ETV Bharat / state

ಮಠಾಧೀಶರ ಬಗ್ಗೆ ಹಗುರ ಹೇಳಿಕೆ ಆರೋಪ: ದೇವಾಲಯಕ್ಕೆ ಈಶ್ವರಪ್ಪ ಬಂದು ಘಂಟೆ ಹೊಡೆಯಲಿ - ಬಿ ವೈ ರಾಘವೇಂದ್ರ ಸವಾಲು - BJP candidate b y raghavendra

ನಾನು ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿದ್ದೇನೆ ಎನ್ನುವುದಾದರೆ ಚಂದ್ರಗುತ್ತಿ ದೇವಾಲಯಕ್ಕೆ ಬಂದು ಘಂಟೆ ಹೊಡೆಯುತ್ತೇನೆ. ಈಶ್ವರಪ್ಪನವರು ಬಂದು ಘಂಟೆ ಹೊಡೆಯಲಿ ಎಂದು ಬಿ ವೈ ರಾಘವೇಂದ್ರ ಸವಾಲು ಹಾಕಿದ್ದಾರೆ.

bjp-candidate-b-y-raghavendra-reaction-on-k-s-eshwarappa
ಮಠಾಧೀಶರ ಬಗ್ಗೆ ಹಗುರ ಹೇಳಿಕೆ ಆರೋಪ: ದೇವಾಲಯಕ್ಕೆ ಈಶ್ವರಪ್ಪ ಬಂದು ಘಂಟೆ ಹೊಡೆಯಲಿ - ಬಿ ವೈ ರಾಘವೇಂದ್ರ ಸವಾಲು
author img

By ETV Bharat Karnataka Team

Published : Mar 29, 2024, 7:55 PM IST

ಶಿವಮೊಗ್ಗ: ನಿನ್ನೆ ಈಶ್ವರಪ್ಪನವರು, ನಾನು ಮಠಾಧೀಶರಿಗೆ ಧಮ್ಕಿ ಹಾಕಿಸಿ ಕಣ್ಣೀರು ಹಾಕಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ಯಾರಾದರೂ ಬಬ್ಬ ಮಠಾಧೀಶರಿಗೆ ಹಗುರವಾಗಿ ಮಾತನಾಡಿದ್ದರೆ ತಾಯಿ ರೇಣುಕಮ್ಮ ನೋಡಿಕೊಳ್ಳುತ್ತಾಳೆ. ಆ ರೀತಿ ನಾನು ಮಾತನಾಡಿದ್ದೇನೆ ಎನ್ನುವುದಾದರೆ ನಾನು ಚಂದ್ರಗುತ್ತಿ ದೇವಾಲಯಕ್ಕೆ ಬಂದು ಘಂಟೆಯನ್ನು ಹೊಡೆಯುತ್ತೇನೆ. ಅವರೂ ಬಂದು ಘಂಟೆಯನ್ನು ಹೊಡೆಯಲಿ ಎಂದು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಈಶ್ವರಪ್ಪನವರಿಗೆ ಸವಾಲು ಹಾಕಿದ್ದಾರೆ.

ಪ್ರತಿ ಬಾರಿಯೂ ಅವರ ಆಶೀರ್ವಾದ ನನಗೆ ಸಿಗುತ್ತಿತ್ತು. ಆದರೆ ಈ ಬಾರಿ ಅವರ ಆಶೀರ್ವಾದ ನನಗೆ ಸಿಗುತ್ತಿಲ್ಲ ಎಂಬ ನೋವು ನನಗಿದೆ. ಆದರೆ ಆ ನೋವಿನ ಜೊತೆಗೆ ಇನ್ನೊಂದು ನೋವು ಆಗುತ್ತಿದೆ. ಅವರು ಹೇಳುತ್ತಿರುವ ವಿಚಾರಗಳಿಂದ ಮತದಾರನನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಆಗಿದೆ. ಆ ಮಾತನ್ನು ಕೇಳಿ ಅತ್ಯಂತ ನೋವಾಗಿದೆ. ನಮ್ಮ ತಂದೆ ಧರ್ಮಕಾರ್ಯ ಮಾಡುವ ಸಂಸ್ಕಾರ ಕಲಿಸಿದ್ದಾರೆ. ಯಡಿಯೂರಪ್ಪ ಕುಟುಂಬ ಸ್ವಾರ್ಥಿಗಳು ಎಂದು ಹೇಳಿದ್ದಾರೆ. ಇದೇ ಯಡಿಯೂರಪ್ಪ ಅವರ ಬಗ್ಗೆ ಕೆಲವು ದಿನಗಳ ಹಿಂದೆ ಶಿಕಾರಿಪುರದಲ್ಲಿ ಯಡಿಯೂರಪ್ಪ ಹುಲಿ. ವಿಜಯಣ್ಣ ಹಾಗೂ ರಾಘವೇಂದ್ರ ಮರಿ ಹುಲಿಗಳೆಂದು ಹೇಳಿದ್ದರು. ಈಗ ವಿಜಯಣ್ಣ ಬೇಡವಾದರಾ ಎಂದು ಪ್ರಶ್ನಿಸಿದರು.

