ETV Bharat / state

ಸಿದ್ದರಾಮಯ್ಯ ಭ್ರಷ್ಟ ಎಂದು ನಾನು ಹೇಳಲ್ಲ, ಕಳಂಕ ಕಳೆದುಕೊಳ್ಳಲು ಮುಡಾ ಸೈಟ್ ವಾಪಸ್ ಕೊಡಿ: ಪ್ರತಾಪ್​ ಸಿಂಹ - MUDA SITE ISSUE - MUDA SITE ISSUE

20 ವರ್ಷಗಳಲ್ಲಿ ಯಾರ್ಯಾರು ಮುಖ್ಯಮಂತ್ರಿಗಳು ಆಗಿದ್ದಾರೆ, ಅವರ ಆರ್ಥಿಕ ಸ್ಥಿತಿಗಳನ್ನು ನೋಡಿದರೆ, ನಾನು ನಿಮ್ಮನ್ನು (ಸಿದ್ದರಾಮಯ್ಯ) ಭ್ರಷ್ಟ ಎಂದು ಹೇಳಲು ಸಿದ್ಧನಿಲ್ಲ. ಆದರೆ, ಇವತ್ತು ಮುಡಾ ನಿವೇಶನದ ಪ್ರಕರಣದಿಂದ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನ, ಶಂಕೆ ಮೂಡಿದೆ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಮಾಜಿ ಸಂಸದ ಪ್ರತಾಪ್ ಸಿಂಹ
ಮಾಜಿ ಸಂಸದ ಪ್ರತಾಪ್ ಸಿಂಹ (ETV)
author img

By ETV Bharat Karnataka Team

Published : Jul 24, 2024, 5:17 PM IST

ಪ್ರತಾಪ್​ ಸಿಂಹ (ETV Bharat)

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೇವಲ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) 14 ಸೈಟ್​ಗಳಿಗೆ ನಿಮ್ಮ ವರ್ಚಸ್ಸು ಕಳೆದುಕೊಳ್ಳಬೇಡಿ. ನಿಮಗೆ ಬಂದಿರುವ ಸೈಟ್​ಗಳನ್ನು ವಾಪಸ್​ ನೀಡಿ. ಹಗರಣದ ತನಿಖೆಯನ್ನು ದಕ್ಷ ನಿವೃತ್ತ ನ್ಯಾಯಮೂರ್ತಿಗಳಿಂದ ಮಾಡಿಸಿ. 4 ಸಾವಿರ ಕೋಟಿಯಷ್ಟು ನಿವೇಶನಗಳನ್ನು ಉಳಿಸಿದರೆ, ಮುಡಾಗೆ ಲಾಭ ಬರುತ್ತದೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ. ಅಪಾರ ರಾಜಕೀಯ ಅನುಭವ ಉಳ್ಳವರು. ಕೇವಲ ಮುಡಾದ 14 ಸೈಟ್​ಗಳಿಗಾಗಿ ನಿಮ್ಮ ವರ್ಚಸ್ಸು ಕುಗ್ಗುವಂತೆ ಮಾಡಿಕೊಳ್ಳಬೇಡಿ. 20 ವರ್ಷಗಳಲ್ಲಿ ಯಾರ್ಯಾರು ಮುಖ್ಯಮಂತ್ರಿಗಳು ಆಗಿದ್ದಾರೆ, ಅವರ ಆರ್ಥಿಕ ಸ್ಥಿತಿಗಳನ್ನು ನೋಡಿದರೆ, ನಾನು ನಿಮ್ಮನ್ನು ಭ್ರಷ್ಟ ಎಂದು ಹೇಳಲು ನಾನು ಸಿದ್ಧನಿಲ್ಲ. ಆದರೆ, ಇವತ್ತು ಹೊರಬಂದ ಪ್ರಕರಣ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನ ಹಾಗೂ ಶಂಕೆಯನ್ನು ಮೂಡಿಸುವಂತಿದೆ. ನಿಮ್ಮ ಗಮನಕ್ಕೆ ನಿಮ್ಮ ಭಾವ-ಮೈದುನ ತಪ್ಪು ಮಾಡಿರಬಹುದು. ನೀವು ಸೈಟ್​ಗಳನ್ನು ಮುಡಾಗೆ ಹಿಂದುರಿಗಿಸಿ ಮೇಲ್ಪಂಕ್ತಿ ಹಾಕಿ. ಈ ಹಗರಣವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಥವಾ ನ್ಯಾ. ಎನ್.ಕುಮಾರ್ ಅಂತಹವರಿಂದ ತನಿಖೆ ಮಾಡಿಸಿ. ಯಾರ್ಯಾರು ಅಕ್ರಮವಾಗಿ ಸೈಟ್​, ಬೇನಾಮಿ ಹೆಸರಲ್ಲಿ ಸೈಟ್​ ಹೊಡೆದಿದ್ದಾರೆ, ಅವರಿಗೆಲ್ಲ ಧೈರ್ಯ ಕೊಟ್ಟಿರುವುದೇ ನೀವು. ಹೀಗಾಗಿ ತನಿಖೆ ಮಾಡಿಸುವವರೆಗೂ ಈ ಹಗರಣ ತಾರ್ಕಿಕ ಅಂತ್ಯಕ್ಕೆ ಹೋಗಲ್ಲ ಎಂದು ತಿಳಿಸಿದರು.

