ETV Bharat / state

ಹೋಟೆಲ್​ಗೆ ನುಗ್ಗಿ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿದ ದುಷ್ಕರ್ಮಿಗಳು - Bengaluru Crime - BENGALURU CRIME

ಬೆಂಗಳೂರಿನಲ್ಲಿ ಹೋಟೆಲ್​ ಮಾಲೀಕನೊಬ್ಬನಿಗೆ ದುಷ್ಕರ್ಮಿಗಳು ಚಾಕು ತೋರಿಸಿ ಹೆದರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

THUGS ENTERED THE HOTEL  THREATENED THE OWNER  KNIFE  BENGALURU
ಹೋಟೆಲ್​ಗೆ ನುಗ್ಗಿ ಮಾಲೀಕನಿಗೆ ಚಾಕು ತೋರಿಸಿ ಬೆದರಿಸಿದ ಪುಂಡರು
author img

By ETV Bharat Karnataka Team

Published : Apr 29, 2024, 12:23 PM IST

ಬೆಂಗಳೂರು: ಹೋಟೆಲ್​ಗೆ ನುಗ್ಗಿ ಮಾಲೀಕನಿಗೆ ಮೂವರು ಚಾಕು ತೋರಿಸಿ ಬೆದರಿಸಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಹೋಟೆಲ್​ಗೆ ಪ್ರವೇಶಿಸಿದ್ದ ಮೂವರು ಅಪರಿಚಿತರು ಕ್ಷುಲ್ಲಕ ಕಾರಣಕ್ಕಾಗಿ ಹೋಟೆಲ್​ ಮಾಲೀಕರೊಂದಿಗೆ ದುಂಡಾವರ್ತನೆ ತೋರಿದ್ದಾರೆ.‌ ಕೆಲ ಕಾಲ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಪುಂಡನೋರ್ವ ಚಾಕು ತೋರಿಸಿ ಬೆದರಿಸಿದ್ದಾನೆ.

ಯಾವ ಕಾರಣಕ್ಕಾಗಿ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ತಿಳಿದುಬಂದಿಲ್ಲ. ಈ ಘಟನೆಯ ದೃಶ್ಯ ಹೋಟೆಲ್​ನಲ್ಲಿ ಅಳವಡಿಸಿದ್ದ​ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ವಿಶಾಲ್ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ನಗರ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ತಮ್ಮ ನೋವನ್ನು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ನಾವು ಇಲ್ಲಿಯವರಲ್ಲ, ನಮಗೆ ಇವರ ಭಾಷೆ ಅರ್ಥವಾಗುತ್ತಿಲ್ಲ. ಪ್ರತಿದಿನ ಈ ರೀತಿ ನಮಗೆ ತೊಂದರೆ ಕೊಡುತ್ತಾರೆ. ಇದರಿಂದ ನಾವು ಆತಂಕಕ್ಕೊಳಗಾಗಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ ಮತ್ತು ಪುಂಡರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕೋರಿದ್ದಾರೆ. ಅಧಿಕೃತವಾಗಿ ದೂರು ಬಂದ ಬಳಿಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: 14 ಚುನಾವಣೆ, 7 ಪ್ರಧಾನಿಗಳನ್ನು ಕಂಡಿದ್ದ ಪ್ರಸಾದ್: ಸೋಲಿನಿಂದ ಆರಂಭ, ಗೆಲುವಿನಿಂದ ರಾಜಕೀಯ ಅಂತ್ಯ - Srinivasa Prasad

ETV Bharat Logo

Copyright © 2025 Ushodaya Enterprises Pvt. Ltd., All Rights Reserved.