ETV Bharat / state

ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಆರೋಪ: ಕಾನ್​ಸ್ಟೇಬಲ್​ ವಿರುದ್ಧ ಪ್ರಕರಣ - Case Against Police Constable

ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ ಮೋಸ ಮಾಡಿರುವ ಆರೋಪದ ಮೇಲೆ ಕಾನ್​ಸ್ಟೇಬಲ್​ ವಿರುದ್ಧ ಪ್ರಕರಣ ದಾಖಲಾಗಿದೆ.

COMPLAINT AGAINST CONSTABLE  CHEATING CASE  LOVE ISSUE  KALABURAGI
ಕಲಬುರಗಿ ಪೊಲೀಸ್​ ಭವನ (ETV Bharat)
author img

By ETV Bharat Karnataka Team

Published : Oct 2, 2024, 11:56 AM IST

ಕಲಬುರಗಿ: ಪೊಲೀಸ್ ಕಾನ್​ಸ್ಟೇಬಲ್​ವೊಬ್ಬ ಯುವತಿಯನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ ಬಳಿಕ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಯುವತಿಯು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಕಲಬುರಗಿಯ ಕೆಎಸ್​ಆರ್‌ಪಿ ಪೊಲೀಸ್ ಕಾನ್​ಸ್ಟೇಬಲ್​ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ನಲ್ಲಿ ಯುವತಿ ಹಾಗೂ ಕಾನ್​ಸ್ಟೇಬಲ್ ನಡುವೆ ಪರಿಚಯ ಆಗಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿದೆ. ಮೊಬೈಲ್‌ ನಂಬರ್ ವಿನಿಮಯ ಮಾಡಿಕೊಂಡು, ನಿರಂತರವಾಗಿ ಚಾಟಿಂಗ್, ಕಾಲಿಂಗ್ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.

ಈ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿ ಗಲಾಟೆ ನಡೆದಿದೆ. ಆಗ ಮದುವೆ ಮಾಡಿಕೊಳ್ಳೋಣ ಬಾ ಎಂದು ಆಗಸ್ಟ್ 13ರಂದು ಹೈದರಾಬಾದ್​ನಿಂದ ತನ್ನನ್ನು ಕಲಬುರಗಿಗೆ ಕರೆಸಿಕೊಂಡು, ಬಸ್ ನಿಲ್ದಾಣ ಹತ್ತಿರದ ಲಾಡ್ಜ್​ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಕಾನ್​ಸ್ಟೇಬಲ್​ ವಿರುದ್ಧ ಯುವತಿ ಆರೋಪ ಮಾಡಿದ್ದಾರೆ.

ಮರುದಿನ ಮದುವೆಯಾಗೋಣ ಎಂದು ಕೇಳಿದಾಗ, ತನಗೆ ಇವತ್ತು ಹುಮನಾಬಾದ್​ನಲ್ಲಿ ಬಂದೋಬಸ್ತ್ ಡ್ಯೂಟಿ ಇದೆ. ಇವತ್ತು ಬೇಡ, ನಾಳೆ ಮದುವೆಯಾಗೋಣ ಎಂದು ಹೇಳಿದ ಕಾನ್​ಸ್ಟೇಬಲ್, ತನ್ನನ್ನು ಲಾಡ್ಜ್​ನಲ್ಲಿಯೇ ಬಿಟ್ಟು ಹೋಗಿದ್ದಾನೆ ಎಂದು ಯುವತಿ ದೂರಿದ್ದಾರೆ.

ಆ ಬಳಿಕ ಹಲವು ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮತ್ತೊಮ್ಮೆ ಸಂಪರ್ಕ ಮಾಡಿದಾಗ, ಮದುವೆ ಆಗಲು ತನ್ನ ಮನೆಯಲ್ಲಿ ಒಪ್ಪುತ್ತಿಲ್ಲ, ವರದಕ್ಷಿಣೆ ಹೆಚ್ಚಿಗೆ ಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ. ಆಗ ನಾನು ಮೋಸ ಹೋಗಿರುವುದು ತಿಳಿಯಿತು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಯುವತಿ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಕಾನ್​ಸ್ಟೇಬಲ್ ವಿರುದ್ಧ ಬಿಎನ್​ಎಸ್ ಕಾಯ್ದೆ 64, 318 (B), 351, 352 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಗೆ ಕೆಲವು ಸಮಾಜ ಸೇವಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ.

ಓದಿ: ರಸ್ತೆಯಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ: ಹುಬ್ಬಳ್ಳಿಯಲ್ಲಿ ಯುವಕನ ಬಂಧನ - Young Man Arrest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.