ETV Bharat / state

ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ಮಾರ್ಗ 2025ರೊಳಗೆ ಪೂರ್ಣ: ಸಚಿವ ಎಂ.ಬಿ ಪಾಟೀಲ

author img

By ETV Bharat Karnataka Team

Published : Mar 16, 2024, 10:41 PM IST

Updated : Mar 16, 2024, 10:56 PM IST

ಚಿಕ್ಕಬಾಣಾವರ - ಯಶವಂತಪುರ ನಡುವಿನ ಮಾರ್ಗದಲ್ಲಿ ಯು - ಗರ್ಡರ್ ನಿರ್ಮಾಣದ ಕಾಮಗಾರಿಯನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಪರಿಶೀಲಿಸಿದರು.

U girder construction work
ಯು-ಗರ್ಡರ್ ನಿರ್ಮಾಣದ ಕಾಮಗಾರಿಯನ್ನು ಸಚಿವ ಎಂ ಬಿ ಪಾಟೀಲ್ ಪರಿಶೀಲಿಸಿದರು.

ಸಚಿವ ಎಂ ಬಿ ಪಾಟೀಲ ಮಾಧ್ಯಮದವರ ಜೊತೆ ಮಾತನಾಡಿದರು.

ದೇವನಹಳ್ಳಿ: ಬಿಎಸ್​ಆರ್​ಪಿ(ಬೆಂಗಳೂರು ಉಪನಗರ ರೈಲು ಯೋಜನೆ)ಮೊದಲ ಭಾಗವಾದ ಚಿಕ್ಕಬಾಣಾವರ - ಯಶವಂತಪುರ ನಡುವಿನ 7.4 ಕಿ‌.ಮೀ. ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗಲಿದ್ದು, ಇದರಲ್ಲಿ ದೇಶದಲ್ಲೇ ಅತಿ ಉದ್ದದ ಗರ್ಡರ್ ಬಳಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದರು.

ದೇಶದಲ್ಲೇ ಅತಿ ಉದ್ದದ (100 ಅಡಿ ಅಥವಾ 31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆಯನ್ನು ವೀಕ್ಷಿಸಲು ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕ್ಯಾಸ್ಟಿಂಗ್ ಕಾರ್ಯಾಗಾರಕ್ಕೆ ಭೇಟಿ ನೀಡಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಯು-ಗರ್ಡರ್ ಬಳಕೆ: ಎಂಜಿನಿಯರಿಂಗ್ ಅದ್ಭುತ ಈ ಎನ್ನಲಾಗಿರುವ ಈ 100 ಅಡಿ ಉದ್ದದ ಯು - ಗರ್ಡರ್​ ಅನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ ಬಳಸಲಾಗುತ್ತಿದೆ. ಮಲ್ಲಿಗೆ ಕಾರಿಡಾರ್​​ನ (ನಂಬರ್ 2) ಭಾಗವಾದ ಹೆಬ್ಬಾಳ - ಯಶವಂತಪುರದ 8 ಕಿ ಮೀ ನಡುವೆ ಇಂತಹ ಸುಮಾರು 450 ಯು-ಗರ್ಡರ್​ಗಳನ್ನು ಬಳಸಲಾಗುತ್ತದೆ. ಇದಕ್ಕೆ ಮುಂಚೆ, ದೇಶದಲ್ಲಿ ಬೇರೆ ರೈಲ್ವೆ ಯೋಜನೆಗಳಲ್ಲಿ 28 ಮೀಟರ್ ಉದ್ದದ ಯು - ಗರ್ಡರ್ ಗಳನ್ನು ಬಳಸಲಾಗುತ್ತಿತ್ತು.

