ETV Bharat / state

ವಿಪಕ್ಷಗಳನ್ನು ಬೆದರಿಸಿ ಬಾಯಿ ಮುಚ್ಚಿಸಲಾಗಲ್ಲ, ಹೋರಾಟ ನಿಲ್ಲಲ್ಲ: ವಿಜಯೇಂದ್ರ - BY Vijayendra

author img

By ETV Bharat Karnataka Team

Published : Sep 1, 2024, 5:26 PM IST

ಬಿಜೆಪಿ ಕಚೇರಿಯಲ್ಲಿ ಕಾನೂನು ಪ್ರಕೋಷ್ಠದ ಕಾರ್ಯಕಾರಿಣಿ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಭಾಗಿಯಾಗಿ ಕಾನೂನು ಪ್ರಕೋಷ್ಠದ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಇದೇ ವೇಳೆ ವಿಪಕ್ಷಗಳನ್ನು ಹೆದರಿಸಿ ಬಾಯಿ ಮುಚ್ಚಿಸಲು ಆಗಲ್ಲವೆಂದು ಸರ್ಕಾರಕ್ಕೆ ತಿಳಿಸಿದರು.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಕಾನೂನು ಪ್ರಕೋಷ್ಠದ ಕಾರ್ಯಕಾರಿಣಿ ಸಭೆ
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಕಾನೂನು ಪ್ರಕೋಷ್ಠದ ಕಾರ್ಯಕಾರಿಣಿ ಸಭೆ (ETV Bharat)

ಬೆಂಗಳೂರು: ದಲಿತರ‌ ಹೆಸರೇಳಿಕೊಂಡು ಅಧಿಕಾರ ಮಾಡುತ್ತಿರುವ ಕಾಂಗ್ರೆಸ್​​ನವರ ಮುಖವಾಡ ಕಳಚಿಬಿದ್ದಿದೆ. ವಿಪಕ್ಷಗಳನ್ನು ಬೆದರಿಸುವ ಮೂಲಕ ನಮ್ಮ ಬಾಯಿ‌ ಮುಚ್ಚಿಸಬಹುದು ಅಂದುಕೊಂಡಿರಬಹುದು. ಅದಕ್ಕೆ‌ ನಾವು ಬಗ್ಗಲ್ಲ. ವಾಲ್ಮೀಕಿ ಹಗರಣ ಸೇರಿದಂತೆ ಸರ್ಕಾರದ ಹಗರಣಗಳ ವಿರುದ್ಧ ನಮ್ಮ‌ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಕಾನೂನು ಪ್ರಕೋಷ್ಠದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ‌ಕಾನೂನು ಪ್ರಕೋಷ್ಠದ ಪ್ರಾಮುಖ್ಯತೆ ಎಷ್ಟಿದೆ ಅಂತ ಮನಗಂಡಿದ್ದೇವೆ. ಸ್ವಾತಂತ್ರ್ಯ ನಂತರದಲ್ಲಿ, ಎಮರ್ಜೆನ್ಸಿ ಕಾಲದಲ್ಲೂ ನಾವು ಅರಿತಿದ್ದೇವೆ. ಎಲ್ಲಾ ಪ್ರಕೋಷ್ಠಗಳ ಪ್ರಾಮುಖ್ಯತೆ ಗೊತ್ತಿದೆ. ಕಾನೂನು ಪ್ರಕೋಷ್ಠದ ಜವಾಬ್ದಾರಿ ಹೆಚ್ಚಿದೆ ಎಂದರು.

ರಾಜ್ಯದಲ್ಲಿ ದಿನ ಬೆಳಗಾದ್ರೆ ಹೊಸ ಹೊಸ ಹಗರಣಗಳು ಬೆಳಕಿಗೆ ಬರ್ತಿವೆ. ಸಿಎಂ‌ ಸ್ವತಃ ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣದಲ್ಲಿ 187 ಕೋಟಿ ಅಲ್ಲ 87 ಕೋಟಿ ರೂ. ಅಷ್ಟೇ ಅಂತಾರೆ. ಸ್ವತಃ ವಕೀಲರಾಗಿರೋ ಸಿಎಂಗೆ ಎಷ್ಟು ಕೋಟಿ ಆದ್ರೇನು? ಹಗರಣ ಹಗರಣವೇ?. ಸಿದ್ದರಾಮಯ್ಯ ಅವರನ್ನ ಅಲ್ಲಾಡಿಸಲು ಆಗಲ್ಲ, ಸಿಎಂ‌ ಸ್ಥಾನದಿಂದ ಇಳಿಸಲಾಗಲ್ಲ ಅಂತ‌ ಸವಾಲು ಹಾಕಿದ್ದರು. ಕಳೆದ ಆರೇಳು ತಿಂಗಳಿಂದ ಆಡಳಿತ ಇದೆ ಅನ್ನೋದು ಜನರಿಗೇ ವಿಶ್ವಾಸ ಇಲ್ಲ. ಜನಪ್ರಿಯತೆ ಕಳೆದುಕೊಂಡಿರುವ ಸರ್ಕಾರ ಇದು, ಇದನ್ನು ದುಷ್ಟ ಕಾಂಗ್ರೆಸ್ ಸರ್ಕಾರ ಅಂದ್ರೆ ತಪ್ಪಲ್ಲ ಎಂದು ಕಿಡಿಕಾರಿದರು.

