ETV Bharat / state

ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನಕ್ಕೆ ವಿಜಯೇಂದ್ರ,​ ಬಿಎಸ್​ವೈ ಸೇರಿ ಹಲವರ ಸಂತಾಪ - SM KRISHNA PASSES AWAY

ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

SM KRISHNA PASSES AWAY
ಬಿ. ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ ಆರಗ ಜ್ಞಾನೇಂದ್ರ (ETV Bharat)
author img

By ETV Bharat Karnataka Team

Published : Dec 10, 2024, 9:15 AM IST

Updated : Dec 10, 2024, 12:00 PM IST

ಬೆಳಗಾವಿ/ಬೆಂಗಳೂರು: ಎಸ್ ಎಂ ಕೃಷ್ಣ ಅವರ ಸಾವು ತುಂಬಾ ನೋವಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ​ ಸೇರಿ ಅನೇಕ ಬಿಜೆಪಿ ಮುಖಂಡರು ಮಾಜಿ ಮುಖ್ಯಮಂತ್ರಿ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ''ಎಸ್ ಎಂ ಕೃಷ್ಣ ಅವರು ಓರ್ವ ಅಜಾತ ಶತ್ರು ಆಗಿದ್ದರು. ಹಣಕಾಸು ಸಚಿವರಾಗಿ, ರಾಜ್ಯದ ಸಿಎಂ ಆಗಿ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆ ಕೊಡುಗೆ ನೀಡಿದ್ದಾರೆ. ನಾನು ರಾಜ್ಯಧ್ಯಕ್ಷನಾದ ಮೇಲೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದುಕೊಂಡು ಬಂದಿದ್ದೆ. ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್ ಎಂ ಕೃಷ್ಣ ಅವರ ನಿಧನಕ್ಕೆ ಗಣ್ಯರ ಸಂತಾಪ (ETV Bharat)

''ಅವರನ್ನು ಭೇಟಿಯಾಗಿ ಅವರ ಮಾತುಗಳನ್ನು ಕೇಳಿ ಅವರ ಮಾರ್ಗದರ್ಶನ ಕೇಳಿದರೆ ರೋಮಾಂಚನವಾಗಿತ್ತು. ನಮ್ಮಲ್ಲೂ ಇನ್ನೂ ಕೆಲಸ ಮಾಡಬೇಕೆನ್ನುವ ಉತ್ಸಾಹ ಬರುತ್ತಿದೆ ಎಂದು ಹೇಳಿ ಬೆನ್ನುತಟ್ಟಿದ್ದರು. ಅವರ ಆತ್ಮಕ್ಕೆ ಚಿರ ಶಾಂತಿಯನ್ನು ದೇವರು ಕರುಣಿಸಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ, ಎಸ್ ಎಂ ಕೃಷ್ಣ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗುತ್ತೇನೆ'' ಎಂದು ತಿಳಿಸಿದರು.

ಬಿಎಸ್‌ವೈ ಸಂತಾಪ: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವರು, ಪಕ್ಷದ ಹಿರಿಯ ನಾಯಕ ಹಾಗೂ ಎಸ್‌.ಎಂ.ಕೃಷ್ಣ ಅವರ ಅಗಲಿಕೆಯಿಂದ ನನಗೆ ಹಿರಿಯ ಸಹೋದರನನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸದಾಶಿವನಗರದಲ್ಲಿರುವ ಎಸ್.ಎಂ ಕೃಷ್ಣ ಅವರ ನಿವಾಸದ ಬಳಿ ಅಂತಿಮ ದರ್ಶನ ಪಡೆದ ಅವರು ತೀವ್ರ ಸಂತಾಪ ಸೂಚಿಸಿ ಮಾತನಾಡಿದರು.

''ಎಸ್.ಎಂ.ಕೃಷ್ಣ ಅವರು ನಮ್ಮನ್ನ ಅಗಲಿದ ಸುದ್ದಿ ಅತ್ಯಂತ ದುಖಃ ತಂದಿದೆ. ಹಿರಿಯ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಎಸ್.ಎಂ‌. ಕೃಷ್ಣ ಅವರು ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಪಟ್ಟಿದ್ದಾರೆ. ನಮ್ಮ ನಡುವೆ ಭಿನ್ನ ರಾಜಕೀಯ ನಿಲುವು ಇದ್ದಾಗಲೂ ಸಹ ದಶಕಗಳ ಕಾಲ ಅವರ ಜೊತೆಗಿನ ರಾಜಕೀಯ ಒಡನಾಟ ಮರೆಯಲು ಸಾಧ್ಯವಿಲ್ಲ. ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಪ್ರೀತಿಯಿಂದ ಸಾಕಷ್ಟು ಸಲಹೆಗಳನ್ನ ನೀಡುತ್ತಿದ್ದರು. ನಮ್ಮ ನಾಡು ಓರ್ವ ಶ್ರೇಷ್ಠ ರಾಜಕಾರಣಿ, ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿದೆ ಎಂದು ಬಿಎಸ್‌ವೈ ತಿಳಿಸಿದರು.

