ETV Bharat / state

ಸಂಸದ ಸಂಗಣ್ಣ ಕರಡಿ ಮುನಿಸು ಶೀಘ್ರ ಶಮನ: ಬಿಜೆಪಿ ಅಭ್ಯರ್ಥಿ ಬಸವರಾಜ ವಿಶ್ವಾಸ

ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಗಂಗಾವತಿಗೆ ಭೇಟಿ ನೀಡಿ, ಬಿಜೆಪಿ ಪಕ್ಷದ ಪ್ರಮುಖ ನಾಯಕರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.

author img

By ETV Bharat Karnataka Team

Published : Mar 18, 2024, 10:49 PM IST

Updated : Mar 18, 2024, 11:03 PM IST

Dr Basavaraj kyavater
ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಗಂಗಾವತಿಗೆ ಭೇಟಿ ನೀಡಿದರು.
ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಮಾತನಾಡಿದರು.

ಗಂಗಾವತಿ(ಕೊಪ್ಪಳ): ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನಗೊಂಡಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣರ ಮುನಿಸು ಶೀಘ್ರ ಶಮನವಾಗಲಿದ್ದು, ಬಿಜೆಪಿ ಪರವಾಗಿ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಹೇಳಿದರು.

ನಗರಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಬಿಜೆಪಿ ಪಕ್ಷದ ಪ್ರಮುಖ ನಾಯಕರು, ಕಾರ್ಯಕರ್ತರೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕರಡಿ ಸಂಗಣ್ಣ ಅವರನ್ನು ಮನವೊಲಿಸುವ ಕಾರ್ಯವನ್ನು ರಾಜ್ಯ ನಾಯಕರು ನಿರಂತರವಾಗಿ ಮಾಡುತ್ತಿದ್ದಾರೆ.

ಈಗಾಗಲೇ ನಾನು ಹಲವು ಬಾರಿ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಅವರ ಮುನಿಸು ಶಮನವಾಗಲಿದೆ. ನನ್ನ ಪರ ಪ್ರಚಾರಕ್ಕೆ ಆಗಮಿಸಲಿದ್ದಾರೆ. ದೇಶದಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ಕರಡಿ ಅವರ ಆಶಯವೂ ಆಗಿದೆ. ಹೀಗಾಗಿ ಖಚಿತವಾಗಿ ನಮ್ಮೊಂದಿಗೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನಿಂದ ಕರಡಿ ಸಂಗಣ್ಣ ಸ್ಪರ್ಧಿಸುವುದಿಲ್ಲ:ಕರಡಿ ಸಂಗಣ್ಣ ಅವರಿಗೆ ಈಗಾಗಲೇ ಕಾಂಗ್ರೆಸ್ ಆಹ್ವಾನ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸವರಾಜ್, ಕಾಂಗ್ರೆಸ್​ನಿಂದ ಟಿಕೆಟ್ ಕೊಟ್ಟರೂ ಸಂಗಣ್ಣ ಸ್ಪರ್ಧೆ ಮಾಡುವುದಿಲ್ಲ. ಕರಡಿ ಸಂಗಣ್ಣ ನಡೆದು ಬಂದಿರುವ ತತ್ವ ಸಿದ್ಧಾಂತಕ್ಕೂ ಕಾಂಗ್ರೆಸ್ ಪಕ್ಷದ ನೀತಿಗಳಿಗೂ ವ್ಯತ್ಯಾಸವಿದೆ ಎಂದು ಹೇಳಿದರು.

ಹೀಗಾಗಿ ಕಾಂಗ್ರೆಸ್ ಪಕ್ಷವಾಗಲಿ, ಸ್ವತಂತ್ರ ಅಭ್ಯರ್ಥಿಯಾಗಿ ಆಗಲಿ ಕರಡಿ ಸಂಗಣ್ಣ ಸ್ಪರ್ಧೆಗೆ ಇಳಿಯುವುದಿಲ್ಲ. ಬದಲಿಗೆ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು ಎಂದು ಇಡೀ ದೇಶದ ಜನ ಬಯಸಿದೆ. ಹೀಗಾಗಿ ಅವರು ಶೀಘ್ರ ಮತ್ತೆ ಬಿಜೆಪಿಯೊಂದಿಗೆ ಪ್ರಚಾರಕ್ಕೆ ಬರಲಿದ್ದಾರೆ. ಅವರ ಮುಂದಾಳತ್ವದಲ್ಲಿ ನಾವು ಪ್ರಚಾರ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ:ಮೈಸೂರಲ್ಲಿ ಅಭ್ಯರ್ಥಿ ಇಲ್ಲವೆಂದು ಯಧುವೀರ್ ರನ್ನು ಬಿಜೆಪಿ ಕಣಕ್ಕಿಳಿಸಿದೆ: ಸಿಎಂ ಸಿದ್ದರಾಮಯ್ಯ

Last Updated : Mar 18, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.