ಈ ರೀತಿಯಲ್ಲಿ ಪಿಸ್ತೂಲ್, ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು, ಜನರಲ್ಲಿ‌ ಆತಂಕ‌ ಹುಟ್ಟುವಂತೆ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹವಾ ಮಾಡಲು ಪ್ರಯತ್ನ ಮಾಡುವ ಕೆಲಸ ಮಾಡಿದ್ರೆ ಕಠಿಣ ಕ್ರಮ‌ಕೈಗೊಳ್ಳುವುದಾಗಿ ಎಸ್ಪಿ ಅಕ್ಷಯ್​ ಹಾಕೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ ಶರಣಬಸವೇಶ್ವರ ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಭದ್ರತಾ ಸಿಬ್ಬಂದಿ ಸಾವು; ಇನ್ನೋರ್ವನಿಗೆ ಗಾಯ - SECURITY GUARD DIED

ಇದನ್ನೂ ಓದಿ: ಅಕ್ರಮ‌ ಮರಳು ದಂಧೆ ವಿರುದ್ಧ ಕಲಬುರಗಿ ಪೊಲೀಸರ ಸಮರ: 565 ಲೋಡ್ ಮರಳು ಜಪ್ತಿ, 11 ಜನರ ವಿರುದ್ಧ ಎಫ್ಐಆರ್ - Illegal sand racket

ETV Bharat Logo

Copyright © 2024 Ushodaya Enterprises Pvt. Ltd., All Rights Reserved.