ETV Bharat / state

ಸೈಬರ್ ಅಪರಾಧಗಳ ತನಿಖಾ ಶೃಂಗಸಭೆ 2024: ಭವಿಷ್ಯದ ಸವಾಲುಗಳು, ಪರಿಹಾರೋಪಾಯಗಳ ಚರ್ಚೆ

ಬೆಂಗಳೂರಿನಲ್ಲಿ ಆಯೋಜಿಸಲಾದ ಸೈಬರ್ ಅಪರಾಧಗಳ ತನಿಖಾ ಶೃಂಗಸಭೆಯಲ್ಲಿ ಭವಿಷ್ಯದ ಸವಾಲುಗಳು, ಪರಿಹಾರೋಪಾಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

Cyber Crimes Investigation Summit  Discussion on future challenges  Cyber Crimes  The field of cyber forensics ​ Bengaluru
ಸೈಬರ್ ಅಪರಾಧಗಳ ತನಿಖಾ ಶೃಂಗಸಭೆ 2024: ಭವಿಷ್ಯದ ಸವಾಲುಗಳು, ಪರಿಹಾರೋಪಾಯಗಳ ಕುರಿತು ಚರ್ಚೆ
author img

By ETV Bharat Karnataka Team

Published : Mar 6, 2024, 1:36 PM IST

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ

ಬೆಂಗಳೂರು: ಸೈಬರ್ ಅಪರಾಧಗಳ ವಿರುದ್ಧದ ಸಮರದಲ್ಲಿ ಪ್ರಮುಖ ಪಾಲುದಾರರನ್ನು ಒಗ್ಗೂಡಿಸುವ, ಸಹಭಾಗಿತ್ವವನ್ನು ಮತ್ತಷ್ಟು ಸದೃಢಗೊಳಿಸುವ ಹಾಗೂ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯುವ ಧ್ಯೇಯಯೊಂದಿಗೆ ಒಂದು ದಿನದ ಸೈಬರ್ ಅಪರಾಧಗಳ ತನಿಖಾ ಶೃಂಗಸಭೆಯನ್ನು (CIDECODE-2024) ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ದೇಶದ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳು ಭಾಗಿ: ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿರುವ ಶೃಂಗಸಭೆಯಲ್ಲಿ ಕರ್ನಾಟಕ ಮಾತ್ರವಲ್ಲದೆ ರಾಜಸ್ಥಾನ, ಪಶ್ಚಿಮ ಬಂಗಾಳ, ಮೇಘಾಲಯ, ತೆಲಂಗಾಣ, ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್, ಛತ್ತೀಸ್‌ಗಢ, ದೆಹಲಿ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳ ಪೊಲೀಸ್ ಅಧಿಕಾರಿಗಳು, ಪ್ರಮುಖ ತನಿಖಾ ಸಂಸ್ಥೆಗಳಾದ ಎನ್ಐಎ, ಸಿಬಿಐ, ಇಡಿ ಸಂಸ್ಥೆ ಅಧಿಕಾರಿಗಳು ಭಾಗಿಯಾಗಿದ್ದರು.

Cyber Crimes Investigation Summit  Discussion on future challenges  Cyber Crimes  The field of cyber forensics ​ Bengaluru
ಗೃಹ ಸಚಿವ ಡಾ. ಜಿ. ಪರಮೇಶ್ವರ ಶೃಂಗಸಭೆ ಉದ್ಘಾಟಿಸಿ ಮಾತನಾಡಿದರು.

ಸೈಬರ್ ಅಪರಾಧಗಳ ತನಿಖೆಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ತಂತ್ರಜ್ಞಾನಗಳು ಹಾಗೂ ಕಾನೂನು ಜಾರಿ ದೃಷ್ಟಿಕೋನದಿಂದ ಎದುರಾಗಬಹುದಾದ ಸವಾಲುಗಳು, ಎಐ ಪ್ರಭಾವಿತ ರಾನ್ಸಮ್‌ವೇಯರ್ ಆಕ್ರಮಣಗಳು, ಫೋರೆನ್ಸಿಕ್ಸ್, ಮಾಲ್ವೇರ್ ವಿಶ್ಲೇಷಣೆ, ಆನ್‌ಲೈನ್ ನ್ಯಾರೇಟಿವ್ಸ್ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆಯನ್ನು ಆಯೋಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಕಾನೂನು ಜಾರಿ ಸಂಸ್ಥೆಗಳ ದಿಗ್ಗಜ ಉಪನ್ಯಾಸಕರು ಈ ಚರ್ಚೆಗಳ ಭಾಗವಾಗಿದ್ದರು. ಅಲ್ಲದೇ ಕಾನೂನು ಜಾರಿ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ನಡುವಿನ ಅಂತರವನ್ನು ಇಳಿಸುವ ಗುರಿಯಿಂದ ಸೈಬರ್ ಅಪರಾಧ ಪ್ರಕರಣಗಳಲ್ಲಿನ ಸಂಕೀರ್ಣತೆಗಳ ಬಗ್ಗೆ ಹಾಗೂ ಅವುಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಕಾನೂನು ಪರಿಗಣನೆಗಳನ್ನು ಅರಿಯಲು ನೀಡಬೇಕಿರುವ ಆದ್ಯತೆಯ ಕುರಿತು ಚರ್ಚೆಗೆ ಒತ್ತು ನೀಡಲಾಯಿತು.

