ETV Bharat / state

ಬೆಂಗಳೂರು: ನಿಲ್ಲಿಸಿದ್ದ ಸ್ಕೂಟರ್‌ಗೆ ಟಚ್ ಆಗಿ ಬಿದ್ದ ಬಾಲಕ, ಗೂಡ್ಸ್​ ವಾಹನದ ಚಕ್ರಕ್ಕೆ ಸಿಲುಕಿ ಸಾವು

ಬಾಲಕನೋರ್ವ ಆಕಸ್ಮಿಕವಾಗಿ ಗೂಡ್ಸ್​​ ವಾಹನದ ಕೆಳಗೆ ಬಿದ್ದು ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಘಟನೆ ಸೆರೆಯಾಗಿದೆ.

boy death
ಘಟನೆಯ ಸಿಸಿಟಿವಿ ದೃಶ್ಯ (ETV Bharat)
author img

By ETV Bharat Karnataka Team

Published : Oct 13, 2024, 12:40 PM IST

ಬೆಂಗಳೂರು: ಓಡಿ ಬರುತ್ತಿರುವಾಗ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್‌ಗೆ ಟಚ್ ಆಗಿ ನೆಲಕ್ಕೆ ಬಿದ್ದ ಬಾಲಕ ಗೂಡ್ಸ್​​ ವಾಹನದ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಕೆ.ಜಿ.ಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಕ್ಟೋಬರ್ 11ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

5 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮನೆಯ ಮುಂದೆ ಆಟವಾಡುತ್ತಿದ್ದು, ಓಡುವಾಗ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಸ್ಕೂಟರ್​ಗೆ ಟಚ್ ಆಗಿ, ಅದೇ ಸಂದರ್ಭದಲ್ಲಿ ಪಕ್ಕದಲ್ಲಿ ಸಾಗುತ್ತಿದ್ದ ವಾಹನದ ಅಡಿ ಬಿದ್ದಿದ್ದಾನೆ. ಆಗ ಹಿಂಬದಿ ಚಕ್ರ ತಲೆಯ ಮೇಲೆ ಹರಿದಿದೆ. ಚಾಲಕ ತಕ್ಷಣ ನಿಲ್ಲಿಸಿದ್ದರೂ ಕೂಡ, ಬಾಲಕನ ತಲೆ ವಾಹನದ ಚಕ್ರದ ಕೆಳಗೆ ಸಿಲುಕಿತ್ತು.

ಬಳಿಕ ವಾಹನವನ್ನು ಹಿಂದಕ್ಕೆ ತೆಗೆದುಕೊಂಡು, ಬಾಲಕನನ್ನು ಹೊರಗೆ ತೆಗೆಯಲಾಗಿದೆ. ಆದರೆ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಪೋಷಕರು ನೀಡಿದ ದೂರಿನ ಅನ್ವಯ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇದನ್ನೂ ಓದಿ: ವಿಜಯನಗರ: ಬೆಲ್ಲದ ಬಂಡಿ ಉತ್ಸವದಲ್ಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ, ಇಬ್ಬರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.