ವಾಲ್ಮೀಕಿ ನಿಗಮದಲ್ಲಿ ಹಗರಣ, ಮುಡಾ ಹಗರಣ ನಡೆದಿದೆ. ಬಿಜೆಪಿ ಅವಧಿಯಲ್ಲಿ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿಲ್ಲ. ಆ ರೀತಿ ಯಾವುದೇ ಪ್ರೊಸಿಡಿಂಗ್ ನಡೆದಿಲ್ಲ.
ಬಿಜೆಪಿ ಅವಧಿಯಲ್ಲಿ ನಡೆದಿದ್ದರೆ ಅಕ್ರಮ ಸಕ್ರಮವಾಗುತ್ತಾ? ಜುಲೈ 15 ರಿಂದ ಅಧಿವೇಶನ ಇತ್ತು, ಸಿಎಂ ಜುಲೈ 14ರಂದು ಒನ್ ಮ್ಯಾನ್ ಕಮಿಷನ್ ನೇಮಕ ಮಾಡ್ತಾರೆ. ಈಗಾಗಲೇ ಒನ್ ಮ್ಯಾನ್ ಎನ್‌ಕ್ವೈರಿ ಕಮಿಷನ್ ರಚನೆ ಮಾಡಿದ್ದೇವೆ, ಸದನದಲ್ಲಿ ಮುಡಾಗೆ ಚರ್ಚೆಗೆ ಅವಕಾಶ ಇಲ್ಲ ಅಂತಾರೆ. ಆ ವಿಚಾರದಲ್ಲಿ ಸಿಎಂಗೆ ಸ್ಪಷ್ಟವಾಗಿ ಗೊತ್ತಾಗಿದೆ, ತಾನು ತಪ್ಪು ಮಾಡಿದ್ದೇನೆ ಅಂತ ತಿಳಿದಿದೆ. ಮುಡಾ ಪ್ರಕರಣ ವಿರುದ್ಧ ಪಾದಯಾತ್ರೆ ಕೂಡ ಮಾಡಿದ್ದೇವೆ. ಅದರ ನಿರಂತರ ಫಲ ಈಗ ನಡೆಯುತ್ತಿದೆ. ಸಮಾಜವಾದಿ ಮುಖವಾಡ ಕಳಚಿಬಿದ್ದಿದೆ ಎಂದು ವಿಜಯೇಂದ್ರ ಟೀಕಿಸಿದರು.

ಇದನ್ನೂ ಓದಿ: ದರ್ಶನ್​ ಬಳ್ಳಾರಿ ಜೈಲಿಗೆ ಸ್ಥಳಾಂತರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ: ಸಚಿವ ಜಮೀರ್ - Zameer Ahmed

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ‌ ಮೇಲೆ ಕೇಸ್ ಹಾಕುವ ಪ್ರಯತ್ನ ಮಾಡಿದ್ದರು. ನಮ್ಮ‌ ಕಾರ್ಯಕರ್ತರು ಹೋರಾಟ ಮಾಡಿದರೆ ಕೇಸ್ ಹಾಕ್ತಿದ್ದಾರೆ. ನನ್ನ ಮೇಲೂ ಕೇಸ್ ಹಾಕಿದ್ದು, ಬೇಲ್ ಪಡೆಯಲಾಗಿದೆ. ನಮ್ಮ ಜವಾಬ್ದಾರಿ ಬಹಳ ಹೆಚ್ಚಿದೆ. ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಆಗಬೇಕಿದೆ. ನಿಮ್ಮ ಶಕ್ತಿ ಇಂದ ಧೈರ್ಯವಾಗಿ ಕಾರ್ಯಕರ್ತರು ಮುಂದೆ ನುಗ್ತಾರೆ ಎಂದು ಹೇಳಿದರು.

ಹೊಸ ಭಾರತದ ಕಾನೂನು ತರಲಾಗಿದೆ. ಬ್ರಿಟಿಷರ ಕಾನೂನು ಬದಲಿಸುವ ಕೆಲಸ ಪ್ರಧಾನಿ ಮೋದಿ ಮಾಡ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡ್ತಿದ್ದಾರೆ. ಯಾವುದೇ ಹೊಸ ಯೋಜನೆ ಬಂದ್ರೆ ಸಾಕು, ಅದರ ವಿರುದ್ಧ ಕೆಲಸ‌ ಮಾಡ್ತಿದ್ದಾರೆ. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಮೋದಿ ಅವರು ಮಾಡ್ತಿದ್ರೆ, ರೈತರನ್ನ ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡಿತು ಎಂದು ದೂರಿದರು.

