ETV Bharat / state

ವಾಟರ್ ಟ್ಯಾಂಕರ್ ವಾಹನ ಹಿಟ್ ಆ್ಯಂಡ್ ರನ್; ಬೈಕ್​ ಹಿಂಬದಿ ಸವಾರ ಸಾವು - ROAD ACCIDENT

ವಾಟರ್ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

accident
ಅಪಘಾತ
author img

By ETV Bharat Karnataka Team

Published : Apr 15, 2024, 5:19 PM IST

ಬೆಂಗಳೂರು: ವಾಟರ್ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿ ತುಂಗಾನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಹರೀಶ್.ಆರ್ (32) ಮೃತ ದುರ್ದೈವಿ. ನಸುಕಿನಜಾವ 02 ಗಂಟೆಗೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹರೀಶ್ ಮೃತಪಟ್ಟಿದ್ದನು.

ಸ್ನೇಹಿತ ಸುಚೀತ್ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ‌ ತುಂಗಾನಗರ ಮುಖ್ಯರಸ್ತೆಯ ಕಾವೇರಿ ಫ್ಯಾಷನ್ ಬಳಿ ಎದುರು ದಿಕ್ಕಿನಿಂದ ಬಂದ ಶ್ರೀಕೃಷ್ಣ ಹೆಸರಿನ ನೀರಿನ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದಿತ್ತು. ಈ ವೇಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸುಚೀತ್ ಕೆಳಗೆ ಬಿದ್ದಿದ್ದು, ಹಿಂಬದಿ ಸವಾರ ಹರೀಶ್ ವಾಟರ್ ಟ್ಯಾಂಕರ್​​ ವಾಹನದ ಮುಂಭಾಗಕ್ಕೆ ಸಿಲುಕಿಕೊಂಡು ತೀವ್ರ ಗಾಯಗೊಂಡಿದ್ದನು. ಅಪಘಾತವೆಸಗಿದ್ದ ಟ್ಯಾಂಕರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ತಕ್ಷಣ ಸಾರ್ವಜನಿಕರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಗಾಯಾಳು ಹರೀಶ್ ಮಾರ್ಗಮಧ್ಯೆ ಅಸುನೀಗಿದ್ದಾನೆ.

ಸದ್ಯ ಮೃತನ ಪತ್ನಿಯ ದೂರಿನನ್ವಯ ವಾಟರ್ ಟ್ಯಾಂಕರ್ ಚಾಲಕನ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ:ವಿಜಯಪುರ: ಕಾರು - ಲಾರಿ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ - VIJAYAPURA ACCIDENT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.