ETV Bharat / state

ಬೆಂಗಳೂರಲ್ಲಿ ಡಬಲ್​ ಮರ್ಡರ್​; ರಾಡ್​ನಿಂದ ಹೊಡೆದು ಇಬ್ಬರು ಬಸ್​ ಸರ್ವಿಸ್​ ಕೆಲಸಗಾರರ ಕೊಲೆ - DOUBLE MURDER

ಬೆಂಗಳೂರಿನ ಸಿಂಗಹಳ್ಳಿ ಗ್ರಾಮದ ಬಳಿ ರಾಡ್​ನಿಂದ ಹೊಡೆದು ಬಸ್​​ ಸರ್ವಿಸ್ ಕೆಲಸ ಮಾಡುತ್ತಿದ್ದ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ರಾಡ್​ನಿಂದ ಹೊಡೆದು ಬಸ್​ ಸರ್ವಿಸ್​ ಕೆಲಸಗಾರರ ಹತ್ಯೆ
ಬೆಂಗಳೂರಿನಲ್ಲಿ ರಾಡ್​ನಿಂದ ಹೊಡೆದು ಬಸ್​ ಸರ್ವಿಸ್​ ಕೆಲಸಗಾರರ ಹತ್ಯೆ (ETV Bharat)
author img

By ETV Bharat Karnataka Team

Published : Nov 9, 2024, 1:41 PM IST

ಬೆಂಗಳೂರು: ತಡರಾತ್ರಿ ನಗರದ ಹೊರವಲಯದ ಸಿಂಗಹಳ್ಳಿ ಗ್ರಾಮದ ಬಳಿ ಜೋಡಿ ಕೊಲೆ ನಡೆದಿದೆ.

ಎಸ್.ಆರ್.ಎಸ್ ಬಸ್‌ಗಳ ಸರ್ವಿಸ್​ ಹಾಗೂ ಪಾರ್ಕಿಂಗ್ ಮಾಡಲಾಗುತ್ತಿದ್ದ ಸ್ಥಳದಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ನಾಗೇಶ್ (55) ಮತ್ತು ಮಂಜುನಾಥ್ (50) ಎಂಬುವರ ಕೊಲೆಯಾಗಿದೆ.

ಮೃತರಿಬ್ಬರೂ ಬಸ್‌ಗಳ ಸರ್ವಿಸ್​ ಕೆಲಸ ಮಾಡುತ್ತಿದ್ದು, ಅವರು ಕೆಲಸ ನಿರ್ವಹಿಸುತ್ತಿದ್ದ ಶೆಡ್​ನಲ್ಲಿಯೇ ಮೃತದೇಹಗಳು ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಬಾಗಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗಿದೆ. ನಂತರವಷ್ಟೇ ಹತ್ಯೆಗೆ ಕಾರಣ ತಿಳಿಯಬೇಕಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ವಿ. ಸಜೀತ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹೊತ್ತಿ ಉರಿದ ಕಾರ್ಖಾನೆ, ಕೋಟ್ಯಂತರ ರೂ. ಮೌಲ್ಯದ ವುಡ್ ಬೆಂಕಿಗಾಹುತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.