ಇದನ್ನೂ ಓದಿ: ಕೋವಿಡ್ ಹಗರಣ ಆರೋಪ ಕಾನೂನಾತ್ಮಕವಾಗಿ ಎದುರಿಸುವೆ: ಸಂಸದ ಸುಧಾಕರ್ - MP K Sudhakar

ಕೆಲಸದ ಒತ್ತಡದ ನಡುವೆ ಕಾನೂನು ಪ್ರಕೋಷ್ಠದಲ್ಲಿ ಸೇವೆ ಸಲ್ಲಿಸುವ ಕೆಲಸ ಮಾಡ್ತಿದ್ದೀರಿ. ರಾಜಕೀಯ ಕ್ಷೇತ್ರದಲ್ಲಿ ಇದೊಂದು ಸದಾವಕಾಶ. ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ, ನಾನೂ ಕೂಡ ಕಾನೂನು ಪದವೀಧರ. ನಾನೂ ಸಹ ಹೈಕೋರ್ಟ್‌ನಲ್ಲಿ ಎಂಟತ್ತು ವರ್ಷ ಪ್ರಾಕ್ಟೀಸ್ ಮಾಡಬೇಕಿತ್ತು ಅನಿಸ್ತಿದೆ. ಎಂಟತ್ತು ವರ್ಷ ಪ್ರಾಕ್ಟೀಸ್ ಮಾಡಿದ್ರೆ ನನ್ನನ್ನು ಹಿಡಿಯಲು ಆಗ್ತಿರಲಿಲ್ಲ. ಈಗಲೇ ಬೊಬ್ಬೆ ಹೊಡಿತಿದ್ದಾರೆ ಎಂದು ಹಾಸ್ಯದ ಮೂಲಕ ಸ್ವಪಕ್ಷದವರಿಗೇ ಟಾಂಗ್ ನೀಡಿದರು.

ಕಾನೂನು ಪ್ರಕೋಷ್ಠ ಸಂಚಾಲಕ ವಸಂತ್ ಕುಮಾರ್ ಮಾತನಾಡಿ, ಕಾನೂನು ಪ್ರಕೋಷ್ಠ ಹಲವಾರು ಕೆಲಸಗಳನ್ನು ಮಾಡಿದೆ. ಪಕ್ಷದ ಪರವಾಗಿ ಅನೇಕ ದೂರುಗಳನ್ನ ನೀಡಿದ್ದೇವೆ. ವಿಜಯೇಂದ್ರ ಅವರ ನಾಯಕತ್ವದಲ್ಲಿ ನಾವೆಲ್ಲಾ ಹೊರಟಿದ್ದೇವೆ. ವಿಪಕ್ಷವಾಗಿ ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದೆ. ಕಾನೂನು ಪ್ರಕೋಷ್ಠ ಪಕ್ಷದ ಬೆನ್ನೆಲುಬಾಗಿ ನಿಂತಿದೆ. ಮಹಿಳೆಯರನ್ನ ಬಲಪಡಿಸಿ, ಪಕ್ಷಕ್ಕೆ ಕರೆತರಲು ಮಹಿಳಾ ಸಮಾವೇಶ ಮಾಡಿದ್ದೇವೆ. ಮುಡಾದ ವಿರುದ್ಧ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ನೂರಕ್ಕೆ ನೂರರಷ್ಟು ನಮ್ಮ ಪರವಾಗಿ ಬರಲಿದೆ ಅಂತ ಭಾವಿಸಿದ್ದೇನೆ. ಪಕ್ಷದ ಪರವಾಗಿ ಹೋರಾಟ ಮಾಡೋಣ ಎಂದು ಕರೆ ನೀಡಿದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಹೈಕೋರ್ಟ್​ನಲ್ಲಿ ಕ್ಯಾಂಟೀನ್ ಕಟ್ಟಲು ಹತ್ತು ಕೋಟಿ ರೂ. ನೀಡಿದ್ದರು. ಜೊತೆಗೆ ವಕೀಲರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ವಕೀಲರ ಆರೋಗ್ಯ ದೃಷ್ಟಿಯಿಂದ 50 ಕೋಟಿ ಆರೋಗ್ಯ ವಿಮೆ ನೀಡಿದ್ದರು. ಈಗ ಮತ್ತಷ್ಟು ಕೆಲಸದಿಂದ ನಮ್ಮ ಕಾನೂನು ಪ್ರಕೋಷ್ಠಕ್ಕೆ ಇನ್ನಷ್ಟು ಶಕ್ತಿ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸೆ. 6 ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ : ಡಿಸಿಎಂ ಡಿ ಕೆ ಶಿವಕುಮಾರ್ - DCM D K Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.