ETV Bharat / state

ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ ಕೇಸ್: ಆರೋಪಿಯ ಸುಳಿವು ಲಭ್ಯ- ಕಮಿಷನರ್ - Bengaluru Woman Murder Case

ಬೆಂಗಳೂರಿನ ವೈಯಾಲಿಕಾವಲ್​ನಲ್ಲಿ ಇತ್ತೀಚಿಗೆ ನಡೆದ ಮಹಾಲಕ್ಷ್ಮಿ‌ ಎಂಬ ಯುವತಿಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

COMMISSIONER REACT ON MURDER CASE
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ (ETV Bharat)
author img

By ETV Bharat Karnataka Team

Published : Sep 23, 2024, 1:18 PM IST

ಬೆಂಗಳೂರು: ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯನ್ನು ಹತ್ಯೆಗೈದ ಪ್ರಕರಣದ ಆರೋಪಿಯ ಕುರಿತು ಮಾಹಿತಿ ಲಭ್ಯವಾಗಿದೆ. ಆತನ ಬಂಧನದ ಬಳಿಕ ಕೃತ್ಯಕ್ಕೆ ಕಾರಣ ತಿಳಿಯಬೇಕಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

ಆರೋಪಿ ಅನ್ಯ ರಾಜ್ಯದವನು. ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ನಾಪತ್ತೆಯಾಗಿರುವ ಆತನ ಪತ್ತೆ ಕಾರ್ಯ ಮುಂದುವರೆದಿದೆ. ಬಂಧನದ ಬಳಿಕ ಸ್ಪಷ್ಟವಾದ ಮತ್ತಷ್ಟು ಸತ್ಯಗಳು ಹೊರಬರಬರುತ್ತವೆ ಎಂದು ಹೇಳಿದರು.

ಯುವತಿಯನ್ನು ಕೊಂದ ಆರೋಪಿ, ಮೃತದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್‌ನಲ್ಲಿ ತುಂಬಲು ಯತ್ನಿಸಿದ್ದಾನೆ. ಆದರೆ, ಸೂಟ್‌ಕೇಸ್​ನಲ್ಲಿ ತುಂಬಲಾಗದೇ ಫ್ರಿಡ್ಜ್​ನಲ್ಲಿಟ್ಟು ಎಸ್ಕೇಪ್ ಆಗಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನೇಪಾಳದ 29 ವರ್ಷದ ಮಹಾಲಕ್ಷ್ಮೀಯನ್ನು ಹತ್ಯೆಗೈದು, ಮೃತದೇಹದ ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿ ಆರೋಪಿ ಪರಾರಿಯಾಗಿರುವುದು ತನಿಖೆಯಿಂದ ಬಯಲಾಗಿದೆ. ಈಗಾಗಲೇ ಆತನ ಪತ್ತೆಗೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ನೇತೃತ್ವದಲ್ಲಿ 6 ವಿಶೇಷ ತಂಡಗಳನ್ನು ರಚಿಸಲಾಗಿದೆ. ಘಟನೆ ನಡೆದ ಮನೆಯ ಸುತ್ತಮುತ್ತಲ ಪ್ರದೇಶಗಳ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಮಹಿಳೆಯ ಬರ್ಬರ ಕೊಲೆ; ದೇಹ ಕತ್ತರಿಸಿ ಫ್ರಿಡ್ಜ್​ನಲ್ಲಿ ಇಟ್ಟ ಆರೋಪಿ - Murder In Bengaluru

ಬೆಂಗಳೂರಿನಲ್ಲಿ ಮಹಿಳೆಯ ಭೀಕರ ಕೊಲೆ ಪ್ರಕರಣ: ಹಂತಕನ ಪತ್ತೆಗೆ 6 ವಿಶೇಷ ಪೊಲೀಸ್ ತಂಡ ರಚನೆ - Bengaluru Woman Murder Case Update

ಬೆಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಭೀಕರ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ? - Woman Dead Body In Fridge

ETV Bharat Logo

Copyright © 2024 Ushodaya Enterprises Pvt. Ltd., All Rights Reserved.