ETV Bharat / state

ಬೆಂಗಳೂರು ಟ್ರಾಫಿಕ್‌ನಲ್ಲಿ ಕಾಯುವಿಕೆ ಅಂತ್ಯ; ಎಐ ಆಧಾರಿತ ಸಿಗ್ನಲ್‌ ಕಂಟ್ರೋಲ್ ಸಿಸ್ಟಂ ಆರಂಭಿಸಿದ ಪೊಲೀಸರು

ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಾಹನಗಳ ದಟ್ಟಣೆ ನಿಯಂತ್ರಿಸುವ ಹೊಸ ಯೋಜನೆಯನ್ನು ಪೊಲೀಸರು ಆರಂಭಿಸಿದ್ದಾರೆ.

author img

By ETV Bharat Karnataka Team

Published : 3 hours ago

Updated : 3 hours ago

AI SYSTEM IN BENGALURU
ವಾಹನಗಳ ಸಂಚಾರ ದಟ್ಟಣೆ (IANS)

ಬೆಂಗಳೂರು: ಸುಗಮ ಸಂಚಾರ ಹಾಗೂ ವಾಹನ ಸವಾರರಿಗೆ ಪ್ರಯಾಣದ ಸಮಯದಲ್ಲಿನ ವಿಳಂಬವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಾಧರಿತ ಸಿಗ್ನಲ್ ಕಂಟ್ರೋಲ್ ಸಿಸ್ಟಂ ಅನ್ನು ಬೆಂಗಳೂರು ಸಂಚಾರಿ ಪೊಲೀಸರು ಆರಂಭಿಸಿದ್ದಾರೆ.

ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ (BATCS) ಎಂಬ ವಿನೂತನ ಯೋಜನೆಯನ್ನ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಸುಗಮ ಸಂಚಾರ ಹಾಗೂ ಪ್ರಯಾಣದ ಸಮಯ ವಿಳಂಬವನ್ನು ಕಡಿಮೆ ಮಾಡಲಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದರು.

ಎಐ ಆಧಾರಿತ ಸಿಗ್ನಲ್‌ ಕಂಟ್ರೋಲ್ ಸಿಸ್ಟಂ ಬಗ್ಗೆ ಮಾಹಿತಿ ನೀಡುತ್ತಿರುವ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ (ETV Bharat)

ಏನಿದು BATCS? ಮೇ 2024ರಲ್ಲಿ ಪ್ರಾರಂಭವಾದ BATCS ಯೋಜನೆಯಡಿಯಲ್ಲಿ ಈಗಾಗಲೇ ನಗರದಲ್ಲಿರುವ 136 ಜಂಕ್ಷನ್‌ಗಳಲ್ಲಿ ಸಂಚಾರ ನಿರ್ವಹಣೆಯ ನವೀಕರಣ ಹಾಗೂ 29 ಹೊಸ ಸಿಗ್ನಲ್ ಸೇರಿದಂತೆ ಒಟ್ಟು 165 ಟ್ರಾಫಿಕ್ ಸಿಗ್ನಲ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಅನಿರೀಕ್ಷಿತ ದಟ್ಟಣೆ ಮತ್ತಿತರ ಸಂಚಾರ ಸಂಬಂಧಿತ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲಕರವಾಗುಂತೆ CDAC ಸಂಸ್ಥೆಯು ಅಭಿವೃದ್ಧಿಪಡಿಸಿರುವ CoSiCoSt ATCS ಅಪ್ಲಿಕೇಶನ್‌ನ್ನ ಈ ವ್ಯವಸ್ಥೆಯು ಬಳಸಿಕೊಳ್ಳಲಿದೆ. ನಗರದಲ್ಲಿ ಬಳಸಲಾದ ಈ ಹಿಂದಿನ ಸಂಚಾರ ನಿರ್ವಹಣಾ ವ್ಯವಸ್ಥೆಗಿಂತ ಭಿನ್ನವಾಗಿರುವ BATCS, ಜಂಕ್ಷನ್‌ನಲ್ಲಿ ಅಳವಡಿಸಿರುವ ಕ್ಯಾಮರಾಗಳಿಂದ ಮಾಹಿತಿ ಪಡೆದು ಯಾವ ರಸ್ತೆಯಲ್ಲಿ ಎಷ್ಟು ವಾಹನಗಳ ಸಾಂದ್ರತೆಯಿದೆ ಎಂಬುದನ್ನು ಗ್ರಹಿಸಿ ತನ್ನದೇ ವಿಶ್ಲೇಷಣೆಯ ಮೂಲಕ ಅತ್ಯುತ್ತಮ ಎನಿಸುವ ಆಯ್ಕೆಯನ್ನ ಸಿಗ್ನಲ್‌ಗೆ ರವಾನಿಸುತ್ತದೆ. ಅದರ ಆಧಾರದಲ್ಲಿ ಸಿಗ್ನಲ್‌ಗಳು ಕಾರ್ಯ ನಿರ್ವಹಿಸುವುದರಿಂದ ವಾಹನ ಸವಾರರು ಅನಾವಶ್ಯಕವಾಗಿ ಸಿಗ್ನಲ್‌ಗಳಲ್ಲಿ ಕಾಯುವುದು ತಪ್ಪಿದಂತಾಗುತ್ತದೆ. ಉದಾಹರಣೆಗೆ ಒಂದು ರಸ್ತೆಯಲ್ಲಿ ಹೆಚ್ಚು ವಾಹನಗಳಿದ್ದರೂ ಸಹ ರೆಡ್ ಸಿಗ್ನಲ್‌ ಇರುವುದರಿಂದ ಕಾಯಬೇಕಾದ ಅಥವಾ ಎದುರು ರಸ್ತೆಯಲ್ಲಿ ವಾಹನಗಳೇ ಇರದಿದ್ದರೂ ಸಹ ಅಲ್ಲಿ ಗ್ರೀನ್ ಸಿಗ್ನಲ್‌ ಇರುವುದರಿಂದ ಕಾಯಬೇಕಾದ ಅನಿವಾರ್ಯತೆ ಇರುವುದಿಲ್ಲ.

