ETV Bharat / state

ತಮ್ಮ ಸರ್ಕಾರ ಉಳಿಸಲು ಬಿಹಾರ, ಆಂಧ್ರಪ್ರದೇಶಕ್ಕೆ ಮಾತ್ರ ಗಮನ ಎಂದ ಡಿಕೆಶಿ: ಡಿಸಿಎಂಗೆ ಸಿ ಟಿ ರವಿ ತಿರುಗೇಟು - Union Budget 2024 - UNION BUDGET 2024

ತಮ್ಮ ಸರ್ಕಾರ ಉಳಿಸಲು ಬಿಹಾರ ಮತ್ತು ಆಂಧ್ರಪ್ರದೇಶ ಮಾತ್ರ ಬಜೆಟ್​ನಲ್ಲಿ ಗಮನಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿ ಟಿ ರವಿ ಕಾಂಗ್ರೆಸ್​ಗೆ ಕಾಮಾಲೆ ಕಣ್ಣು ಎಂದು ಆರೋಪಿಸಿದ್ದಾರೆ.

BIHAR AND ANDHRA PRADESH  CITY RAVI LASHED OUT AT DCM  MODI GOVERNMENT  NIRMALA SITHARAMAN BUDGET
ಡಿಕೆಶಿಗೆ ಸಿಟಿ ರವಿ ಟಾಂಗ್​ (ETV Bharat)
author img

By ETV Bharat Karnataka Team

Published : Jul 23, 2024, 5:50 PM IST

Updated : Jul 23, 2024, 6:05 PM IST

ಬೆಂಗಳೂರು: ತಮ್ಮ ಸರ್ಕಾರ ಉಳಿಸಲು ಬಿಹಾರ ಮತ್ತು ಆಂಧ್ರ ಪ್ರದೇಶ ಮಾತ್ರ ಗಮನಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರದ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಭಾರೀ ಅಭಿಮಾನ‌ ಇತ್ತು. ರಾಜ್ಯಕ್ಕೆ ಹಣ ಕೊಡ್ತಾರೆ, ಯೋಜನೆ ಕೊಡ್ತಾರೆ ಅಂತಾ ಭಾವಿಸಿದ್ದೆವು. ಆದ್ರೆ ಅವರು ಗಮನ ಸೆಳೆದಿಲ್ಲ. ಇಂಡಿಯಾ ಆಡಳಿತ ಇರುವ ರಾಜ್ಯಗಳನ್ನು ಗಮನಿಸಿಲ್ಲ. ನಿರ್ಮಲಾ ಸೀತಾರಾಮನ್ ತಾರತಮ್ಯ ಮಾಡಿದ್ದಾರೆ. ಇದು ಖಂಡನೀಯ. ಇದರ ಬಗ್ಗೆ ನಾನು ಮುಂದೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ಮಹಿಳೆಯರು, ಬಡವರ, ರೈತರ ಪರ ಬಜೆಟ್: ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಸಿ.ಟಿ. ರವಿ, ಮೋದಿಯವರ ನೇತೃತ್ವದ ಎನ್​ಡಿಎ ಸರ್ಕಾರ ಬಜೆಟ್ ಮಂಡಿಸಿದೆ. ಭಾರತದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮಹಿಳೆಯರು, ರೈತರ ಪರ ದೃಷ್ಟಿ ಹರಿಸಿದ್ದಾರೆ. ಮೋದಿ ನೇತೃತ್ವದಲ್ಲಿ ಭಾರತ ಐದನೇ ಜಾಗತಿಕ ಶಕ್ತಿಯಾಗಿ ಬೆಳೆದಿದೆ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ 1.48 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗಾಗಿ 11.11 ಕೋಟಿ ರೂ. ಹಂಚಿಕೆ ಮಾಡಿದ್ದಾರೆ. ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿಗೆ ತರಬೇತಿ ಒತ್ತು ನೀಡಿದ್ದಾರೆ‌. ಗ್ರಾಮೀಣಾಭಿವೃದ್ಧಿಗೆ 2.65 ಲಕ್ಷ ಕೋಟಿ ಹಂಚಿಕೆ ಮಾಡಿದ್ದಾರೆ. ಮುದ್ರಾ ಸಾಲ ಮಿತಿಯನ್ನು 20 ಲಕ್ಷ ರೂ.ಗೆ ಏರಿಕೆ ಮಾಡಿದ್ದಾರೆ. ದೇಶಾದ್ಯಂತ 12 ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ನಗರ ಪ್ರದೇಶದಲ್ಲಿ 1 ಕೋಟಿ ಮನೆ, ಗ್ರಾಮೀಣ ಪ್ರದೇಶಗಳಲ್ಲಿ 3 ಕೋಟಿ ಮನೆ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ. ಈ ಬಜೆಟ್ ಮಾನವೀಯತೆಯ, ಬಡವರ ಪರ, ಮಹಿಳೆಯರ ಪರ, ರೈತರ ಪರವಾಗಿದೆ. ಸಶಕ್ತ ಭಾರತ ಆಗಲು ಒಂದೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಈ ಬಜೆಟ್​ನ್ನು ನಾನು ಸ್ವಾಗತಿಸುತ್ತೇನೆ ಎಂದರು.