ಈ ಎಲ್ ಅಂಡ್ ಟಿ ಕ್ಯಾಸ್ಟಿಂಗ್ ಯಾರ್ಡ್​ನಲ್ಲಿ ಐ-ಗರ್ಡರ್ ಮತ್ತು ಫೈಯರ್ ಕ್ಯಾಪ್​​ಗಳನ್ನು ಕೂಡ ಕ್ಯಾಸ್ಟಿಂಗ್ ಮಾಡಲಾಗುತ್ತದೆ. ಮೇಲಿನ ಮಾರ್ಗದಲ್ಲಿ ಇಂತಹ 323 ಐ-ಗರ್ಡರ್, 283 ಫೈಯರ್ ಕ್ಯಾಪ್​​ಗಳನ್ನು ಬಳಸಲಾಗುತ್ತದೆ. ಈ ಗರ್ಡರ್​ನ ಅನುಕೂಲಗಳ ಬಗ್ಗೆ ಪ್ರಸ್ತಾಪಿಸಿದ ಸಚಿವ ಪಾಟೀಲ ಅವರು, ಇದರಿಂದ ವಯಾಡಕ್ಟ್ ಕೂರಿಸಲು ಹಿಡಿಯುವ ಸಮಯವನ್ನು ಕಡಿಮೆಗೊಳಿಸುತ್ತದೆ. ನೋಡುವುದಕ್ಕೆ ಸುಂದರವಾಗಿರುತ್ತದೆ, ಬಾಳಿಕೆಯ ಅವಧಿ ಹೆಚ್ಚುತ್ತದೆ ಹಾಗೂ ಹಣ ಉಳಿತಾಯವೂ ಆಗುತ್ತದೆ ಎಂದು ವಿವರಿಸಿದರು.

ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಈ ವರೆಗೆ ಶೇಕಡಾ 20 ರಷ್ಟು ಕಾಯಂ ಕಾಮಗಾರಿಗಳು ಮುಗಿದಿವೆ. ಕಾರಿಡಾರ್ -2ರಲ್ಲಿ (ಚಿಕ್ಕಬಾಣಾವರ-ಬೆನ್ನಿಗಾನಹಳ್ಳಿ) ಅಗತ್ಯವಿರುವ 120.44 ಎಕರೆ ಭೂಮಿ ಪೈಕಿ 119.18 ಎಕರೆ ಜಮೀನು (ಶೇಕಡ 98.5 ರಷ್ಟು) ಈಗಾಗಲೇ ಸ್ವಾಧೀನಗೊಂಡಿದೆ ಎಂದು ತಿಳಿಸಿದರು.

ಕಾರಿಡಾರ್ - 2ರಲ್ಲಿ ಉತ್ತಮವಾಗಿ ಕೆಲಸ ನಡೆಯುತ್ತಿದೆ. ನಾಗರಿಕ ಸೇವೆಗಳನ್ನು ಸ್ಥಳಾಂತರಿಸುವ ಬಗ್ಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಸ್ಎನ್ಎಲ್ ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಪಾಟೀಲ ಹೇಳಿದರು.

ಕಂಟೋನ್ಮೆಂಟ್- ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆ: ಕೆಂಗೇರಿ- ವೈಟ್ ಫೀಲ್ಡ್ ಕಾರಿಡಾರನಲ್ಲಿ ಕೆಂಗೇರಿ - ಕಂಟೋನ್ಮೆಂಟ್ ನಡುವೆ ಉಪನಗರ ಯೋಜನೆ ಜಾರಿಗೆ ಯಾವ ಆತಂಕವೂ ಇಲ್ಲ. ಆದರೆ ಕಂಟೋನ್ಮೆಂಟ್- ವೈಟ್ ಫೀಲ್ಡ್ ನಡುವೆ ಜಾಗದ ಸಮಸ್ಯೆ ಇದ್ದು, ಇಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆ ಅಥವಾ ಬೇರೆ ಯಾವ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬುದರ ಬಗ್ಗೆ ರೈಲ್ವೆ ಜತೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಒಟ್ಟಾರೆ, ರೂ 15,677 ಕೋಟಿ ಯೋಜನೆಯ ನಾಲ್ಕೂ ಕಾರಿಡಾರ್​ಗಳ 148.17 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಮಗಾರಿ ಡಿಸೆಂಬರ್ 2027ಕ್ಕೆ ಮುಗಿಯಲಿದೆ. ಈ ಗುರಿಗೆ ಪೂರಕವಾಗಿ ರೈಲ್ವೆ ಇಲಾಖೆಯು ಸಿ-1 ಮತ್ತು ಸಿ- 3 ಕಾರಿಡಾರ್​ಗಳ ಕಾಮಗಾರಿಗಾಗಿ ಒತ್ತುವರಿ ತೆರವುಗೊಳಿಸಿದ ಭೂಮಿಯನ್ನು ನಮಗೆ ಹಸ್ತಾಂತರಿಸಬೇಕು ಹಾಗೂ ಡಿಪಿಆರ್ ನಲ್ಲಿ ಇರುವಂತೆ ಅಲೈನ್ಮೆಂಟಿಗೆ ಅನುಮತಿ ನೀಡಬೇಕು ಎಂದು ಕೋರಿದರು.

