ETV Bharat / state

ಪರಿಷತ್​ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ, ಸುಮಲತಾಗಿಲ್ಲ ಅವಕಾಶ - Council Election Candidates - COUNCIL ELECTION CANDIDATES

ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.

Council elections
ಎನ್.ರವಿಕುಮಾರ್, ಸಿ.ಟಿ. ರವಿ, ಎಂ.ಜಿ. ಮುಳೆ (ETV Bharat)
author img

By ETV Bharat Karnataka Team

Published : Jun 2, 2024, 12:37 PM IST

Updated : Jun 2, 2024, 12:47 PM IST

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್​​ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಪ್ರಕಟಿಸಿದ್ದು, ಮಾಜಿ ಸಚಿವ ಸಿ.ಟಿ.ರವಿ, ಹಾಲಿ ಸದಸ್ಯ ಎನ್‌. ರವಿಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ. ಮುಳೆ ಅವರಿಗೆ ಟಿಕೆಟ್ ನೀಡಿದೆ. ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ಅವಕಾಶ ತಪ್ಪಿದೆ.

ವಿಧಾನಸಭೆಯಿಂದ ವಿಧಾನಪರಿಷತ್​ನ 11 ಸ್ಥಾನಗಳಿಗೆ ಜೂನ್ 13ರಂದು ಚುನಾವಣೆ ನಡೆಯಲಿದೆ. ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಸಿಗಲಿರುವ ಮೂರು ಸ್ಥಾನಗಳಿಗೆ ಬಿಜೆಪಿ ಹೈಕಮಾಂಡ್ ಇಂದು ಹೆಸರು ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ಒಂದು ದಿನ ಮೊದಲು ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.

ಪಕ್ಷದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಹಾಲಿ ವಿಧಾನಪರಿಷತ್ ಪ್ರತಿಪಕ್ಷ ಸಚೇತಕ ಎನ್.ರವಿಕುಮಾರ್ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮತ್ತು ಮರಾಠಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ. ಮುಳೆ ಅವರಿಗೂ ಟಿಕೆಟ್ ಸಿಕ್ಕಿದೆ. ಮೊದಲು ಜೆಡಿಎಸ್​​ನಲ್ಲಿದ್ದು, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಸೇರಿದ್ದ‌ ಮುಳೆಗೆ ಪಕ್ಷವು ಮಣೆ ಹಾಕಿದೆ.

ಒಕ್ಕಲಿಗ ಸಮುದಾಯಕ್ಕೆ 1 (ಸಿ.ಟಿ. ರವಿ) ಸ್ಥಾನ ಹಾಗೂ ಒಬಿಸಿ ವರ್ಗಕ್ಕೆ 2 ಸ್ಥಾನ (ರವಿಕುಮಾರ್-ಗಂಗಾಮತಸ್ಥ ಮತ್ತು ಎಂ.ಜಿ.ಮುಳೆ ಮರಾಠ ಸಮುದಾಯ) ನೀಡಲಾಗಿದ್ದು, ರಾಷ್ಟ್ರೀಯ ನಾಯಕರು ಅಳೆದು, ತೂಗಿ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದಾರೆ.‌

ಕೋಟಾ ಶ್ರೀನಿವಾಸ ಪೂಜಾರಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದು, ಅವರಿಂದ ತೆರವಾಗುವ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಪ್ರಬಲ ನಾಯಕರ ಆಯ್ಕೆಯಾಗಿ ಸಿ.ಟಿ. ರವಿಗೆ ಅವಕಾಶ ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಸಂಘಟನಾತ್ಮಕವಾಗಿ ಸದೃಢರಾಗಿರುವ ಸಿ.ಟಿ.ರವಿ ಪಕ್ಷ ನಿಷ್ಠೆ ಮತ್ತು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಮರ್ಥ್ಯ ಪರಿಗಣಿಸಿ, ಅವರಿಗೆ ಪರಿಷತ್ ಪ್ರತಿಪಕ್ಷ ಸ್ಥಾನ ನೀಡಲು ಈಗ ಟಿಕೆಟ್ ಕೊಡಲಾಗಿದೆ ಎನ್ನಲಾಗಿದೆ.

Council elections
ಪ್ರಕಟಣೆ (ETV Bharat)

ನಿರೀಕ್ಷೆಯಂತೆ ಎನ್.ರವಿಕುಮಾರ್​ಗೆ ಮತ್ತೊಂದು ಅವಕಾಶ ನೀಡಲಾಗಿದೆ. ಬಿಎಸ್​ವೈ ಬೆಂಬಲಿಗರಾದರೂ ರವಿಕುಮಾರ್ ಹೆಸರಿಗೆ ಪಕ್ಷದ ಸಭೆಯಲ್ಲಿ ಯಾವುದೇ ವಿರೋಧ ಎದುರಾಗಲಿಲ್ಲ. ಅವರ ಪಕ್ಷ ನಿಷ್ಠೆ, ಸಂಘಟನಾತ್ಮಕ ಕ್ರಿಯಾಶೀಲತೆ, ಚುನಾವಣೆಗಳಲ್ಲಿ ಸಮರ್ಥ ಸಂಘಟನಾತ್ಮಕ ಜವಾಬ್ದಾರಿ ನಿರ್ವಹಣೆ ಮತ್ತು ಪರಿಷತ್​ನಲ್ಲಿ ಪಕ್ಷವನ್ನು ಸಮರ್ಥಿಸಿಕೊಂಡು ಆಡಳಿತ ಪಕ್ಷವನ್ನು ಟೀಕಿಸುವ ಸಾಮರ್ಥ್ಯ ಪರಿಗಣಿಸಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಕಳೆದ ಬಾರಿ ಉಪಚುನಾವಣೆ ವೇಳೆ ಪಕ್ಷಕ್ಕೆ ಬಂದಿದ್ದ ಮುಳೆ ಅವರ ಹಿರಿತನ ಪರಿಗಣಿಸಿ ಚಿಂತಕರ ಚಾವಡಿಗೆ ಕಳುಹಿಸಿಕೊಡಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್ ಅವರಿಗೆ ಪರಿಷತ್ ಟಿಕೆಟ್ ನೀಡಲು ಬಿಜೆಪಿ ನಾಯಕರು ಒಲವು ತೋರಿದ್ದರು. ಈ ಸಂಬಂಧ ಸುಮಲತಾ ಅವರ ಅಭಿಪ್ರಾಯ ಕೇಳಿದ್ದರು. ಬಹುತೇಕ ಅವರಿಗೆ ಟಿಕೆಟ್ ಖಚಿತ ಎಂದೇ ಹೇಳಲಾಗಿತ್ತು. ಆದರೆ ಅವರು ಪರಿಷತ್ ಪ್ರವೇಶಕ್ಕೆ ಉತ್ಸುಕತೆ ತೋರದ ಹಿನ್ನೆಲೆಯಲ್ಲಿ ಹೆಸರು ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ: ಜೂನ್ 2ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ - Congress CLP Meeting

Last Updated : Jun 2, 2024, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.