ETV Bharat / state

ದೀಪಾವಳಿ ಹಬ್ಬ: ಬೆಂಗಳೂರಲ್ಲಿ ಕಲರ್‌ಫುಲ್ ಆಕಾಶಬುಟ್ಟಿ, ಹಣತೆ, ಪಟಾಕಿ ವ್ಯಾಪಾರ ಜೋರು

ದೀಪಾವಳಿ ಹಬ್ಬದ ಅಂಗವಾಗಿ ಇಂದು ಕೂಡ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಹೂ, ಹಣ್ಣು, ಪಟಾಕಿ, ಆಕಾಶಬುಟ್ಟಿ ಖರೀದಿಯಲ್ಲಿ ಜನರು ಮುಗಿಬಿದ್ದಿರುವುದು ಕಂಡುಬಂತು.

ಬೆಂಗಳೂರು ಮಾರುಕಟ್ಟೆಯಲ್ಲಿ ಖರೀದಿ ಜೋರು
ಬೆಂಗಳೂರು ಮಾರುಕಟ್ಟೆಯಲ್ಲಿ ಖರೀದಿ ಜೋರು (ETV Bharat)
author img

By ETV Bharat Karnataka Team

Published : 4 hours ago

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಇಂದು ಕೂಡ ಜನರು ನಿರತರಾಗಿದ್ದಾರೆ. ಕಲರ್‌ಫುಲ್ ಆಕಾಶಬುಟ್ಟಿ, ವಿವಿಧ ವಿನ್ಯಾಸಗಳ ಹಣತೆ, ನಾನಾ ರೀತಿಯ ಪಟಾಕಿಗಳ ಖರೀದಿಯಲ್ಲಿ ಮಕ್ಕಳು ಸೇರಿದಂತೆ ಜನತೆ ಉತ್ಸಾಹ ತೋರುತ್ತಿರುವುದು ಕಂಡು ಬಂದಿತು.

ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಗುರುವಾರ ಕೂಡ ಜನಜಂಗುಳಿ ಇತ್ತು. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಯಶವಂತಪುರ, ಬಸವನಗುಡಿ, ಮಲ್ಲೇಶ್ವರ, ಕೆ.ಆರ್.ಪುರ, ಬನಶಂಕರಿ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿದ್ದರೆ, ಜಯನಗರ, ಚಿಕ್ಕಪೇಟೆ, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರದಲ್ಲಿ ಝಗಮಗಿಸುವ ಆಕಾಶಬುಟ್ಟಿಗಳು, ವಿಭಿನ್ನ ಮಾದರಿಯ ದೀಪ, ಪಟಾಕಿಗಳ ಖರೀದಿಯ ಭರಾಟೆ ಜೋರಾಗಿತ್ತು.

ಹೂವು - ಹಣ್ಣುಗಳ ಬೆಲೆ: ಒಂದು ಕೆಜಿ ಸೇವಂತಿಗೆ ಹೂವಿಗೆ 250 ರಿಂದ 300 ರೂ, ಗುಲಾಬಿ 300 ರೂ, ಮಲ್ಲಿಗೆ 800 ರಿಂದ 1,000 ರೂ, ಕನಕಾಂಬರ 1,200 ರಿಂದ 1,600 ರೂ, ಚೆಂಡು 150 ರೂ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದೆ. ಇನ್ನು ಒಂದು ಕೆಜಿ ಸೇಬು ಹಣ್ಣಿಗೆ 150 ರಿಂದ 170 ರೂ, ದ್ರಾಕ್ಷಿ 90 ರೂ, ಕಿತ್ತಳೆ 45 ರಿಂದ 50 ರೂ, ಅನಾನಸ್ 60ರೂ, ದಾಳಿಂಬೆ 150 ರಿಂದ 200 ರೂ, ಸಪೋಟ 65 ರೂ, ಬಾಳೆ ಹಣ್ಣು 115 ರೂ, ಮೂಸಂಬಿ 60 ರೂ, ಸೀತಾಫಲ 50 ರೂಗೆ ವ್ಯಾಪಾರ ಆಗುತ್ತಿದೆ.

