ETV Bharat / state

ಆನ್​ಲೈನ್​ ಗೇಮಿಂಗ್​ನಿಂದ ಹಣ ಕಳೆದಿದ್ದಕ್ಕೆ ಸಹೋದರನನ್ನೇ ಕೊಲೆಗೈದ ಅಣ್ಣ: ಆರೋಪಿ‌ ಬಂಧನ - Anekal murder case - ANEKAL MURDER CASE

ಮೊಬೈಲ್​ ಆನ್​ಲೈನ್​ ಗೇಮಿಂಗ್​ನಿಂದ ಹಣ ಕಳೆದಿದ್ದಕ್ಕೆ ತನ್ನ ಸಹೋದರನನ್ನೇ ಅಣ್ಣನೋರ್ವ ಕೊಲೆ ಮಾಡಿರುವ ಘಟನೆ ಬೆಂಗಳೂರು ನಗರದ ಆನೇಕಲ್​ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ‌ಯನ್ನು ಪೊಲೀಸರು ಬಂಧಿಸಿದ್ದಾರೆ.

online gaming  Bengaluru  murder case  Anekal Police
ಆನ್​ಲೈನ್​ ಗೇಮಿಂಗ್​ನಿಂದ ಹಣ ಕಳೆದಿದ್ದಕ್ಕೆ ಸಹೋದರನನ್ನೇ ಕೊಲೆಗೈದ ಅಣ್ಣ: ಆರೋಪಿ‌ ಬಂಧನ (ETV Bharat)
author img

By ETV Bharat Karnataka Team

Published : May 19, 2024, 7:54 AM IST

ಆನೇಕಲ್ (ಬೆಂಗಳೂರು): ಮೊಬೈಲ್ ಆನ್​ಲೈನ್ ಗೇಮಿಂಗ್​ನಿಂದ ಹಣ ಕಳೆದುಕೊಂಡಿದ್ದಕ್ಕೆ ತನ್ನ ಸಹೋದರನನ್ನೇ ಅಣ್ಣನೋರ್ವ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದ ಆನೇಕಲ್​ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ‌ಯನ್ನು ಪೊಲೀಸರು ನಿನ್ನೆ (ಶನಿವಾರ) ಬಂಧಿಸಿದ್ದಾರೆ.

ಸರ್ಜಾಪುರ ಭಾಗದ ನೆರಿಗಾ ಮಂಜುನಾಥ್ ಎಂಬುವವರ ಬಡಾವಣೆಯ ಶೆಡ್​ನಲ್ಲಿ ವಾಸವಿದ್ದ 12 ವರ್ಷದ ತಮ್ಮನನ್ನು ಆತನ ಅಣ್ಣ 18 ವರ್ಷದ ಶಿವಕುಮಾರ್ ಕೊಲೆ ಮಾಡಿದ್ದು, ಸರ್ಜಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆ ಮಂತ್ರಾಲಯ ತಾಲೂಕು ಸೂಳಿಕೇರಿ ಗ್ರಾಮ ಮೂಲದ ಬಸವರಾಜು ಪುತ್ರರಾದ ಇವರು ಗಾರೆ ಕೆಲಸಕ್ಕೆ ಮೂರು ತಿಂಗಳ ಹಿಂದೆ ಬಂದು ನೆರಿಗಾ ಗ್ರಾಮದ ಬಡಾವಣೆಯಲ್ಲಿ ವಾಸವಿದ್ದರು. ಮೊಬೈಲ್ ಆನ್​ಲೈನ್ ಗೇಮಿಂಗ್​ನಿಂದ ಹಣ ಕಳೆದುಕೊಂಡಿರುವ ವಿಚಾರಕ್ಕೆ ಬುಧವಾರ ಅಣ್ಣ-ತಮ್ಮ ಜಗಳವಾಡಿದ್ದರು. ಈ ವೇಳೆ ನೀಲಗಿರಿ ತೋಪಿನಲ್ಲಿಯೇ ಮಾತಿಗೆ ಮಾತು ಬೆಳೆದಿದ್ದು, ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮನೆಯಲ್ಲಿ ಅಣ್ಣ ಸುಳ್ಳು ಹೇಳಿದ್ದ. ಆದ್ರೆ, ಅಣ್ಣ ಸುತ್ತಿ‌ಗೆ ಮೂಲಕ‌ ತಮ್ಮನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಅಮಾನತು - DCP SUSPENDS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.