ರೈಲ್ವೆ ಇಲಾಖೆಯು ಮುಂಬರುವ ವರ್ಷಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವರ್ತುಲ ರೈಲ್ವೆ ಯೋಜನೆಗೆ ಉಪನಗರ ರೈಲು ಯೋಜನೆಯನ್ನು ಸಂಪರ್ಕಿಸುವ ಜೊತೆಗೆ ಅದನ್ನು ಬೆಂಗಳೂರು ಸುತ್ತಲಿನ ಉಪನಗರಗಳಿಗೆ ವಿಸ್ತರಿಸುವ ಬಗ್ಗೆಯೂ ಕೆ - ರೈಡ್ ಈಗಾಗಲೇ ಚಿಂತನೆ ನಡೆಸುತ್ತಿದೆ. ಇದರ ಬಗ್ಗೆ ರೈಲ್ವೆ ಇಲಾಖೆ ಜೊತೆ ಚರ್ಚಿಸಿ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಕೆ-ರೈಡ್ ಸಮರ್ಥವಾಗಿದೆ:ಸಚಿವ ಪಾಟೀಲ ಅವರು ಇದೇ ಸಂದರ್ಭದಲ್ಲಿ ಕೆ-ರೈಡ್ ನ ಪರಿಣತಿಯನ್ನು ಸಮರ್ಥಿಸಿಕೊಡರು. ಉಪನಗರ ರೈಲು ಯೋಜನೆಯಂತಹ ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೇಕಾದ ತಾಂತ್ರಿಕ ಪರಿಣತಿ ಕೆ-ರೈಡ್ ಬಳಿ ಇಲ್ಲ ಎಂಬ ರೈಲ್ವೆ ಇಲಾಖೆಯ ಅಭಿಪ್ರಾಯದಲ್ಲಿ ಯಾವ ಸತ್ಯಾಂಶವೂ ಇಲ್ಲ ಎಂದು ಅವರು ತಿರುಗೇಟು ನೀಡಿದರು.

ಉಪನಗರ ರೈಲು ಯೋಜನೆ ರೈಲ್ವೆ ಇಲಾಖೆಯು ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಡಿ ನಡೆಯುತ್ತಿದ್ದಾಗ ಕೆಲಸ ಹಿಂದೆ ಬಿದ್ದಿತ್ತು. ಈಗ ಕೆ-ರೈಡ್ ಕೆಲಸವನ್ನು ಚುರುಕುಗೊಳಿಸಿ, ಸಮರ್ಥವಾಗಿ ನಿರ್ವಹಿಸುತ್ತಿದೆ. ನಮ್ಮಲ್ಲಿ ತಾಂತ್ರಿಕ ತಜ್ಞರು ಹಾಗೂ ಅನುಭವಿಗಳು ಇದ್ದಾರೆ. ರೈಲ್ವೆ ಇಲಾಖೆಯ ಹೇಳಿಕೆ ಯೋಜನೆಯ ವಿಷಯವನ್ನು ರಾಜಕೀಯ ಕಾರಣಗೊಳಿಸುವ ದುರುದ್ದೇಶ ಹೊಂದಿದೆ. ಯಾವುದೇ ಕೆಸರೆರಚಾಟಕ್ಕೆ ರೈಲ್ವೆ ಇಲಾಖೆ ಆಸ್ಪದ ಕೊಡಬಾರದು ಎಂದು ಪಾಟೀಲ ಹೇಳಿದರು

ಇದನ್ನೂಓದಿ:ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ: ರಾಜ್ಯದಲ್ಲಿ 5.42 ಕೋಟಿ ಮತದಾರರು, ಅಧಿಕಾರಿಗಳಿಂದ ಹದ್ದಿನ ಕಣ್ಣು

Last Updated : Mar 16, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.