ತರಕಾರಿ ಬೆಲೆ: ಒಂದು ಕೆಜಿ ಆಲೂಗಡ್ಡೆ 40 ರೂ, ಈರುಳ್ಳಿ 40 ರೂ, ಕ್ಯಾರೆಟ್ 60 ರೂ, ಟೊಮ್ಯಾಟೊ 40 ರೂ, ಮೆಣಸಿನಕಾಯಿ 80 ರೂ, ಸೌತೆಕಾಯಿ 30 ರೂ, ಬೀನ್ಸ್ 100 ರೂ, ಬದನೆಕಾಯಿ 60 ರೂ, ಸೀಮೆ ಬದನೆ 80 ರೂ, ಹಸಿ ಬಟಾಣಿ 180 ರಿಂದ 200ರೂ, ಹೀರೇಕಾಯಿ 80 ರೂ, ಹಾಗಲಕಾಯಿ 60 ರೂ, ಬೆಳ್ಳುಳ್ಳಿ 380 ರೂ, ಶುಂಠಿ 240 ರೂ.ನಂತೆ ಮಾರಾಟ ಮಾಡಲಾಗಿದೆ.

ಗ್ರಾಹಕರನ್ನು ಆಕರ್ಷಿಸಿದ ಆಕಾಶ ಬುಟ್ಟಿ: ಹಬ್ಬದ ವಿಶೇಷವಾಗಿ ಸಣ್ಣ ಅಳತೆಯ ಒಂದು ಡಜನ್ ಮಣ್ಣಿನ ಹಣತೆಗೆ 50 ರಿಂದ 60 ರೂಪಾಯಿ, ದೊಡ್ಡ ಅಳತೆಯ ಮಣ್ಣಿನ ಹಣತೆಗೆ 100 ರಿಂದ 120 ರೂ ವರೆಗೆ ಮಾರಾಟ ಮಾಡಲಾಯಿತು. ಆಕಾಶ ಬುಟ್ಟಿಗಳು 150 ರೂ.ನಿಂದ 2,500 ರೂ ವರೆಗೆ ಮಾರಾಟವಾಯಿತು. ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿಗಳು ಗ್ರಾಹಕರನ್ನು ಆಕರ್ಷಿಸಿದವು.

ಹಸಿರು ಪಟಾಕಿಯ ಮಾರಾಟ: ದೀಪಾವಳಿ ಎಂದಾಕ್ಷಣ ನಗರದ ವಿವಿಧ ಶಾಲಾ ಕಾಲೇಜು ಮೈದಾನಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಅದರಲ್ಲಿ ವಿಶೇಷವಾಗಿ ಸುರ್ ಸುರ್ ಬತ್ತಿ, ಭೂಚಕ್ರ, ಹೂಕುಂಡ, ವಿಷ್ಣು ಚಕ್ರ, ಆನೆ ಪಟಾಕಿ, ರಾಕೆಟ್, ಮಾಲೆ ಪಟಾಕಿ ಸೇರಿದಂತೆ ವಿವಿಧ ಹಸಿರು ಪಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ.

ದೀಪಾವಳಿಯ ಲಕ್ಷ್ಮಿ ಪೂಜೆ: ಕೆಲವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಹನ ಪೂಜೆ, ವಿವಿಧ ಯಂತ್ರ, ಉಪಕರಣಗಳು, ಸಲಕರಣೆಗಳ ಪೂಜೆ ಮಾಡುವುದು ಸಹ ವಾಡಿಕೆಯಾಗಿದೆ. ಶುಕ್ರವಾರ ಲಕ್ಷ್ಮಿ ಪೂಜೆ ನಡೆಯಲಿದೆ. ಗೋಪೂಜೆಯೂ ಜರುಗಲಿದೆ.

ಇದನ್ನೂ ಓದಿ: ರ್ಷದಲ್ಲಿ ಒಂದು ದಿನ ಭಕ್ತರಿಗೆ ದರ್ಶನ ನೀಡುವ ಕಾಫಿನಾಡಿನ ದೇವಿರಮ್ಮ: ಬೆಟ್ಟಕ್ಕೆ ಹರಿದು ಬಂದ ಸಾವಿರಾರು ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.