ETV Bharat / state

ದಾಂಡೇಲಿ: ದಂಪತಿ ನಡುವೆ ಜಗಳ, ಮೊಸಳೆಗಳಿದ್ದ ನಾಲೆಗೆ ಮಗನ ಎಸೆದ ತಾಯಿ - Boy Death - BOY DEATH

ಪತಿ - ಪತ್ನಿಯ ಜಗಳದಲ್ಲಿ ಮಗ ಮೊಸಳೆಗೆ ಬಲಿಯಾದ ಘಟನೆ ದಾಂಡೇಲಿಯಲ್ಲಿ ನಡೆದಿದೆ.

boy died in Dandeli
ಹಾಲಮಡ್ಡಿ ನಾಲೆ (ETV Bharat)
author img

By ETV Bharat Karnataka Team

Published : May 5, 2024, 5:48 PM IST

ಕಾರವಾರ: ಪತಿ - ಪತ್ನಿಯ ಜಗಳದಲ್ಲಿ ಆರು ವರ್ಷದ ಮೂಗ ಮಗನನ್ನು ತಾಯಿ ನಾಲೆಗೆ ಎಸೆದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿಯಲ್ಲಿ ನಡೆದಿದೆ. ಬಾಲಕ ವಿನೋದ್ (6) ಶವ ಭಾನುವಾರ ನಾಲೆಯಲ್ಲಿ ಪತ್ತೆಯಾಗಿದೆ.

ದಂಪತಿ ರವಿಕುಮಾರ್ ಹಾಗೂ ಸಾವಿತ್ರಿ ನಡುವೆ ಆಗಾಗ ಜಗಳವಾಗುತ್ತಿತ್ತು. ಮೂಗನಾಗಿದ್ದ ಮಗನ ಮೇಲೆ ಪ್ರತಿ ಬಾರಿ ಕುಡಿದು ಬಂದು ಜಗಳವಾಡುತ್ತಿದ್ದ ರವಿಕುಮಾರ್, ಮಗ ಸಾಯಲಿ ಎಂದು ಬೈಯುತ್ತಿದ್ದ. ಶನಿವಾರ ರಾತ್ರಿಯೂ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಸಾವಿತ್ರಿಯೇ‌ ಮಗನನ್ನು ನಾಲೆಗೆ ಎಸೆದಿದ್ದಳು ಎಂದು ತಿಳಿದುಬಂದಿದೆ. ಕಾಳಿ ನದಿಗೆ ಸೇರುವ ನಾಲೆ ಇದಾಗಿದ್ದು, ಮೊಸಳೆಗಳು ಹೆಚ್ಚಾಗಿ ಕಂಡುಬರುತ್ತವೆ.

ವಿಷಯ ತಿಳಿದ ಸ್ಥಳೀಯರು ಶನಿವಾರ ರಾತ್ರಿಯೇ ಬಾಲಕನಿಗಾಗಿ ಹುಡುಕಾಟ ನಡೆಸಿದ್ದರಾದರೂ ಆತ ಪತ್ತೆಯಾಗಿರಲಿಲ್ಲ. ಭಾನುವಾರ ಶವ ಪತ್ತೆಯಾಗಿದ್ದು, ಬಾಲಕನ ಬಲಗೈಯನ್ನು ಮೊಸಳೆ ತಿಂದುಹಾಕಿದೆ. ದಾಂಡೇಲಿಯ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಬಾಲಕನ ಮೃತದೇಹ ಪತ್ತೆ ಮಾಡಲಾಗಿದೆ.

ಆರೋಪಿಗಳಾದ ರವಿಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಕಾಲಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಮೊಸಳೆ - CROCODILE ATTACK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.