ಮುಡಾ ಅಧ್ಯಕ್ಷ ಮರೀಗೌಡ ತಿಳಿಗೇಡಿ: ಇದೇ ವೇಳೆ, ಪ್ರತಾಪ್ ಸಿಂಹ ಕೂಡ ತಮ್ಮ ಪತ್ನಿ ಹೆಸರಲ್ಲಿ ಸೈಟ್​ ಪಡೆದಿದ್ದಾರೆ ಎಂಬ ಮುಡಾ ಅಧ್ಯಕ್ಷ ಮರೀಗೌಡ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮರೀಗೌಡ ಅವರಿಗೆ ಕನಿಷ್ಠ ಜ್ಞಾನ ಇಲ್ಲ. ಇಂತಹ ವ್ಯಕ್ತಿಯನ್ನು ಸಿದ್ದರಾಮಯ್ಯ ತಮ್ಮ ಜೊತೆಗಿರಿಸಿಕೊಂಡಿರುವುದು, ಮುಡಾ ಅಧ್ಯಕ್ಷರನ್ನಾಗಿ ಮಾಡಿರುವುದೇ ಇಂದಿನ ನಮ್ಮ ಸಮಸ್ಯೆಗೆ ಕಾರಣವಾಗಿರಬಹುದು. ಹೀಗಾಗಿ ನಾನು ಸಿದ್ದರಾಮಯ್ಯ ಅವರಿಗೆ ತಮ್ಮ ಕುಟುಂಬಕ್ಕೆ ಬಂದಿರುವ ಕಳಂಕದಿಂದ ತಪ್ಪಿಸಿಕೊಳ್ಳಲು ಸೈಟ್​ಗಳನ್ನು ಸರೆಂಡರ್ ಮಾಡಿ ಎಂದು ಅವರ ಮೇಲಿನ ಗೌರವದಿಂದ ಎರಡು ದಿನಗಳ ಹಿಂದೆ ಹೇಳಿದ್ದೆ. ಇದನ್ನು ಅರ್ಥ ಮಾಡಿಕೊಳ್ಳದ ಮರೀಗೌಡ ಮುಡಾಗೆ ಮೂರ್ನಾಲ್ಕು ಸಾವಿರ ಕೋಟಿ ನಷ್ಟ ಉಂಟು ಮಾಡುವ 50:50 ಅನುಪಾತದ ಸೈಟ್ ಹಗರಣಕ್ಕೂ ಮತ್ತು ನನ್ನ ಸೈಟ್​ಗೂ ಹೋಲಿಕೆ ಮಾಡುತ್ತಿದ್ದಾನೆ ಎಂದರೆ, ಕನಿಷ್ಠ ತಿಳುವಳಿಕೆ ಇಲ್ಲ. ತಿಳಿಗೇಡಿಯನ್ನು ಮುಡಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದೇ ಅರ್ಥ ಎಂದು ವಾಗ್ದಾಳಿ ನಡೆಸಿದರು.

