ETV Bharat / state

ಮಾದಕ ವಸ್ತುಗಳ ತೂಕದಲ್ಲಿ ಬ್ಲಾಟರ್ ಪೇಪರ್‌ ಪರಿಗಣಿಸಬೇಕು: ಹೈಕೋರ್ಟ್ - Blotter Paper - BLOTTER PAPER

ಮಾದಕ ವಸ್ತುಗಳ ತೂಕದಲ್ಲಿ ಬ್ಲಾಟರ್ ಪೇಪರ್‌ ಅನ್ನೂ ಕೂಡಾ ಪರಿಗಣಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

High Court  Lysergic acid diethylamide  Bengaluru
ಹೈಕೋರ್ಟ್ (ETV Bharat)
author img

By ETV Bharat Karnataka Team

Published : May 31, 2024, 10:32 AM IST

ಬೆಂಗಳೂರು: ಎಲ್‌ಎಸ್‌ಡಿ (ಲೈಸರ್ಜಿಕ್ ಆ್ಯಸಿಡ್ ಡೈಥೈಲಾಮೈಡ್)ನಂತಹ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ, ಅದರೊಂದಿಗಿರುವ ಬ್ಲಾಟರ್ ಪೇಪರ್‌ನ ತೂಕವನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರಿನ ನಿವಾಸಿ ಕಲಾಂ ನರೇಂದ್ರ ಅಲಿಯಾಸ್ ಪಾಂಡು ಎಂಬವರು ತಮ್ಮ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ನಡೆಸಿತು.

ಹಲವು ಪ್ರಕರಣಗಳಲ್ಲಿ ಆಕ್ಷೇಪಾರ್ಹ ಮಾದಕ ವ್ಯಸ್ತುಗಳ ತೂಕವನ್ನು ಪರಿಗಣಿಸುವ ಸಂದರ್ಭದಲ್ಲಿ ಬ್ಲಾಟರ್ ಪೇಪರ್‌ ಅನ್ನು ಪರಿಗಣಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಹೀಗಾಗಿ ಬಾಟ್ಲರ್ ಪೇಪರ್ ಎಂಬುದು ಎಲ್‌ಎಸ್‌ಡಿಯೊಂದಿಗೆ ಇರಲಿದ್ದು, ಎರಡನ್ನೂ ಒಟ್ಟಾಗಿ ಸೇವಿಸುತ್ತಾರೆ ಎಂದು ನ್ಯಾಯಪೀಠ ಹೇಳಿದೆ.

ಬ್ಲಾಟರ್ ಪೇಪರ್ ಸೈಕೋಟ್ರೋಪಿಕ್ ವಸ್ತುವಾಗಿರುವ ಎಲ್‌ಎಸ್‌ಡಿಯ ಪರ್ಯಾಯ ರೂಪ. ಎಲ್‌ಎಸ್‌ಡಿಯೊಂದಿಗೆ ಬ್ಲಾಟರ್ ಪೇಪರ್‌ ಸೇವನೆ ಮಾಡುವುದರಿಂದ ಅದನ್ನೂ ಸಹ ಮಾದಕ ವಸ್ತುವಿನೊಂದಿಗೆ ಪರಿಗಣಿಸಬೇಕು ಎಂದು ಪೀಠ ತಿಳಿಸಿತು.

