ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಸದ ಪಿ.ಸಿ.ಮೋಹನ್ ಹಾಗೂ ಪತ್ನಿಯ ಒಟ್ಟು ಆಸ್ತಿ ಮೌಲ್ಯ 81.30 ಕೋಟಿ ರೂ.ಗಳಾಗಿದೆ.
ಚುನಾವಣಾ ಆಯೋಗಕ್ಕೆ ಪಿ.ಸಿ.ಮೋಹನ್ ಸಲ್ಲಿಸಿರುವ ವಿವರದಲ್ಲಿ 10.46 ಕೋಟಿ ರೂ. ಚರಾಸ್ತಿ, ಪತ್ನಿ ಶೈಲಾ 4.39 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಅದೇ ರೀತಿ ಪಿ.ಸಿ.ಮೋಹನ್ 19.18 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, ಶೈಲಾ ಅವರಿಗೆ 22.21 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಮೋಹನ್ ಅವರು 5.79 ಕೋಟಿ ರೂ. ಸಾಲ ಹೊಂದಿದ್ದರೆ, ಪತ್ನಿ ಹೆಸರಲ್ಲಿ 10.07 ಕೋಟಿ ರೂ. ಸಾಲವಿದೆ.
ಪಿ.ಸಿ.ಮೋಹನ್ 31.40 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನ ಹಾಗೂ 2.31 ಲಕ್ಷ ರೂ. ಮೌಲ್ಯದ ಮೂರು ಕೆಜಿ ಬೆಳ್ಳಿ ಹೊಂದಿದ್ದರೆ, ಶೈಲಾ ಅವರ ಬಳಿ 31.40 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನ ಹಾಗೂ 3.86 ಕೆಜಿ ಬೆಳ್ಳಿ ಇದೆ.
ಚರಾಸ್ತಿ - 14.85 ಕೋಟಿ ರೂ.
ಸ್ಥಿರಾಸ್ತಿ - 41.40 ಕೋಟಿ ರೂ.
ಸಾಲ - 15.86 ಕೋಟಿ ರೂ.
ಬಾಕಿ ಇರುವ ಕ್ರಿಮಿನಲ್ ಪ್ರಕರಣ: 5
ಚರಾಸ್ತಿ ವಿವರ: ವಿವಿಧ ಬ್ಯಾಂಕ್‌ಗಳಲ್ಲಿ 11.12 ಕೋಟಿ ರೂ. ಠೇವಣಿ, ಒಂದು ಕೆಜಿ ಚಿನ್ನ, 8 ಕೆಜಿ ಬೆಳ್ಳಿ.
ಸ್ಥಿರಾಸ್ತಿ ವಿವರ : ಬೆಳ್ಳಂದೂರು ಬಳಿ ವಾಣಿಜ್ಯ ಮಳಿಗೆ ಹಾಗೂ ಬನಶಂಕರಿ ಸಮೀಪ ಅಪಾರ್ಟ್‌ಮೆಂಟ್.
ಇದನ್ನೂ ಓದಿ: ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್, ಹಾಸನದಲ್ಲಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