ಬೆಂಗಳೂರು: ನಗರದ 66/11 ಕೆವಿ ವಿಕ್ಟೋರಿಯಾ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಇಂದು ಮತ್ತು ನಾಳೆ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಹೇಳಿದೆ.
ನಗರದ ಎಸ್‌ಜೆಪಿ ರಸ್ತೆ, ಒಟಿಸಿ ರಸ್ತೆ, ಎಸ್ಪಿ ರಸ್ತೆ, ಅವೆನ್ಯೂ ರಸ್ತೆ, ಗೌಡೌನ್ ರಸ್ತೆ, ಟ್ಯಾಕ್ಸಿ ಸ್ಟ್ಯಾಂಡ್, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್ ನೆಪ್ರೋಲಜಿ, ಮಿಂಟೊ, ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆ ಮತ್ತು ಅಲೈಡ್ ಆಸ್ಪತ್ರೆಗಳು, ಜೆಸಿ ರಸ್ತೆ, ಜೆಸಿ ರಸ್ತೆ 1ನೇ ಕ್ರಾಸ್, ಎ.ಎಂ. ಲೇನ್, ಕಲಾಸಿಪಾಳ್ಯ ಮುಖ್ಯ ರಸ್ತೆ, ಎಂಟಿಬಿ ರಸ್ತೆ, ಕುಂಬಾರ ಗುಂಡಿ ರಸ್ತೆ, ಶಿವಾಜಿ ರಸ್ತೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಗ್ರೇನ್ ಬಜಾರ್ ರಸ್ತೆ, ಹಳೆ ಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್ ಲೇಔಟ್, ಆಂಧ್ರ ಬ್ಯಾಂಕ್ ರಸ್ತೆ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರ್ಸಿರ್ ಪರ್ಕ್ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆ.ಹೆಚ್.ಬಿ ಕಾಲೊನಿ, ಜೈಭಾರತ್ ನಗರ, ಸಿ.ಕೆ. ಗಾರ್ಡನ್, ಡಿಕೋಸ್ಟಾ ಲೇಔಟ್, ಹಚ್ಸ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ ಹಾಗೂ ಬಾಣಸವಾಡಿ ರೈಲು ನಿಲ್ದಾಣ ರಸ್ತೆ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇದನ್ನೂ ಓದಿ: ಯುಪಿಐ ವ್ಯವಸ್ಥೆ ಜಾರಿಗೆ ಮೀನಮೇಷ: ಬೆಸ್ಕಾಂ ನಡೆಗೆ ಹೈಕೋರ್ಟ್ ಗರಂ - BESCOM