ETV Bharat / state

ಸ್ಪೀಕರ್ ಖಾದರ್ ನಡೆ ಖಂಡಿಸಿ ಬಿಜೆಪಿ ಸದಸ್ಯರಿಂದ ಆಕ್ರೋಶ: ಚೇಂಬರ್​​ಗೆ ನುಗ್ಗಿ ತೀವ್ರ ತರಾಟೆ

ಬಿಜೆಪಿ ಸದಸ್ಯರು ಸ್ಪೀಕರ್ ಕಚೇರಿಗೆ ನುಗ್ಗಿ ಯು.ಟಿ.ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸದನದಲ್ಲಿ ವಿಚಾರ ಪ್ರಸ್ತಾಪಿಸಿ ಸ್ಪೀಕರ್ ನಡೆ ವಿರೋಧಿಸಲು ನಿರ್ಧರಿಸಿದ್ದಾರೆ.

ಸ್ಪೀಕರ್ ನಡೆ ಖಂಡಿಸಿ ಬಿಜೆಪಿ ಸದಸ್ಯರಿಂದ ಆಕ್ರೋಶ
ಸ್ಪೀಕರ್ ನಡೆ ಖಂಡಿಸಿ ಬಿಜೆಪಿ ಸದಸ್ಯರಿಂದ ಆಕ್ರೋಶ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ಸ್ಪೀಕರ್ ಯು.ಟಿ.ಖಾದರ್ ನಡೆ ಖಂಡಿಸಿ ಬಿಜೆಪಿ ಸದಸ್ಯರು ಅವರ ಕೊಠಡಿಗೆ ತೆರಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು. ಸದನದಲ್ಲಿ ಸ್ಪೀಕರ್ ಖಾದರ್ ಪಕ್ಷಾತೀತವಾಗಿ ನಡೆದುಕೊಳ್ತಿಲ್ಲ ಎಂದು ಆರೋಪಿಸಿ ಸದನ‌ ಮುಂದೂಡಿಕೆಯಾದ ಕೂಡಲೇ ಬಿಜೆಪಿ ಸದಸ್ಯರೆಲ್ಲರೂ ಸ್ಪೀಕರ್ ಕೊಠಡಿಗೆ ತೆರಳಿ ಘೇರಾವ್ ಹಾಕಿದರು. ಈ ವೇಳೆ ಗದ್ದಲ, ಗಲಾಟೆ, ಮಾತಿನ ಚಕಮಕಿ ನಡೆಯಿತು. ಏಕಾಏಕಿ ಸ್ಪೀಕರ್ ಕೊಠಡಿಗೆ ಬಿಜೆಪಿ ಸದಸ್ಯರು ನುಗ್ಗಿದ ಪರಿಣಾಮ ಮಾರ್ಷಲ್‌ಗಳು ಏನು ನಡೆಯುತ್ತಿದೆ ಎಂದು ಗೊತ್ತಾಗದೇ ಗೊಂದಲಕ್ಕೊಳಗಾದರು.

ಗದ್ದಲದ ಮಧ್ಯೆಯೇ ಸ್ಪೀಕರ್ ಕೊಠಡಿ ಬಾಗಿಲು ಹಾಕಿದ ಮಾರ್ಷಲ್​​ಗಳು ಒಳಗಿನ ಗಲಾಟೆ ಹೊರಗೆ ಕೇಳಿಸದಂತೆ ತಡೆಯಲು ಕಸರತ್ತು ನಡೆಸಿದರು. ಶೂನ್ಯ ವೇಳೆಯಲ್ಲಿ ಮೀಸಲಾತಿ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯ ವಿಜಯಾನಂದ ಕಾಶಪ್ಪನವರ್ ನೋಟಿಸ್ ನೀಡಿದ್ದರು. ಈ ಮಧ್ಯೆ ಪಂಚಮಸಾಲಿ ಪ್ರತಿಭಟನಾಕಾರರ ಮೇಲಿನ ಲಾಠಿ ಚಾರ್ಜ್ ಸಂಬಂಧ ಗೃಹ ಸಚಿವರು ಉತ್ತರ ನೀಡಿದರು. ಅದಾದ ಬಳಿಕ ಆರ್.ಅಶೋಕ್ ಗೃಹ ಸಚಿವರ ಉತ್ತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಲಾಠಿ ಚಾರ್ಜ್ ಬಗ್ಗೆ ಸ್ಪೀಕರ್ ವಿಜಯಾನಂದ ಕಾಶಪ್ಪನವರ್​ಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಕಾಶಪ್ಪನವರ್ ಅವರು ಲಾಠಿ ಚಾರ್ಜ್ ವಿಚಾರದ ಜೊತೆಗೆ ಮೀಸಲಾತಿ ಸಂಬಂಧ ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಕ್ರಿಯಾ ಲೋಪ ಎತ್ತಿದರು. ಇದಕ್ಕೆ ಸ್ಪಂದಿಸದ ಸಭಾಧ್ಯಕ್ಷರು, ಸಚಿವ ಕೃಷ್ಣ ಬೈರೇಗೌಡರಿಗೆ ಚರ್ಚೆಗೆ ಅವಕಾಶ ಕೊಟ್ಟರು. ಈ ವೇಳೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಒಂದೇ ವಿಚಾರವಾಗಿ ಇಬ್ಬರು ಸಚಿವರಿಗೆ ಸ್ಪಷ್ಟನೆ ನೀಡಲು ಹೇಗೆ ಸಾಧ್ಯ? ಎಂದು ಕ್ರಿಯಾ ಲೋಪ ಎತ್ತಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.

ಈ ವೇಳೆ ಮತ್ತಷ್ಟು ಆಕ್ರೋಶಗೊಂಡ ಬಿಜೆಪಿ ಸದಸ್ಯರು, ಸ್ಪೀಕರ್ ಕಚೇರಿಗೆ ನುಗ್ಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. "ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದೀರಿ?. ಇದು ಕೆಪಿಸಿಸಿ ಕಚೇರಿಯಲ್ಲ. ಇದು ಸದನ. ಒಂದೇ ವಿಚಾರವಾಗಿ ಇಬ್ಬರು ಸಚಿವರಿಂದ ಉತ್ತರ ನೀಡಲು ಹೇಗೆ ಅವಕಾಶ ನೀಡಿದಿರಿ, ಇದು ಸದನ ನಿಯಮಾವಳಿಯ ವಿರುದ್ಧ" ಎಂದು ಆಕ್ರೋಶ ಹೊರಹಾಕಿದರು.

ಬಳಿಕ ವಿಪಕ್ಷ ನಾಯಕರ ಚೇಂಬರ್​ನಲ್ಲಿ ಬಿಜೆಪಿ ಸದಸ್ಯರು ಸಭೆ ನಡೆಸಿದರು‌. ಸಭೆಯಲ್ಲಿ ಸ್ಪೀಕರ್ ನಡೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ವಿರೋಧಿಸಲು ನಿರ್ಧಾರ ಮಾಡಲಾಯಿತು.

ಇದನ್ನೂ ಓದಿ: ಕಾನೂನು ಕೈಗೆತ್ತಿಕೊಂಡಿದ್ದರಿಂದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಅನಿವಾರ್ಯವಾಯ್ತು: ಜಿ.ಪರಮೇಶ್ವರ್

ಇದನ್ನೂ ಓದಿ: ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.