ಇವರು ಎತ್ತಿರುವ ವಿಚಾರದಲ್ಲಿ ಕಾನೂನು ರೀತಿ ಇಲ್ಲ ಎಂದರೆ, ಅದನ್ನು ರದ್ದು ಮಾಡಿ ಎಂದು ನಾನು ಸಂಸದನಾಗಿದ್ದಾಗ ಮುಡಾ ಆಯುಕ್ತರಿಗೆ ತಿಳಿಸಿದ್ದೆ. ಸಾವಿರ, ಲಕ್ಷ ಲೆಕ್ಕದಲ್ಲಿ ದಂಡ ಕಟ್ಟಬೇಕಾದ ಪ್ರಕರಣ. ಅಲ್ಲದೇ, ಇದು ನಾನೇ ಹೇಳಿ ರದ್ದು ಮಾಡಿಸಿರುವ ಸಿಆರ್​ ಪ್ರಕರಣ. ನೀವೇ ಮುಡಾ ಅಧ್ಯಕ್ಷ ಇದ್ದೀರಿ, ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಸೆಪ್ಟೆಂಬರ್​ನಲ್ಲಿ ಹೇಳಿದ್ದೀನಿ. ಕ್ರಮದ ಪ್ರಕಾರ ದಂಡ ಕಟ್ಟಿದ್ರೆ ಆಗುತ್ತದೆ. ಅದಕ್ಕೂ, ಈ ಹಗರಣಕ್ಕೂ ಏನು ಸಂಬಂಧ?. ಈ ಮರೀಗೌಡ ಹಿಂದೆ ಮೈಸೂರು ಡಿಸಿಯಾಗಿದ್ದ ಶಿಖಾ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಒಂದೂವರೆ ತಿಂಗಳು ತಲೆಮರೆಸಿಕೊಂಡಿದ್ದ. ಈ ವ್ಯಕ್ತಿಗೆ ಸಿದ್ದರಾಮಯ್ಯನವರ ಬಗ್ಗೆ ಕಾಳಜಿ, ಗೌರವ, ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಇಲ್ಲ ಎಂದು ಪ್ರತಾಪ್​ ಸಿಂಹ ಟೀಕಿಸಿದರು.

ಮೈಸೂರಿನವರೇ ಸಿಎಂ ಹಮ್ಮೆ: ಮತ್ತೊಂದೆಡೆ, ಸಿದ್ದರಾಮಯ್ಯ ಮೂರೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಾರೆ. ಅದನ್ನೇ ನಾನು ಹೇಳಿದ್ದೇನೆ. ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷಿ. ಅವರು ಸಹಾ ಹಳೆ ಮೈಸೂರು ಭಾಗದವರೇ. ಆದರೆ ಸಿದ್ದರಾಮಯ್ಯ ಸಿಎಂ ಆಗಿರುವುದು ಬೇರೆ ಖುಷಿನೇ. ಯಾಕೆಂದರೆ, ಅವರು ಬೇರೆ ಪಕ್ಷದಲ್ಲಿ ಇದ್ದರೂ, ಮೈಸೂರಿನವರೇ ಸಿಎಂ ಎಂಬುದು ನಮಗೆ ಹೆಮ್ಮೆ ಆಗಿರುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಚಾಮುಂಡೇಶ್ವರಿ ನನಗೆ ಮುಂದಿನ ದಾರಿ ತೋರಿಸುತ್ತಾಳೆ: ತಮ್ಮ ಮುಂದಿನ ರಾಜಕೀಯ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದರು, ರಾಜಕೀಯದಲ್ಲಿ ನಾವು ಏನು ಮಾಡುತ್ತೇವೆ ಎಂಬುದನ್ನು ಮುಂಚೆಯೇ ಹೇಳಬಾರದು. ಏಕೆಂದರೆ, ಕೆಲವರು ಆ ಪ್ಲಾನ್​ಗೆ ಬೇರೆ ಸ್ಕೆಚ್ ಹಾಕಿ ಬಿಡುತ್ತಾರೆ. ನಾಡದೇವತೆ ಚಾಮುಂಡೇಶ್ವರಿ ನನಗೆ ಮುಂದಿನ ದಾರಿ ತೋರಿಸುತ್ತಾಳೆ. ಅದರಂತೆ ಮುಂದುವರಿಯುತ್ತೇನೆ. ನಾನು ಇವತ್ತಿಗೂ ಜನರಿಂದ ತಿರಸ್ಕಾರವಾದ ವ್ಯಕ್ತಿಯಲ್ಲ. ಏನೋ ಕೆಲವರಿಂದ ಟಿಕೆಟ್ ತಪ್ಪಿತು. ಹಾಗೆಂದು ಇದೇ ಅಂತಿಮ ಅಲ್ಲ ಎಂದರು.

