ETV Bharat / state

ಇಸ್ಪೀಟ್ ಆಡುತ್ತಿದ್ದ ಬಾಮೈದುನನಿಗೆ ಚಾಕು ಇರಿದು ಕೊಂದ ಬಾವ - Murder - MURDER

ವ್ಯಕ್ತಿಯೊಬ್ಬ ಇಸ್ಪೀಟ್ ಆಡುತ್ತಿದ್ದ ಬಾಮೈದುನನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

BROTHER IN LAW STABBED  MURDER IN BENGALURU  HUSBAND AND WIFE QUARREL  BENGALURU
ಇಸ್ಪೀಟ್ ಆಡುತ್ತಿದ್ದ ಬಾಮೈದುನನಿಗೆ ಚಾಕು ಇರಿದು ಕೊಂದ ಬಾವ
author img

By ETV Bharat Karnataka Team

Published : Apr 10, 2024, 9:04 AM IST

ಬೆಂಗಳೂರು : ಕೌಟುಂಬಿಕ ಕಲಹದಲ್ಲಿ ಬಾವನೇ ತನ್ನ ಬಾಮೈದನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಮಂಗಳವಾರ ಸಂಜೆ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ವೆಂಕಟೇಶ್ವರಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಿರಣ್ ಕುಮಾರ್ ಎಂದು ಗುರುತಿಸಲಾಗಿದ್ದು, ಕೊಲೆ ಮಾಡಿರುವುದು ಆತನ ಬಾವ ಲಕ್ಷ್ಮಣ ಎಂದು ತಿಳಿದು ಬಂದಿದೆ.

ಲಕ್ಷ್ಮಣ ಮತ್ತು ಆತನ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ನಿನ್ನೆ ಬಾವ - ಬಾಮೈದುನನ ನಡುವೆ ಗಲಾಟೆ ಆಗಿದೆ. ಯುಗಾದಿ ಹಬ್ಬದ ಪ್ರಯುಕ್ತ ವೆಂಕಟೇಶ್ವರಪುರದ ಗಲ್ಲಿಯಲ್ಲಿ ಇಸ್ಪೀಟ್ ಆಡುತ್ತಿದ್ದ ವೇಳೆ ಕಿರಣ್ ಕುಮಾರನಿಗೆ ಲಕ್ಷ್ಮಣ ಚಾಕು ಇರಿದು ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಇಸ್ಪೀಟ್ ಎಲೆಗಳ ಮೇಲಿದ್ದ ಹಣ ಎತ್ತಲು ಬಗ್ಗಿದಾಗ ಕಿರಣ್ ಕುಮಾರ್ ಬೆನ್ನಿಗೆ ಬಾವ ಲಕ್ಷ್ಮಣ ಚಾಕುವಿನಿಂದ ಇರಿದಿದ್ದು, ತಕ್ಷಣ ಗಾಯಾಳು ಕಿರಣ್ ಕುಮಾರ್​ನನ್ನ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿತ್ತು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಕುಮಾರ್ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: ಛತ್ತೀಸ್​ಗಢ ಬಸ್​ ಅಪಘಾತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ: 14 ಮಂದಿಗೆ ಗಾಯ, ರಾಷ್ಟ್ರಪತಿ - ಪ್ರಧಾನಿ ಸಂತಾಪ - durg accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.