ಬ್ಲಾಟರ್ ಪೇಪರ್​ನೊಂದಿಗೆ ಆಕ್ಷೇಪಾರ್ಹ ಔಷಧದ ತೂಕವನ್ನು ಪರಿಗಣಿಸಿದರೆ ಅದು 0.11 ಗ್ರಾಂ ತೂಗುತ್ತದೆ. ಇದು ವಾಣಿಜ್ಯ ಪ್ರಮಾಣವಾಗಿದೆ. ಆದ್ದರಿಂದ ಪ್ರತೀ ಬ್ಲಾಟರ್ ಪೇಪರ್‌ನಲ್ಲಿ ಸುಮಾರು 30 ರಿಂದ 50 ಮೈಕ್ರೋಗ್ರಾಂಗಳಷ್ಟು ಸೈಕೋಟ್ರೋಪಿಕ್ ವಸ್ತುವಿರಬಹುದು. ಆದ್ದರಿಂದ ವಶಪಡಿಸಿಕೊಂಡ ಎಲ್‌ಎಸ್‌ಡಿ ಸಣ್ಣ ಪ್ರಮಾಣದಲ್ಲಿತ್ತು (2000 ಮೈಕ್ರೋ ಗ್ರಾಂಗಳವರೆಗೆ) ಎಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ವಿದೇಶಿ ಅಂಚೆ ಕಚೇರಿಗೆ ಮಾದಕ ದ್ರವ್ಯಗಳ ಪಾರ್ಸೆಲ್ ಬರುತ್ತಿರುವ ಕುರಿತು ಮೂಲಗಳ ಮಾಹಿತಿಯ ಆಧಾರದಲ್ಲಿ ಎನ್‌ಸಿಬಿ ಅಧಿಕಾರಿಗಳು ತಡೆಹಿಡಿದಿದ್ದರು. ಅದರಲ್ಲಿ 0.11 ಗ್ರಾಂ ತೂಕದ 10 ಎಲ್‌ಎಸ್‌ಡಿ ಸ್ಟ್ರಿಪ್‌ಗಳು ಮತ್ತು 34.38 ಗ್ರಾಂ ಗಾಂಜಾ ಪತ್ತೆಯಾಗಿತ್ತು.

ಹಳೆ ಮದ್ರಾಸ್ ರಸ್ತೆ ನಿವಾಸಿಯಾಗಿರುವ ಅರ್ಜಿದಾರ ಕಲಾಂ ನರೇಂದ್ರ ಅಲಿಯಾಸ್ ಪಾಂಡು ಎಂಬವರ ವಿಳಾಸಕ್ಕೆ ತಲುಪಬೇಕಿತ್ತು. ಎನ್‌ಸಿಬಿ ಅಧಿಕಾರಿಗಳು ಪಾರ್ಸೆಲ್​ ತಡೆದು ನಕಲಿ (ಡಮ್ಮಿ) ಪಾರ್ಸೆಲ್‌ ಸಿದ್ಧಪಡಿಸಿದ್ದರು. ಪೋಸ್ಟ್‌ಮ್ಯಾನ್ ಮೂಲಕ ಪಾಂಡುವಿಗೆ ತಲುಪಿಸಲು ವ್ಯವಸ್ಥೆ ಮಾಡಿದ್ದರು. ಮನೆ ಬಾಗಿಲ ಬಳಿ ಬಂದ ಪೋಸ್ಟ್​ಮ್ಯಾನ್‌ ಮೂಲಕ ತಾನು ಪಾಂಡು ಎಂದು ತಿಳಿಸಿ ಪಾರ್ಸೆಲ್‌ ಸ್ವೀಕರಿಸಿದ್ದರು. ತಕ್ಷಣ ಎನ್‌ಸಿಬಿ ಅಧಿಕಾರಿಗಳು ಪಾಂಡುವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದನ್ನು ಪ್ರಶ್ನಿಸಿ ಪಾಂಡು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಸ್ವೀಕರಿಸಿರುವ ಮಾದಕ ವಸ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಅದನ್ನು ವಾಣಿಜ್ಯ ಬಳಕೆಗೆ ಪಡೆದುಕೊಳ್ಳದೇ ಸ್ವಂತ ಉದ್ದೇಶಕ್ಕಾಗಿ ಬಳಕೆಗಾಗಿ ಸ್ವೀಕರಿಸಿದ್ದರು. ಅದು ಅತ್ಯಂತ ಸಣ್ಣ ಪ್ರಮಾಣದಲ್ಲಿರುವುದರಿಂದ ಎನ್‌ಡಿಪಿಎಸ್ ಕಾಯಿದೆ ಉಲ್ಲಂಘನೆ ಆಗುವುದಿಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್, ವಿಮಾನ ನಿಲ್ದಾಣದಲ್ಲಿ ಬಂಧಿಸಿದ SIT - SIT Arrests Prajwal Revanna

ETV Bharat Logo

Copyright © 2025 Ushodaya Enterprises Pvt. Ltd., All Rights Reserved.