ETV Bharat / state

4,000 ನಲ್ಲಿಗಳಿಗೆ ಏರಿಯೇಟರ್​​ ಅಳವಡಿಕೆ: ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್​​ ಮನೋಹರ್​​ - aerators installed

ಬೆಂಗಳೂರಿನ ಹಲವು ಕಡೆ ಅಂದರೆ ಒಟ್ಟು 4000 ನಲ್ಲಿಗಳಿಗೆ ನೀರು ಫ್ಲೋ ರಿಸ್ಟ್ರಿಕ್ಟರ್ ಅ​ನ್ನು ಅಳವಡಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

4,000 ನಲ್ಲಿಗಳಿಗೆ ಏರಿಯೇಟರ್​​ ಅಳವಡಿಕೆ
4,000 ನಲ್ಲಿಗಳಿಗೆ ಏರಿಯೇಟರ್​​ ಅಳವಡಿಕೆ
author img

By ETV Bharat Karnataka Team

Published : Apr 5, 2024, 11:31 AM IST

ಬೆಂಗಳೂರು: ಜಲಮಂಡಳಿಯಿಂದ ಇಸ್ರೋ, ಬಿಬಿಎಂಪಿ, ಲೋಕಾಯುಕ್ತ ಕಚೇರಿ ಸೇರಿದಂತೆ ಹಲವೆಡೆಗಳಲ್ಲಿ ನಲ್ಲಿಗಳಿಗೆ ಏರಿಯೇಟರ್​​​​ ಅಳವಡಿಸುವ ಕಾರ್ಯ ಚುರುಕುಗೊಳಿಸಬೇಕಿದೆ. ಜಲಮಂಡಳಿಯು ಈವರೆಗೆ 4,000 ನಲ್ಲಿಗಳಿಗೆ ಏರಿಯೇಟರ್​ ಅಳವಡಿಕೆ ಮಾಡಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ನಲ್ಲಿಗಳಿಗೆ ಏರಿಯೇಟರ್​​ ಅಳವಡಿಕೆ
ನಲ್ಲಿಗಳಿಗೆ ಏರಿಯೇಟರ್​​ ಅಳವಡಿಕೆ

ಬೆಂಗಳೂರಲ್ಲಿ ನೀರು ಪೂರೈಕೆಯಲ್ಲಿ ಕೊರತೆ ಸಮಸ್ಯೆ ಆಗಿದೆ. ಬೇಸಿಗೆ ಕಾರಣ ಅಂತರ್ಜಲ ಕುಸಿದಿದ್ದು, ನೀರಿನ ಮಿತ ಬಳಕೆಗೆ ಜಲಮಂಡಳಿ ಆದ್ಯತೆ ನೀಡಿದೆ. ಇದರ ಭಾಗವಾಗಿ ಹೆಚ್ಚು ಜನರ ಸೇರುವ ಪ್ರದೇಶಗಳಲ್ಲಿ ನಲ್ಲಿಗಳಿಗೆ ಮೀತ ನೀರಿನ ಬಳಕೆಗೆ ಆಸರೆಯಾಗುವ ಏರಿಯೇಟರ್​ ಅಳವಡಿಕೆ ಕಾರ್ಯ ಮತ್ತಷ್ಟು ಚುರುಕು ಪಡೆದಿದೆ. ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವಂತಹ ಸರಕಾರಿ ಕಚೇರಿಗಳು ಹಾಗೂ ನಗರದ ಪ್ರಮುಖ ಸಂಸ್ಥೆಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮಾಲ್‌ಗಳಲ್ಲಿ, ವಾಣಿಜ್ಯ ಸಂಕೀರ್ಣಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ, ಸರಕಾರಿ ಕಟ್ಟಡಗಳಲ್ಲಿ, ಐಷಾರಾಮಿ ಹೋಟೆಲ್‌ಗಳಲ್ಲಿ, ರೆಸ್ಟೋರೆಂಟ್​ ಹಾಗೂ ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಚತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಏರಿಯೇಟರ್​ ಅಳವಡಿಕೆ ಕಡ್ಡಾಯಗೊಳಿಸಿದ್ದೇವೆ. ಈ ಹಿನ್ನೆಲೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಸರಕಾರಿ ಕಚೇರಿಗಳಲ್ಲಿ ಅಳವಡಿಕೆ ಮೂಲಕ ಪ್ರೇರಣೆ: ಸರಕಾರಿ ಕಚೇರಿಗಳಲ್ಲಿ ಏರಿಯೇಟರ್‌ಗಳನ್ನು ಕಡ್ಡಾಯವಾಗಿ ಅಳವಡಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಪ್ರೇರಣೆಯಾಗಬೇಕು ಎನ್ನುವ ದೃಷ್ಟಿಯಿಂದ ಮೊದಲ ಹಂತದಲ್ಲಿ ಬೆಂಗಳೂರು ಜಲಮಂಡಳಿಯ ಎಲ್ಲ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿದೆ.

