ETV Bharat / state

ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರಿಗಿಂತ ಪತ್ನಿಯೇ ಶ್ರೀಮಂತೆ - Dr C N Manjunath Assets

ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರಿಗಿಂತ ಪತ್ನಿ ಅನುಸೂಯ ಮಂಜುನಾಥ್ ಹೆಚ್ಚು ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ.

ಅನುಸೂಯ ಮಂಜುನಾಥ್
ಅನುಸೂಯ ಮಂಜುನಾಥ್
author img

By ETV Bharat Karnataka Team

Published : Apr 4, 2024, 10:55 PM IST

ರಾಮನಗರ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಅವರಿಗಿಂತ ಪತ್ನಿ ಅನುಸೂಯ ಮಂಜುನಾಥ್ ಹೆಚ್ಚು ಶ್ರೀಮಂತೆಯಾಗಿದ್ದಾರೆ. ಪತಿ-ಪತ್ನಿ ಸೇರಿ ಒಟ್ಟು 96.29 ಕೋಟಿ ರೂ ಆಸ್ತಿ ಹೊಂದಿದ್ದಾರೆ. ಇವರಿಬ್ಬರ ಸಾಲ ಒಟ್ಟು ಸೇರಿ 14.76 ಕೋಟಿ ರೂ.ಗಳಿವೆ. ಡಾ.ಮಂಜುನಾಥ್ ಅವರ ಒಟ್ಟು ಆಸ್ತಿ ಮೌಲ್ಯ 43.63 ಕೋಟಿ ರೂ.ಗಳಿದ್ದರೆ, ಪತ್ನಿಯ ಒಟ್ಟು ಆಸ್ತಿ ಮೌಲ್ಯ 52.66 ಕೋಟಿ ರೂ.ಗಳು. ಇನ್ನು ಇವರ ಅವಿಭಕ್ತ ಕುಟುಂಬದ ಆಸ್ತಿ ಒಟ್ಟು ಮೌಲ್ಯ 1.32 ಕೋಟಿ ರೂ. ಆಗಿದೆ.

ಮಂಜುನಾಥ್ ಹೆಸರಿನಲ್ಲಿ 3.74 ಕೋಟಿ ರೂ. ಸಾಲವಿದ್ದರೆ, ಪತ್ನಿ ಹೆಸರಿನಲ್ಲಿ 11.02 ಕೋಟಿ ರೂ., ಅವಿಭಕ್ತ ಕುಟುಂಬದ ಹೆಸರಿನಲ್ಲಿ 5.23 ಲಕ್ಷ ರೂ. ಸಾಲಗಳಿವೆ. ಮಂಜುನಾಥ್ 6.98 ಕೋಟಿ ರೂ. ಚರಾಸ್ತಿ, 36.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದರೆ, ಪತ್ನಿ 17.36 ಕೋಟಿ ರೂ. ಚರಾಸ್ತಿ, 35.30 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

ಮಂಜುನಾಥ್ ಬಳಿ ಒಂದು ಮರ್ಸಿಡೀಸ್ ಬೆಂಜ್ ಕಾರು, ಒಂದು ಹುಂಡೈ ವರ್ಣಾ ಕಾರು ಇದ್ದರೆ, ಇವರ ಪತ್ನಿಯ ಬಳಿ ಮಾರುತಿ ಸಿಯಾಜ್ ಕಾರು ಇದೆ. ಮಂಜುನಾಥ್ ಹೆಸರಿನಲ್ಲಿ ಯಾವುದೇ ಚಿನ್ನಾಭರಣ ಇಲ್ಲ. 5 ಕೆ.ಜಿ ಚಿನ್ನಾಭರಣ, 1 ಕೆ.ಜಿ ಚಿನ್ನದ ಗಟ್ಟಿ 51 ಕ್ಯಾರೇಟ್ ವಜ್ರ, 340 ಗ್ರಾಂ ಬೆಲೆ ಬಾಳುವ ಹರಳುಗಳು, 38 ಕೆಜಿ ಬೆಳ್ಳಿಯನ್ನು ಇವರ ಪತ್ನಿ ಹೊಂದಿದ್ದಾರೆ.

ಮಂಜುನಾಥ್ ಅವರು ಅನಿತಾ ಕುಮಾರಸ್ವಾಮಿ ಅವರಿಗೆ 7.50 ಲಕ್ಷ ರೂ., ಪುತ್ರ ಸಾತ್ವಿಕ್ 99.83 ಲಕ್ಷ ರೂ. ಪುತ್ರಿ ನಮ್ರತಾಗೆ 1.32 ಕೋಟಿ ರೂ., ಪತ್ನಿಗೆ 2.32 ಕೋಟಿ ರೂ. ಸಾಲ ನೀಡಿದ್ದಾರೆ. ಅನುಸೂಯ ಮಂಜುನಾಥ್ ಸಹ ಕುಟುಂಬದವರಿಗೆ ಸಾಲ ನೀಡಿದ್ದು, ಅಣ್ಣನ ಮಗ ಸೂರಜ್‌ಗೆ 7.50 ಲಕ್ಷ ರೂ. ಪ್ರಜ್ವಲ್ ರೇವಣ್ಣಗೆ 22 ಲಕ್ಷ ರೂ. ಪುತ್ರ ಸಾತ್ವಿಕ್‌ಗೆ 62.98 ಲಕ್ಷ ರೂ. ಪುತ್ರಿ ನಮ್ರತಾಗೆ 2.50 ಕೋಟಿ ರೂ., ತಾಯಿ ಚನ್ನಮ್ಮಗೆ 19.20 ಲಕ್ಷ ರೂ. ಸಾಲ ನೀಡಿದ್ದಾರೆ.

100 ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಪುಸ್ತಕ, 125 ಕನ್ನಡ ಸಾಹಿತ್ಯ ಪುಸ್ತಕ ನನ್ನ ಆಸ್ತಿ ಪಟ್ಟಿಯಲ್ಲಿದೆ ಎಂದು ಮಂಜುನಾಥ್ ಘೋಷಿಸಿಕೊಂಡಿದ್ದು, ಅನುಸೂಯ ಮಂಜುನಾಥ್ ಹೆಸರಿನಲ್ಲಿ 4 ವಾಸದ ಮನೆಗಳಿದ್ದು, ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಮನೆ ಇಲ್ಲ ಎಂದು ನಾಮಪತ್ರ ಸಲ್ಲಿಸುವ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಾಟಾಳ್ ನಾಗರಾಜ್ - Vatal Nagaraj

ETV Bharat Logo

Copyright © 2024 Ushodaya Enterprises Pvt. Ltd., All Rights Reserved.