ದೆಹಲಿಯಲ್ಲಿ ನಾನು ಇದ್ದ ಮನೆಯನ್ನು ಖಾಲಿ ಮಾಡಬೇಕಿತ್ತು. ಇದು ನಾನು ಕೆಲವು ತಿಂಗಳುಗಳಿಂದ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿಯಲು ಪ್ರಮುಖ ಕಾರಣ. ನನ್ನನ್ನು 10 ವರ್ಷಗಳ ಕಾಲ ಸಂಸದನಾಗಿ ಮಾಡಿದ್ದ ಮೈಸೂರು-ಕೊಡಗು ಜನರ ಪರವಾಗಿ ಯಾವಾಗಲೂ ಇರುತ್ತೇನೆ. ಕೆಲವರ ಮಾತಿಗೇ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಸಾ ರಾ ಮಹೇಶ್ (ETV Bharat)

ಹೆಚ್​ಡಿಕೆ ಕುಟುಂಬ ಸೈಟ್​ ಪಡೆದಿಲ್ಲ - ಸಾ ರಾ ಮಹೇಶ್: ಇನ್ನೊಂದೆಡೆ, ಜೆಡಿಎಸ್​ ನಾಯಕ ಸಾ ರಾ ಮಹೇಶ್ ಸಹ ಮುಡಾ ವಿಚಾರವಾಗಿ ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದರು. ಮುಡಾದಲ್ಲಿ ಹೆಚ್​.ಡಿ. ಕುಮಾರಸ್ವಾಮಿಯಾಗಲಿ, ಅವರ ಪತ್ನಿ ಅನಿತಾ, ಮಗ ನಿಖಿಲ್ ಮತ್ತು ಅವರ ಕುಟುಂಬವಾಗಲಿ ಯಾವುದೇ ರೀತಿಯ ಸೈಟ್​ಅನ್ನು ಅಕ್ರಮವಾಗಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರೂ ಮುಡಾದಿಂದ ಯಾವುದೇ ನಿವೇಶನವನ್ನು ಅಕ್ರಮವಾಗಿ ಪಡೆದಿಲ್ಲ. ಆದರೆ, ಸಿಎಂ ಆಗುವುದಕ್ಕಿಂತ ಹಿಂದೆ ಚಲನಚಿತ್ರ ವಿತರಕರಾಗಿದ್ದ ಸಂದರ್ಭದಲ್ಲಿ ಮುಡಾದಲ್ಲಿ ನಿವೇಶನಕ್ಕಾಗಿ ಹಣ ಕಟ್ಟಿದ್ದರು. ಆದರೆ, ಮುಡಾದಿಂದ ಕಡಿಮೆ ಅಳತೆಯ ನಿವೇಶನ ಮಂಜೂರಾಗಿತ್ತು. ಹೀಗಾಗಿ ಬದಲಿ ನಿವೇಶನ ಕೊಡಿ ಎಂದು 8 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. 1985ರಲ್ಲಿ ನಿವೇಶನಕ್ಕಾಗಿ ಮುಡಾಕ್ಕೆ ಆಗಲೇ ಹಣ ಕಟ್ಟಿದ್ದರು. ಆ ಹಣ ಇನ್ನೂ ಮುಡಾದಲ್ಲಿದೆ. ಯಾವುದೇ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೇ, ಆರೋಪ ಮಾಡುವುದು ಸರಿಯಲ್ಲ. ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡಿಕೊಳ್ಳಲಿ ಎಂದು ಮಹೇಶ್ ಅವರು ಕೆಪಿಸಿಸಿ ಮಾಧ್ಯಮ ವಕ್ತಾರ ಲಕ್ಷ್ಮಣ್​ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಸಿಎಂ ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತಿದೆ: ಬಿ.ವೈ.ವಿಜಯೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.