ಇದಲ್ಲದೆ BATCS ತಂತ್ರಜ್ಞಾನದ ಪ್ರತಿ ಕಾರ್ಯ ವಿಧಾನವೂ ಸಹ ಸಂಚಾರ ನಿಯಂತ್ರಣ ಕೇಂದ್ರದಿಂದಲೇ ಗಮನಿಸಲು ಹಾಗೂ ನಿಯಂತ್ರಿಸಲು ಸಾಧ್ಯವಿರುವುದರಿಂದ ಬದಲಾಗುತ್ತಿರುವ ಸಂಚಾರ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಿಗ್ನಲ್ ಹೊಂದಾಣಿಕೆ ಮಾಡಬಹುದಾಗಿದೆ. ಇದಲ್ಲದೇ ಪ್ರಮುಖ ರಸ್ತೆಗಳಲ್ಲಿ ಆದಷ್ಟು ಗ್ರೀನ್ ಸಿಗ್ನಲ್‌ಗಳನ್ನ ನೀಡಲು ಅನುಕೂಲವಾಗಲಿದ್ದು, ಸವಾರರ ಪ್ರಯಾಣದ ಸಮಯ ಕಡಿಮೆ ಮಾಡುವುದರೊಂದಿಗೆ ವಾಹನಗಳ ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ. ಜೊತೆಗೆ ತುರ್ತು ವಾಹನಗಳಿಗೆ ಆದ್ಯತೆಗನುಗುಣವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದು ಅನುಚೇತ್ ಮಾಹಿತಿ ನೀಡಿದರು.

ಬೆಂಗಳೂರು ಭಾರತದಲ್ಲಿಯೇ ಅತೀ ಹೆಚ್ಚು ಖಾಸಗಿ ವಾಹನಗಳನ್ನ ಹೊಂದಿರುವ ನಗರವಾಗಿದೆ. 14 ಸಾವಿರ ಕಿಲೋ ಮೀಟರ್‌ನಷ್ಟು ಉದ್ದವಾದ ರಸ್ತೆಗಳನ್ನ ಹೊಂದಿರುವ ಬೆಂಗಳೂರಿನಲ್ಲಿ ಸರಿಸುಮಾರು 1.20 ಕೋಟಿಯಷ್ಟು ವಾಹನಗಳಿವೆ. ಆದ್ದರಿಂದ ನಗರದಲ್ಲಿ ಸುಗಮ ಸಂಚಾರ ಹಾಗೂ ಪ್ರಯಾಣಿಕರ ಸಂಚಾರದ ಸಮಯವನ್ನ ಕಡಿಮೆಗೊಳಿಸುವ ನಿಟ್ಟಿನಲ್ಲಿ ನೂತನ ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಬಸವನಗುಡಿ, ಜಯನಗರ, ಜೆ.ಪಿ ನಗರ ಹಡ್ಸನ್ ಸರ್ಕಲ್‌ ಸೇರಿದಂತೆ ಸುಮಾರು 60 ಜಂಕ್ಷನ್​ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, 20%ರಷ್ಟು ವಾಹನ ಸವಾರರ ಪ್ರಯಾಣದ ಅವಧಿಯನ್ನ ಇದು ಕಡಿಮೆಗೊಳಿಸಿದೆ. ಬೆಂಗಳೂರು, ಹೈದರಾಬಾದ್ ಸೇರಿದಂತೆ ಭಾರತದ 30ಕ್ಕೂ ಹೆಚ್ಚು ನಗರಗಳಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಲಾದ ಈ ವ್ಯವಸ್ಥೆಯು 15%ಕ್ಕಿಂತ ಹೆಚ್ಚು ಸಂಚಾರ ದಟ್ಟಣೆಯನ್ನ ತಗ್ಗಿಸಿದೆ ಎಂದು ಆಯುಕ್ತರು ವಿವರಿಸಿದರು.

ಜನವರಿ 2025ರೊಳಗೆ ಉಳಿದ ಜಂಕ್ಷನ್‌ಗಳಲ್ಲಿ BATCS ವ್ಯವಸ್ಥೆಯನ್ನ ಅಳವಡಿಸುವ ಗುರಿ ಹೊಂದಲಾಗಿದ್ದು, ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಿ ಪ್ರಯಾಣಿಕರಿಗೆ ಒಟ್ಟಾರೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ಸಂಚಾರ ವಿಭಾಗದ ಜಂಟಿ‌ ಆಯುಕ್ತ ಎಂ.ಎನ್ ಅನುಚೇತ್ ತಿಳಿಸಿದರು.

ಇದನ್ನೂ ಓದಿ: ಮದ್ಯ ಸೇವನೆ, ವ್ಹೀಲಿಂಗ್, ಪದೇ ಪದೆ ಸಂಚಾರ ನಿಯಮ ಉಲ್ಲಂಘನೆ; ಈ ವರ್ಷ ರದ್ದಾದ ಡ್ರೈವಿಂಗ್ ಲೈಸೆನ್ಸ್ ಎಷ್ಟು? - driving licence cancelled

Last Updated : 3 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.