ETV Bharat / state

ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿ ಯುವಕ ಸಾವು‌: ದರೋಡೆಕೋರರಿಂದ ಪಾರಾಗುವ ಯತ್ನದಲ್ಲಿ ಅಪಘಾತ ಶಂಕೆ - ACCIDENT

ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿ ಯುವಕ ಸಾವು‌
ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿ ಯುವಕ ಸಾವು‌ (ETV Bharat)
author img

By ETV Bharat Karnataka Team

Published : Nov 3, 2024, 1:10 PM IST

ಬೆಂಗಳೂರು: ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಅಕ್ಟೋಬರ್ 25ರಂದು ರಾತ್ರಿ ಹೆಚ್ಎಎಲ್ ಸಂಚಾರಿ ಠಾಣೆ ವ್ಯಾಪ್ತಿಯ ಕಾಮಧೇನು ಸ್ವಾಸ್ಥ್ಯ ಕೇಂದ್ರದ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರದ ನಿವಾಸಿ ರೋಹನ್ ಜಯಕೃಷ್ಣನ್ (21) ಮೃತ ಬೈಕ್ ಸವಾರ. ರಾತ್ರಿ ವೇಳೆ ದರೋಡೆಕೋರರ ದಾಳಿಯಿಂದ ಪಾರಾಗುವ ಯತ್ನದಲ್ಲಿ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಅಕ್ಟೋಬರ್ 25ರ ನಸುಕಿನ ಜಾವ 3.30ರ ಸುಮಾರಿಗೆ ರೋಹನ್ ತಮ್ಮ ಬೈಕ್​ನಲ್ಲಿ ಸೇಲಂ ಬ್ರಿಡ್ಜ್ ಕಡೆ ಹೊರಟಿದ್ದಾಗ ವೇಗವಾಗಿ ಬಂದು ರಸ್ತೆಯ ಕೊನೆಯಲ್ಲಿದ್ದ ಕಬ್ಬಿಣದ ಗ್ರಿಲ್​ಗಳನ್ನೊಳಗೊಂಡ ರೈಲ್ವೆ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ರೋಹನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು ಅಜಾಗರೂಕ ಚಾಲನೆಯಿಂದ ಸಾವು ಸಂಭವಿಸಿರುವುದಾಗಿ ಪ್ರಕರಣ ದಾಖಲಿಸಿದ್ದರು.

ರೈಲ್ವೆ ತಡೆಗೋಡೆಗೆ ಡಿಕ್ಕಿಯಾಗಿ ಯುವಕ ಸಾವು‌ (ETV Bharat)

ಆದರೆ, ರೋಹನ್ ಬೈಕ್ ಅಪಘಾತವಾದ ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ದ್ವಿಚಕ್ರ ವಾಹನದಲ್ಲಿ ವೇಗವಾಗಿ ಸ್ಥಳಕ್ಕೆ ಬಂದಿರುವ ಮೂವರು, ತಕ್ಷಣ ಯೂಟರ್ನ್ ಪಡೆದು ವಾಪಸಾಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತನ ಕುಟುಂಬಸ್ಥರು, ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ: ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ‌ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.