ETV Bharat / state

ಹೊಸಕೋಟೆ ಹಾಸ್ಟೆಲ್​ನಲ್ಲಿ ವಿದ್ಯುತ್​​ ಸ್ಪರ್ಶಿಸಿ ಬಾಲಕ ಸಾವು - Boy Dies Due To Electric Shock - BOY DIES DUE TO ELECTRIC SHOCK

ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿಂದು ಕರೆಮಟ್​ ಶಾಕ್​ನಿಂದ ಬಾಲಕ ಸಾವನ್ನಪ್ಪಿದ್ದಾನೆ.

Boy dies due to electric shock
ಹೊಸಕೋಟೆ ಹಾಸ್ಟೆಲ್​ನಲ್ಲಿ ವಿದ್ಯುತ್​​ ಸ್ಪರ್ಶಿಸಿ ಬಾಲಕ ಸಾವು (ETV Bharat)
author img

By ETV Bharat Karnataka Team

Published : Jun 9, 2024, 2:26 PM IST

ಬಾಲಕ ಸಾವು, ಪೋಷಕರ ಪ್ರತಿಕ್ರಿಯೆ (ETV Bharat)

ಹೊಸಕೋಟೆ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇಂದು ಬೆಳಗ್ಗೆ ವಿದ್ಯುತ್ ಶಾಕ್​​​​​ನಿಂದ ಬಾಲಕ ಮೃತಪಟ್ಟಿದ್ದಾನೆ. ಬಟ್ಟೆ ಒಣ ಹಾಕಲು ಹೋದ ವೇಳೆ ಈ ಘಟನೆ ನಡೆದಿದೆ. ಸಾಯಿಭವನ್ (13) ಮೃತ ಬಾಲಕ.

ಬೆಳಗ್ಗೆ ಹಾಸ್ಟೆಲ್​​​ ಮಹಡಿ ಮೇಲೆ ಬಟ್ಟೆ ಒಣ ಹಾಕಲು ಹೋದಾಗ ವಸತಿ ನಿಲಯದ ಮೇಲಿನ 11ಕೆವಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿ ಹೊಸಕೋಟೆ ತಾಲೂಕಿನ ಸೂಲಿಬೆಲೆ ನಿವಾಸಿಯಾಗಿದ್ದು, ಕಳೆದ ಎರಡು ವರ್ಷದಿಂದ ಬಾಲಕರ ವಸತಿ ನಿಲಯದಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಮೃತ ವಿದ್ಯಾರ್ಥಿಯ ಮೃತದೇಹ ರವಾನಿಸಲಾಗಿದೆ. ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಹೈವೇಯಿಂದ ಕೆರೆಗೆ ಹಾರಿದ ಕಾರು: ಇದು ಎದೆ ನಡುಗಿಸುವ ಭಯಾನಕ ರಸ್ತೆ ಅಪಘಾತ! ವಿಡಿಯೋ - Car Accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.