ಎರಡನೇ ಹಂತದಲ್ಲಿ ನಗರದ ಪ್ರಮುಖ ಸರಕಾರಿ ಕಚೇರಿಗಳಾದ ಬಿಡಿಎ, ಬಿಎಸ್‌ಎನ್‌ಎಲ್, ಇಂದಿರಾ ಕ್ಯಾಂಟೀನ್, ಇನ್ ಕಮ್ ಟ್ಯಾಕ್ಸ್, ಬಿಬಿಎಂಪಿ ಸರಕಾರಿ ಶಾಲೆಗಳು, ಇಸ್ರೋ, ಬೆಗ್ಗರ್ಸ್ ಕಾಲೋನಿ, ಎಚ್​​ಎಎಲ್, ಬೆಮೆಲ್, ಸಿಲ್ಕ್ ಬೋರ್ಡ್, ಕೇಂದ್ರೀಯ ಸದನ, ಡಿಫೆನ್ಸ್ ಕಚೇರಿಗಳು, ವಿವಿ ಟವರ್, ಐಎಎಸ್ ಆಫಿಸರ್ಸ್ ಅಸೋಸಿಯೇಷನ್, ಆರ್‌ಟಿಓ, ಡಿಸಿ ಆಫೀಸ್, ಪೊಲೀಸ್ ಸ್ಟೇಷನ್, ಜಯದೇವ ಆಸ್ಪತ್ರೆೆ, ಸೆಂಟ್ರಲ್ ಫಾರ್ಮಸಿ, ಐಟಿಐ ಇನ್ಸಿಟ್ಯೂಟ್, ಸೆಂಟ್ರಲ್ ಫಾರ್ಮಸಿ, ಲೋಕಾಯುಕ್ತ ನಿವಾಸ, ಕೆಪಿಟಿಸಿಲ್, ಬಿಬಿಎಂಪಿ, ಕೆಎಂಎಫ್, ಬೆಸ್ಕಾಂ, ಪಿಟಿ ಕ್ವಾರ್ಟರ್ಸ್ ಮತ್ತು ಗ್ಯಾರಿಸನ್ ಎಂಜಿನಿಯರಿಂಗ್ ಕಟ್ಟಡಗಳಲ್ಲಿ ಜಲಮಂಡಳಿಯ ವತಿಯಿಂದಲೇ 4,000 ಏರಿಯೇಟರ್/ಫ್ಲೋ ರಿಸ್ಟ್ರಿಕ್ಟರ್ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಯಾವುದೇ ಹೊಸ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲಿಸಿದಲ್ಲಿ ಜನರ ತಮ್ಮಲ್ಲಿ ಅಳವಡಿಸಿಕೊಳ್ಳುವುದಕ್ಕೆೆ ಮುಂದಾಗುತ್ತಾರೆ. ಈ ಹಿನ್ನೆೆಲೆ ಸುತ್ತೋಲೆ ಹೊರಡಿಸುವ ಮುನ್ನವೇ ನಮ್ಮ ಜಲಮಂಡಳಿ ಕಚೇರಿಗಳಲ್ಲಿ ಈ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ. ಇಸ್ರೋ, ಬಿಬಿಎಂಪಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಏರಿಯೇಟರ್ ಅಳವಡಿಸಲಾಗಿದೆ. ಎಲ್ಲ ಸರಕಾರಿ ಕಚೇರಿಗಳ ನಲ್ಲಿಗಳಿಗೂ ಮೀತ ನೀರಿನ ಬಳಕೆಗೆ ಸಹಾಯವಾಗುವ ಈ ಏರಿಯೇಟರ್‌ನ್ನು ಅಳವಡಿಸಲಾಗುವುದು. ಇದಕ್ಕೆೆ ತಗಲುವ ವೆಚ್ಚವನ್ನು ಪಾರದರ್ಶಕವಾಗಿ ಗ್ರಾಹಕರಿಂದಲೇ ತಗೆದುಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕ, ರಕ್ಷಣೆಗೆ ಹೋದ ವೃದ್ಧ; ಇಬ್ಬರೂ ನೀರುಪಾಲು - A BOY AND AN OLD MAN DROWN

ETV Bharat Logo

Copyright © 2024 Ushodaya Enterprises Pvt. Ltd., All Rights Reserved.