ಎಸ್.ಎಂ. ಕೃಷ್ಣ ಅವರ ಸಾವಿನ ಸುದ್ದಿ ಕೇಳಿ ದುಃಖಿತನಾಗಿದ್ದೇನೆ. ಎಸ್.ಎಂ. ಕೃಷ್ಣ ತೀರ್ಥಹಳ್ಳಿ ತಾಲೂಕಿನ ಅಳಿಯಂದಿರು. ಇವರ ಪತ್ನಿ ಪ್ರೇಮಕ್ಕ ಅವರು ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಮದವರು. ಇದರಿಂದ ಎಸ್.ಎಂ. ಕೃಷ್ಣ ಅವರಿಗೆ ತೀರ್ಥಹಳ್ಳಿ ತಾಲೂಕಿನವನಾದ ನನ್ನ ಬಗ್ಗೆ ವಿಶೇಷ ಮಮಕಾರವನ್ನು ಹೊಂದಿದ್ದರು. ಅವರ ಮನೆಗೆ ಹೋದಾಗ ವಿಶೇಷ ಗೌರವವನ್ನು ಕೊಡುತ್ತಿದ್ದರು. ಕ್ಷೇತ್ರದ ಕಾಮಗಾರಿ ಮಂಜೂರು ಮಾಡಿಕೊಡುತ್ತಿದ್ದರು. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಜನ ಮಾನಸದಲ್ಲಿ ಉಳಿಯುವಂತಹ ಕೆಲಸವನ್ನು ಮಾಡಿದ್ದಾರೆ. ಬೆಂಗಳೂರನ್ನು ಸಿಗಪೂರ ಮಾಡಬೇಕೆಂಬ ಕನಸನ್ನು ಕಂಡವರು. ಬೆಂಗಳೂರನ್ನು ಐಟಿ ಬಿಟಿ ಸಿಟಿಯನ್ನಾಗಿ ಮಾಡಿದರು. ಕೇಂದ್ರದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಸಜ್ಜನ ರಾಜಕಾರಣಿಯಾಗಿದ್ದರು. ಸೌಮ್ಯ ಸ್ವಾಭವದ ರಾಜಕಾರಣಿಯನ್ನು ಕಳೆದುಕೊಂಡು ರಾಜ್ಯ ಬಡವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಶಾಸಕ ಆರಗ ಜ್ಞಾನೇಂದ್ರ ತೀವ್ರ ಸಂತಾಪ ಸೂಚಿಸಿದರು.

ರಾಜ್ಯದ ಹಿರಿಯ ಮುತ್ಸದ್ದಿ, ರಾಜಕೀಯ ಪಟು ಕೃಷ್ಣ ಅವರ ಅಗಲಿಕೆ ಬಹಳ ನೋವು ನೀಡಿದೆ. ಕೃಷ್ಣ ಅವರದ್ದು ರಾಜಕೀಯ ರಂಗದಲ್ಲಿ ದೊಡ್ಡ ಹೆಸರಾಗಿತ್ತು. ಮಂಡ್ಯದ ಕುಗ್ರಾಮದಲ್ಲಿ ಜನಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇವತ್ತು ಅವರ ಅಗಲಿಕೆ ತುಂಬಾ ನೋವು ಉಂಟುಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಕೂಡ ಸಂತಾಪ ಸೂಚಿಸಿದ್ದಾರೆ.

ಹಿರಿಯ ಕಿರಿಯರನ್ನೂ ಗೌರವಿಸುವ ಸ್ವಭಾವ, ಕಿರಿಯರಿಗೆ ರಾಜಕೀಯದ ಪಾಠ ಕಲಿಸಿದರು ,ಎತ್ತರದ ಸ್ವಭಾವದ ಅವರ ಆಡಳಿತದಲ್ಲಿ ಬೆಂಗಳೂರಿಗೆ ಹೆಸರು,ಮೆರಗು ಬಂದಿದೆ , ಇಂದು ಬೆಂಗಳೂರು ಐಟಿ ಸಿಟಿಯಾಗಲು ಕೃಷ್ಣ ಕೊಡುಗೆ ಅಪಾರವಾಗಿದೆ. ಅವರ ಅಗಲಿಕೆ ತುಂಬಾ ನಷ್ಟವಾಗಿದೆ, ಆ ಕುಟುಂಬಕ್ಕೆ ಅಗಲಿಕೆ ನಷ್ಟ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಕೃಷ್ಣ ಅವರು 40 ವರ್ಷಗಳಿಂದ ಮೈಸೂರಿನ ಅವಧೂತ ದತ್ತ ಪೀಠಕ್ಕೆ ಬರುತ್ತಿದ್ದರು. ಸ್ವಾಮೀಜಿ ಅವರ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್​ ಎಂ ಕೃಷ್ಣ ವಿಧಿವಶ

Last Updated : Dec 10, 2024, 12:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.