ETV Bharat / state

ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ: ಯದುವೀರ್ ಹೇಳಿದ್ದೇನು? - Yaduveer Wadiyar

author img

By ETV Bharat Karnataka Team

Published : Apr 5, 2024, 5:26 PM IST

Updated : Apr 5, 2024, 6:24 PM IST

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.

ಯದುವೀರ್ ಒಡೆಯರ್
ಯದುವೀರ್ ಒಡೆಯರ್

ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಯದುವೀರ್ ಹೇಳಿಕೆ

ಮೈಸೂರು: ಇತ್ತೀಚಿಗೆ ಚುನಾವಣಾ ಪ್ರಚಾರಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿರುವ ಬಗ್ಗೆ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 'ಈಟಿವಿ ಭಾರತ'ದ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪ್ರಸ್ತುತ ಎಲ್ಲಾ ರೀತಿಯ ಚುನಾವಣೆಗಳಲ್ಲಿ ಹಳೆಯ ಪ್ರಚಾರಗಳ ಬಳಕೆ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟ್ರಾಗ್ರಾಂ, ಎಕ್ಸ್ ಹಾಗೂ ವಾಟ್ಸ್‌ಆ್ಯಪ್ ಸೇರಿದಂತೆ ಇನ್ನಿತರ ವೇದಿಕೆಗಳ ಮೂಲಕ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಹೀಗಾಗಿ ಮತದಾರರನ್ನು ಸುಲಭ ಹಾಗೂ ಯಾವುದೇ ಖರ್ಚಿಲ್ಲದೇ ತಲುಪಲು ಸಾಧ್ಯವಿದೆ. ಇಂತಹ ತಂತ್ರಜ್ಞಾನದ ಮೂಲಕ ನಮ್ಮ ಅಭಿಪ್ರಾಯ ಮತ್ತು ಆಲೋಚನೆಗಳನ್ನು ಜನರೆದುರು ಮಂಡಿಸಬಹುದು. ಹಾಗೆಯೇ ಅವರು ಕೂಡ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು. ಸೋಶಿಯಲ್ ಮೀಡಿಯಾವನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡರೆ ನಿಜವಾಗಿಯೂ ಪಾಸಿಟಿವ್ ಆಗಿ ಪರಿಣಮಿಸುತ್ತದೆ ಎಂದರು.

ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಚುನಾವಣಾ ಪ್ರಚಾರ ನಡೆಸುವಾಗ ನಾನು ತುಂಬಾ ಚಿಕ್ಕವನು. 2006ರಲ್ಲಿ ಅವರು ಕೊನೆಯ ಬಾರಿಗೆ ಚುನಾವಣೆಗೆ ನಿಂತಿದ್ದರು. ಆಗ ನನಗೆ 12 ವರ್ಷ ವಯಸ್ಸಾಗಿತ್ತು ಎಂದು ಹೇಳಿದರು.

ಕಾಲ ಬದಲಾಗಿದೆ. ಅನೇಕ ತಂತ್ರಜ್ಞಾನಗಳ ಮೂಲಕ ಏನು ಬೇಕಾದರೂ ಮಾಡಬಹುದು. ಅದರದೇ ನಿಟ್ಟಿನಲ್ಲಿ ಕೆಲಸ ಮಾಡಬಹುದು. ಸಾಮಾಜಿಕ ಜಾಲತಾಣವನ್ನು ಪಾಸಿಟಿವ್ ಆಗಿ ಉಪಯೋಗಿಸಿಕೊಂಡರೆ, ನಮಗೆ ಉಪಯೋಗವಾಗುತ್ತದೆ. ಜನರಿಗೆ ಸರಿಯಾದ ಸಂದೇಶ ಕೊಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ತಾಯಿಯ ಆಶೀರ್ವಾದ ಪಡೆದೇ ಚುನಾವಣೆಗೆ ಸ್ಪರ್ಧೆ: 'ಈಟಿವಿ ಭಾರತ್'​ ಸಂದರ್ಶನದಲ್ಲಿ ಯದುವೀರ್ - Yaduveer Wodeyar

Last Updated : Apr 5, 2024, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.