ETV Bharat / state

ಸಂತ್ರಸ್ತೆಯ ಅಪಹರಣ ಪ್ರಕರಣ: 5 ಗಂಟೆ ಎಸ್ಐಟಿ ವಿಚಾರಣೆ‌ ಎದುರಿಸಿ ನಿರ್ಗಮಿಸಿದ ಭವಾನಿ ರೇವಣ್ಣ - Bhavani Revanna - BHAVANI REVANNA

ಮಹಿಳೆ ಅಪಹರಣ ಪ್ರಕರಣದ ಕುರಿತು ಎಸ್​ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರನ್ನು ಇಂದು ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

bhavani-revanna
ಭವಾನಿ ರೇವಣ್ಣ (ETV Bharat)
author img

By ETV Bharat Karnataka Team

Published : Jun 7, 2024, 7:12 PM IST

ಬೆಂಗಳೂರು: ಹಾಸನ ಪೆನ್‌ಡ್ರೈವ್‌ ವಿಡಿಯೋ ಸಂತಸ್ತೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಜೆಡಿಎಸ್ ಶಾಸಕ ಹೆಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಇಂದು ಎಸ್ಐಟಿ ವಿಚಾರಣೆಗೆ ಹಾಜರಾದರು. ಮಧ್ಯಾಹ್ನ 1 ಗಂಟೆಗೆ ಅವರು ವಿಚಾರಣೆಗೆ ಆಗಮಿಸಿದ್ದರು.

ಕೆ.ಆರ್‌.ನಗರ ಮಹಿಳೆಯ ಅಪಹರಣ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ಹೇಳಿಕೆಯ ಆಧಾರದಲ್ಲಿ ಭವಾನಿ ಅವರನ್ನು ಅಧಿಕಾರಿಗಳು ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸಂಜೆ 5 ರವರೆಗೂ ವಿಚಾರಣೆ ನಡೆಸುವಂತೆ ನ್ಯಾಯಾಲಯ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆದಿದೆ. ಅಗತ್ಯವಿದ್ದಾಗ ಮತ್ತೆ ವಿಚಾರಮೆಗೆ ಬರಬೇಕೆಂದು ಇದೇ ವೇಳೆ ಅಧಿಕಾರಿಗಳು ಸೂಚಿಸಿದ್ದಾರೆ.

"ಅಪಹರಣ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನನ್ನ‌ ಮೇಲೆ ಬಂದಿರುವ ಆರೋಪಗಳು ಸುಳ್ಳು. ನಮ್ಮ ಮನೆಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದುದು ನಿಜ. ಆದರೆ ಅಪಹರಣಕ್ಕೂ ನನಗೂ ಸಂಬಂಧವಿಲ್ಲ" ಎಂದು ಭವಾನಿ ಹೇಳಿರುವುದಾಗಿ ಎಸ್ಐಟಿ ಮೂಲಗಳಿಂದು ತಿಳಿದುಬಂದಿದೆ.

ಇದನ್ನೂ ಓದಿ: ಮಧ್ಯಂತರ ನಿರೀಕ್ಷಣಾ ಜಾಮೀನು ಬೆನ್ನಲ್ಲೇ ಎಸ್ಐಟಿ ವಿಚಾರಣೆಗೆ ಭವಾನಿ ರೇವಣ್ಣ ಹಾಜರು - Bhavani Revanna Sit Investigation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.