ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಡಿಸಿಎಂ ಡಿ.ಕೆ.ಶಿವಕುಮಾರ್, ತಂದೆ ರಾಮಲಿಂಗಾ ರೆಡ್ಡಿ ಜೊತೆ ರ್‍ಯಾಲಿ ಮೂಲಕ ಆಗಮಿಸಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು.
ಮೊದಲು ಜಯನಗರ 4ನೇ ಬ್ಲಾಕ್ನಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸೌಮ್ಯ ರೆಡ್ಡಿ, ನಂತರ ರೋಡ್ ಶೋ ನಡೆಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ಗಳು, ಎಂಎಲ್ಸಿ ಯು.ಬಿ.ವೆಂಕಟೇಶ್ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಬಳಿಕ ಜಯನಗರ ಎರಡನೇ ಬ್ಲಾಕ್ನಲ್ಲಿರುವ ಬಿಬಿಎಂಪಿ ಸೌತ್ ಕಚೇರಿಯಲ್ಲಿನ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುಂಚೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾವು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡ್ತಿಲ್ಲ. ಜನರ ಬದುಕಿನ ಮೇಲೆ ರಾಜಕಾರಣ ಮಾಡ್ತೀವಿ. 28 ಲೋಕಸಭಾ ಕ್ಷೇತ್ರಗಳಲ್ಲಿ ಎಂಟು ಮಂದಿ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿದ್ದೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಐದೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ. ಈ ಮಗಳು ನನ್ನ ಮನೆ ಮಗಳು. ಐಶ್ವರ್ಯ ಬೇರೆ ಅಲ್ಲ, ಸೌಮ್ಯ ರೆಡ್ಡಿ ಬೇರೆ ಅಲ್ಲ. ನನ್ನ ಮಗಳೆಂದು ಭಾವಿಸಿ ಗೆಲ್ಲಿಸಿಕೊಡಿ ಎಂದು ರೋಡ್ ಶೋನಲ್ಲಿ ಸೌಮ್ಯಾ ರೆಡ್ಡಿ ಪರ ಮತ ಯಾಚಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅಭ್ಯರ್ಥಿ ಸೌಮ್ಯರೆಡ್ಡಿ, ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕಳೆದ ಮೂರು ನಾಲ್ಕುವಾರದಿಂದ ದಕ್ಷಿಣದಲ್ಲಿ ಸುತ್ತಾಡಿದ್ದೇವೆ. ಮತ್ತೊಮ್ಮೆ ಕಾಂಗ್ರೆಸ್ ಬರಬೇಕು ಅನ್ನೋದು ಜನರ ಆಶಯವಾಗಿದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕರು ಕಾರ್ಯಕರ್ತರು ಬಂದಿದ್ದಾರೆ. 10 ವರ್ಷದಿಂದ ಬಿಜೆಪಿ ಅಚ್ಚೇ ಸರ್ಕಾರ ಬರುತ್ತೆ ಅಂತಾ ಹೇಳಿ ಜನರಿಗೆ ಬೇಸರ ಆಗಿದೆ. ಕಾಂಗ್ರೆಸ್ನ ಗ್ಯಾರಂಟಿ ಬಗ್ಗೆ ಮಹಿಳೆಯರು ಹೇಳ್ತಿದ್ದಾರೆ ಎಂದರು.
ಓದಿ: ಶಾಲೆಯಲ್ಲಿ ಉದ್ಯಾನ ನಿರ್ಮಿಸಿ ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ - garden at school