ETV Bharat / state

ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿದೇಶಿ ಕೋರ್ಟ್​ಗೆ ಸಲ್ಲಿಕೆ; ರಾಜ್ಯ ಪೊಲೀಸರಿಗೆ ತನಿಖೆ ಅಧಿಕಾರ - ಹೈಕೋರ್ಟ್ - High Court

ಬೆಂಗಳೂರಲ್ಲಿ ಕಂಪನಿ ನಡೆಸುತ್ತಿದ್ದ ಇಬ್ಬರು ಆರೋಪಿಗಳು ದಾಖಲೆಗಳನ್ನು ಸೃಷ್ಟಿಸಿದ್ದರಿಂದ ಆ ಬಗ್ಗೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸುವ ಎಲ್ಲಾ ಅಧಿಕಾರ ವ್ಯಾಪ್ತಿ ಇಲ್ಲಿನ ಪೊಲೀಸರಿಗಿದೆ. ಜೊತೆಗೆ ಖಾಸಗಿ ದೂರು ಸ್ವೀಕಾರಾರ್ಹವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Jun 8, 2024, 8:26 PM IST

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ವಿದೇಶಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಕುರಿತು ತನಿಖೆ ನಡೆಸಲು ಇಲ್ಲಿನ ಪೊಲೀಸರಿಗೆ ಅಧಿಕಾರವಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ತಮ್ಮ ವಿರುದ್ಧದ ಕ್ರಿಮಿನಲ್‌ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಪಳನಿಸ್ವಾಮಿ ವೀರರಾಜ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೆ. ನಟರಾಜನ್‌ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಬೆಂಗಳೂರಲ್ಲಿ ಕಂಪನಿ ನಡೆಸುತ್ತಿದ್ದ ಇಬ್ಬರು ಆರೋಪಿಗಳು ದಾಖಲೆಗಳನ್ನು ಸೃಷ್ಟಿಸಿದ್ದರಿಂದ ಆ ಬಗ್ಗೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸುವ ಎಲ್ಲಾ ಅಧಿಕಾರ ವ್ಯಾಪ್ತಿ ಪೊಲೀಸರಿಗಿದೆ. ಆ ಕುರಿತ ಖಾಸಗಿ ದೂರು ಸಹ ಸ್ವೀಕಾರಾರ್ಹವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಸಿಆರ್‌ಪಿಸಿ ಸೆಕ್ಷನ್‌ 200ರಡಿ ಮ್ಯಾಜಿಸ್ಪ್ರೇಟ್‌ ಖಾಸಗಿ ದೂರನ್ನು ಮಾನ್ಯ ಮಾಡಿ ತನಿಖೆಗೆ ಆದೇಶಿಸಬಹುದು ಮತ್ತು ಪೊಲೀಸರು ಸೆಕ್ಷನ್‌ 202ರಡಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಬಹುದು ಎಂದು ಇಕ್ಬಾಲ್‌ ಸಿಂಗ್‌ ಮಾರ್ವಾ ವರ್ಸಸ್‌ ಮೀನಾಕ್ಷಿ ಮಾರ್ವಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 2017ರಲ್ಲಿ ತಿಳಿಸಿತ್ತು.

ಪ್ರಕರಣದ ಹಿನ್ನೆಲೆ: ಡಾ. ವೀರಸಿಕ್ಕು ಬೊಮ್ಮಯ್ಯ ಸ್ವಾಮಿ ಮತ್ತು ಪಳನಿಸ್ವಾಮಿ ವೀರರಾಜ ಉತ್ತಮ ಬಾಂಧವ್ಯ ಹೊಂದಿದ್ದರು. ಪಳನಿಸ್ವಾಮಿ ಜವಳಿ ಉತ್ಪಾದನಾ ವಲಯದಲ್ಲಿ ಪಾಲುದಾರಿಕೆ ಕಂಪನಿ ಹೊಂದಿದ್ದರು. ಅವರು ಅಮೆರಿಕಾದಲ್ಲಿನ ತಮ್ಮ ವ್ಯಾಪಾರವನ್ನು ಉತ್ತೇಜಿಸಲು ವೀರಸಿಕ್ಕು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಅವರು ವೆಚ್ಚವನ್ನು ನೀಡಬೇಕಾಗಿತ್ತು ಮತ್ತು ಲಾಭವನ್ನು ಹಂಚಿಕೊಳ್ಳಬೇಕಾಗಿತ್ತು. ಅಲ್ಲಿ ಪಳನಿಸ್ವಾಮಿ ವ್ಯಾಪಾರ ಉತ್ತೇಜಿಸಲು 2,25,777.90 ಅಮೆರಿಕನ್‌ ಡಾಲರ್‌ ಅನ್ನು ವೀರಸಿಕ್ಕು ಖರ್ಚು ಮಾಡಿದ್ದರು. ಆ ಹಣವನ್ನು ಪಳನಿಸ್ವಾಮಿ ಪಾವತಿಸದ ಹಿನ್ನೆಲೆಯಲ್ಲಿ ವೀರಸಿಕ್ಕು ಅಮೆರಿಕಾದ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