ಕಾಂಗ್ರೆಸ್​ನ ಪ್ರಣಾಳಿಕೆಯನ್ನು ಕೇಂದ್ರದ ಬಜೆಟ್​ನಲ್ಲಿ ನಕಲು ಮಾಡಿದೆ ಎಂಬ ಪಿ.ಚಿದಂಬರಂ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ನೂರಾರು ವರ್ಷ ಇತಿಹಾಸ ಇರುವ ಪಕ್ಷ. ಅವರು ಹಗರಣ ಬಿಟ್ಟು ಬೇರೆ ಏನು ಮಾಡಿದ್ದಾರೆ?. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಗರಣ ಮಾಡುತ್ತಾರೆ. ಮೋದಿ ಸರ್ಕಾರ ಸ್ಕೀಂ ಮೂಲಕ ಹೆಸರು ಮಾಡಿದ್ರೆ, ಕಾಂಗ್ರೆಸ್ ಸ್ಕ್ಯಾಂ ಮೂಲಕ ಹೆಸರು ಮಾಡಿದೆ. ಮೋದಿ ಕಳಂಕರಹಿತ ಆಡಳಿತ ನಡೆಸುತ್ತಾರೆ ಎಂದು ಹೇಳಿದರು.

ಆಂಧ್ರ ಮತ್ತು ಬಿಹಾರಕ್ಕೆ ಹೆಚ್ಚಿನ ಅನುದಾನ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿಯಲ್ಲ. ಆಂಧ್ರಪ್ರದೇಶ ಹಾಗೂ ಬಿಹಾರನೂ ಭಾರತದ ಅಂಗವಾಗಿವೆ. ಇಂಡಿಯಾ ಕೂಟ ಸರ್ಕಾರಗಳಿರುವ ರಾಜ್ಯಗಳಿಗೆ ತಾರತಮ್ಯ ಆರೋಪ ವಿಚಾರವಾಗಿ ಮಾತನಾಡಿ, ಡಿಕೆಶಿಯವರು ಯದ್ಭಾವಂ ತದ್ಬವತಿ ಇದ್ದಂತೆ. ಅವರು ಹೇಗೆ ಇದ್ದಾರೆ ಹಂಗೆ ಕಾಣುತ್ತದೆ. ಅವರು ಕಾಮಾಲೆ ಕಣ್ಣಿನಿಂದ ನೋಡುವುದು ಬಿಡಬೇಕು. ಕಾಂಗ್ರೆಸ್​ಗೆ ಕಾಮಾಲೆ ಕಣ್ಣು ಎಂದು ಆರೋಪಿಸಿದರು.

ಓದಿ: ಆದಾಯ ತೆರಿಗೆದಾರರು ಗಮನಿಸಿ!: ಸ್ಟ್ಯಾಂಡರ್ಡ್ ಡಿಡಕ್ಷನ್ ₹75 ಸಾವಿರಕ್ಕೇರಿಕೆ; ₹3 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ - Income Tax

Last Updated : Jul 23, 2024, 6:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.