ETV Bharat / state

ಬೆಂಗಳೂರಲ್ಲಿ 3 ವರ್ಷದ ಬಾಲಕಿ ಮೇಲೆ ನರ್ಸರಿ ಶಿಕ್ಷಕಿಯಿಂದ ಲೈಂಗಿಕ ದೌರ್ಜನ್ಯ - Sexual Assault On 3 Year Old Girl

author img

By ETV Bharat Karnataka Team

Published : Jul 5, 2024, 10:21 AM IST

ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನರ್ಸರಿ ಶಿಕ್ಷಕಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪೊಲೀಸ್ ಠಾಣೆ
ಕೆ.ಜಿ.ಹಳ್ಳಿ ಪೊಲೀಸ್ ಠಾಣೆ (ETV Bharat)

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ನರ್ಸರಿ ಶಾಲೆಯ ಶಿಕ್ಷಕಿ ಲೈಂಗಿಕ ದೌರ್ಜನ್ಯ ಎಸಗಿದ ಆತಂಕಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ. ಪೋಷಕರು ನೀಡಿದ ದೂರಿನನ್ವಯ ಕೆ.ಜಿ‌.ಹಳ್ಳಿಯ ವೆಂಕಟೇಶ್ವರಪುರದ ಅನ್ವರ್ ಲೇಔಟಿನಲ್ಲಿರುವ ಶಾಲೆಯ ಶಿಕ್ಷಕಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ಪೋಷಕರು ನೀಡಿದ ದೂರಿನ ವಿವರ: "ವೆಂಕಟೇಶ್ವರಪುರದ ಅನ್ವರ್ ಲೇಔಟಿನಲ್ಲಿರುವ ಖಾಸಗಿ ನರ್ಸರಿ ಶಾಲೆಗೆ ಬಾಲಕಿಯನ್ನು ದಾಖಲಿಸಿದ್ದೆವು. ಜೂನ್ 6ರಿಂದ ಶಾಲೆಗೆ ಹೋಗಲಾರಂಭಿಸಿದ್ದಳು. 10 ದಿನಗಳ ಬಳಿಕ, 'ನಾನು ಶಾಲೆಗೆ ಹೋಗುವುದಿಲ್ಲ' ಎನ್ನಲು ಆರಂಭಿಸಿದ್ದಳು. ಏನಾಯಿತು? ಎಂದು ವಿಚಾರಿಸಿದಾಗ, ಖಾಸಗಿ ಅಂಗಗಳಲ್ಲಿ ನೋವಾಗಿರುವ ಬಗ್ಗೆ ಹೇಳಿದ್ದಾಳೆ. ಬಳಿಕ, ಶಿಕ್ಷಕಿಯ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ತಕ್ಷಣ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ" ಎಂದು ಪೋಷಕರು ಕೆ.ಜಿ.ಹಳ್ಳಿ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಶಿಕ್ಷಕಿಯ ಹೆಸರು ಗೊತ್ತಿರದ ಬಾಲಕಿ 'ಮ್ಯಾಮ್' ಎಂದು ಪೋಷಕರ ಬಳಿ ಹೇಳಿದ್ದಾಳೆ. ದೂರಿನನ್ವಯ ಶಿಕ್ಷಕಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಇದನ್ನೂ ಓದಿ: ಪೋಕ್ಸೋ ಪ್ರಕರಣ: ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿಎಸ್​ವೈಗೆ ಕೋರ್ಟ್‌ ಸಮನ್ಸ್​ - Yediyurappa POCSO Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.