ಇದನ್ನೂ ಓದಿ: ಮಗನಿಗೆ ತಂದೆ ಗಿಫ್ಟ್ ಡೀಡ್; ತನ್ನನ್ನು ನೋಡಿಕೊಳ್ಳುವ ಷರತ್ತಿಲ್ಲವೆಂದು ಡೀಡ್​ ರದ್ದುಗೊಳಿಸಲಾಗದು: ಹೈಕೋರ್ಟ್ - High Court

ಆಗ ಆರೋಪಿಗಳಾದ ಪಳನಿಸ್ವಾಮಿ ವೀರರಾಜ ಮತ್ತಿತರರು ಬೆಂಗಳೂರಿನಲ್ಲಿ ದಾಖಲೆಗಳನ್ನು ನಕಲು ಮಾಡಿ ಅವುಗಳನ್ನು ಅಮೆರಿಕಾದ ತನ್ನ ವಕೀಲರಿಗೆ ಕಳುಹಿಸಿಕೊಟ್ಟಿದ್ದರು. ವಿಧಿ ವಿಜ್ಞಾನ ತಜ್ಞರೂ ಸಹ ಆ ದಾಖಲೆಗಳನ್ನು ನಕಲಿ ಎಂದು ದೃಢಪಡಿಸಿದ್ದರು. ಹಾಗಾಗಿ ವೀರಸಿಕ್ಕು ಅವರು ಪಳನಿಸ್ವಾಮಿ ಮತ್ತಿತರರ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್‌ 406, 468, 471, 420ರಡಿ ಖಾಸಗಿ ದೂರು ದಾಖಲಿಸಿದ್ದರು. ಆ ಸಂಬಂಧ ನ್ಯಾಯಾಲಯ ಪೊಲೀಸರಿಂದ ತನಿಖೆಗೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಪಳನಿಸ್ವಾಮಿ ಹೈಕೋರ್ಟ್‌ ಮೊರೆ ಹೋಗಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಮೆರಿಕಾದಲ್ಲಿ ವಹಿವಾಟು ನಡೆಸಲಾಗಿದೆ, ಹಾಗಾಗಿ ಇಲ್ಲಿ ಕ್ರಿಮಿನಲ್ ಕೇಸ್‌ ಸ್ವೀಕಾರಾರ್ಹವಲ್ಲ. ಹಾಗೇನಾದರೂ ಕೇಸ್‌ ದಾಖಲಿಸಿದರೆ ಅದನ್ನು ವಿದೇಶಿ ನ್ಯಾಯಾಲಯದಲ್ಲಿಯೇ ದಾಖಲಿಸಬೇಕು, ಬೆಂಗಳೂರಿನಲ್ಲಿ ಅಲ್ಲ. ಇಲ್ಲಿನ ಪೊಲೀಸರಿಗೆ ತನಿಖೆ ಅಧಿಕಾರವಿಲ್ಲ ಎಂದು ವಾದಿಸಿದ್ದರು. ಆದರೆ ಮೂಲ ದೂರುದಾರರ ಪರ ವಕೀಲರು, ದಾಖಲೆಗಳನ್ನು ಬೆಂಗಳೂರಲ್ಲಿ ನಕಲು ಮಾಡಿ ವಿದೇಶಿ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಹಾಗಾಗಿ ಕ್ರಿಮಿನಲ್‌ ದೂರು ವಿಚಾರಣೆಗೆ ಇಲ್ಲಿನ ತನಿಖಾಧಿಕಾರಿಗೆ ಎಲ್ಲಾ ಅಧಿಕಾರ ಇದೆ ಎಂದು ಹೇಳಿದ್ದರು.

ಸರ್ಕಾರಿ ವಕೀಲರು ಕೂಡ, ನಕಲಿ ದಾಖಲೆಗಳನ್ನು ಅಮೆರಿಕಾದಲ್ಲಿನ ಕೋರ್ಟ್‌ಗೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಯಾಲಯವೂ ಕೂಡ ಆ ಬಗ್ಗೆ ದೂರು ಮಾನ್ಯ ಮಾಡಿ ತನಿಖೆಗೆ ಆದೇಶಿಸಬಹುದಾಗಿದೆ. ಅದಕ್ಕೆ ಕಾನೂನಿನಡಿ ಯಾವುದೇ ನಿರ್ಬಂಧವಿಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ: ಕುದುರೆ ಪಂದ್ಯಗಳಿಗೆ ಅನುಮತಿ ನಿರಾಕರಿಸಿದ ಸರ್ಕಾರ: ಹೈಕೋರ್ಟ್ ಮೆಟ್ಟಿಲೇರಿದ ರೇಸ್ ಕೋರ್ಸ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.