ಇದೇ ಈಶ್ವರಪ್ಪನವರು ಮಠಾಧೀಶರ ಕಾರ್ಯಕ್ರಮವೊಂದರಲ್ಲಿ ರಾಘವೇಂದ್ರನನ್ನು 5 ಲಕ್ಷ ಅಂತರದಿಂದ ಗೆಲ್ಲಿಸಬೇಕು ಅಂತ ಹೇಳಿದ್ದರು. ಆದರೆ 15 ದಿನದಲ್ಲಿ ಈಶ್ವರಪ್ಪ ಅವರು ಏಕೆ ಬದಲಾದರು. ಅವರ ಪುತ್ರ ಕಾಂತೇಶ್‌ಗೆ ಟಿಕೆಟ್ ಸಿಗದಿದ್ದಕ್ಕೆ ಅವರಿಗೆ ನೋವಾಗಿದೆ. ಈಶ್ವರಪ್ಪ ಹಾಗೂ ಕಾಂತೇಶ್​ ನಮ್ಮ ಮನೆಗೆ ಬಂದಿದ್ದರು. ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದರು. ಹಾವೇರಿಯಲ್ಲಿ ಒಂದು ತಿಂಗಳು ಪ್ರವಾಸ ಮಾಡಿದ್ದೇವೆ, ವಾತಾವರಣ ಚನ್ನಾಗಿದೆ. ಹಾವೇರಿ ಟಿಕೆಟ್​ ಕಾಂತೇಶ್​ಗೆ ಕೊಡಬೇಕು, ಟಿಕೆಟ್​ ಕೊಡಿಸೋದು ಅಷ್ಟೇ ಅಲ್ಲ ಗೆಲ್ಲಿಸಿಕೊಂಡು ಬರಬೇಕು ಎಂದಿದ್ದರು. ನಮ್ಮ ಮನೆಗೆ ಬಂದು ಗೆಲ್ಲಿಸಬೇಕು ಅಂದರೆ ಆಗಲ್ಲ ಎನ್ನುವುದಕ್ಕೆ ಆಗುತ್ತದೆಯೇ, ಹೃದಯ ಪೂರ್ವಕವಾಗಿ ಆಶೀರ್ವಾದ ಮಾಡಿದ್ದು ನಿಜ ಎಂದರು.

ಆದರೆ, ಹೈಕಮಾಂಡ್‌ಗೆ ಅವರದ್ದೇ ಆದ ಒಂದಷ್ಟು ಮಾನದಂಡಗಳ ಮೂಲಕ ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಆ ಸಮಿತಿಯ ಒಬ್ಬ ಸದಸ್ಯರಷ್ಟೇ, ಆ ಸಮಿತಿಯಲ್ಲಿ ಪ್ರಧಾನಮಂತ್ರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಅನೇಕರು ಇರುತ್ತಾರೆ. ಆದರೆ ಯಡಿಯೂರಪ್ಪ ಕುಟುಂಬಕ್ಕೆ ಯಾಕೆ ಸೀಮಿತವಾಗಿ ಈಶ್ವರಪ್ಪನವರು ಮಾತನಾಡುತ್ತಿದ್ದಾರೆ?. ಈಶ್ವರಪ್ಪನವರ ಆಕ್ರೋಶ ಯಡಿಯೂರಪ್ಪ ಕುಟುಂಬದ ಮೇಲೆ ನೆಪ ಮಾತ್ರ, ಆದರೆ ಅವರ ನಿಜವಾದ ಸಿಟ್ಟು ಹೈಕಮಾಂಡ್ ಮೇಲೆ ಎಂದು ಹೇಳಿದರು.

ಇದನ್ನೂ ಓದಿ: ನಿಮ್ಮ ಕುಲಘಾತಕ ಸಂಸ್ಕೃತಿಯನ್ನು ಸಮಾಜ ಒಪ್ಪುವುದಿಲ್ಲ: ಸಂಸದ ರಾಘವೇಂದ್ರಗೆ ಆಯನೂರು ಮಂಜುನಾಥ್ ತಿರುಗೇಟು - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.