ಸೈಬರ್ ಫೋರೆನ್ಸಿಕ್ ಕ್ಷೇತ್ರದ ಪ್ರಮುಖ ಸಾಧನಗಳ ಪ್ರದರ್ಶನ

ಸೈಬರ್ ಫೋರೆನ್ಸಿಕ್ ಕ್ಷೇತ್ರದ ಪ್ರಮುಖ ಸಾಧನಗಳ ಪ್ರದರ್ಶನ: ಜೊತೆಗೆ ಸೈಬರ್ ಫೋರೆನ್ಸಿಕ್ ಕ್ಷೇತ್ರದಲ್ಲಿನ ಪ್ರಮುಖ ಸಾಧನಗಳ ಪ್ರದರ್ಶನ ಸಹ ಆಯೋಜಿಸಲಾಗಿತ್ತು. ಸೈಬರ್ ಅಪರಾಧಗಳ ವಿರುದ್ಧದ ಸಮರದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ಸೈಬರ್ ಫೋರೆನ್ಸಿಕ್ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನದ ಉತ್ಪನ್ನಗಳ ಬಗೆಗೆ ಅವುಗಳ ಮಾರಾಟಗಾರರಿಂದಲೇ ಪ್ರಾಯೋಗಿಕ ಅನುಭವ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಸಿಐಡಿ - ಇನ್ಫೋಸಿಸ್ ಪ್ರತಿಷ್ಠಾನ - ಡಿಸ್‌ಸಿಐ ನಡುವಿನ ಒಪ್ಪಂದ ನವೀಕರಣ: ಸಿಐಡಿ ಕರ್ನಾಟಕ, ಇನ್ಫೋಸಿಸ್ ಪ್ರತಿಷ್ಠಾನ ಮತ್ತು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್‌ ಇಂಡಿಯಾದ ಒಪ್ಪಂದವನ್ನು ನವೀಕರಿಸಿರುವುದು ಶೃಂಗಸಭೆಯ ಮತ್ತೊಂದು ಮುಖ್ಯಾಂಶವಾಗಿತ್ತು.ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಕರ್ನಾಟಕ ಸಿಐಡಿ, ಇನ್ಫೋಸಿಸ್ ಫೌಂಡೇಷನ್ ಮತ್ತು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್‌ ಇಂಡಿಯಾ ಸಂಸ್ಥೆಗಳ ಒಪ್ಪಂದದ ಮೂಲಕ ಸೆಂಟರ್ ಫಾರ್ ಸೈಬರ್ ಇನ್ವೆಸ್ಟಿಗೇಷನ್ ಟ್ರೇನಿಂಗ್ ಮತ್ತು ರೀಸರ್ಚ್ (ಸಿಸಿಐಟಿಆರ್) ಎಂಬ ವ್ಯವಸ್ಥೆಯನ್ನ ಸ್ಥಾಪಿಸಲಾಗಿತ್ತು. ಒಪ್ಪಂದದ ನವೀಕರಣದ ಮೂಲಕ ಈ ವ್ಯವಸ್ಥಯನ್ನು ಮುಂದುವರೆಸಲಾಗಿದೆ.

ಸೈಬರ್ ಫೋರೆನ್ಸಿಕ್ ಕ್ಷೇತ್ರದ ಪ್ರಮುಖ ಸಾಧನಗಳ ಪ್ರದರ್ಶನ ವೀಕ್ಷಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ

ಶೃಂಗಸಭೆ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ: ಗೃಹ ಸಚಿವ ಡಾ ಜಿ. ಪರಮೇಶ್ವರ ಅವರು ಶೃಂಗಸಭೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಸರ್ಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್, ಸಿಐಡಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಎ. ಸಲೀಂ, ಇನ್ಫೋಸಿಸ್ ಪ್ರತಿಷ್ಠಾನದ ಟ್ರಸ್ಟಿ ಸುನಿಲ್ ಕುಮಾರ್ ಧರೇಶ್ವರ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ವಿನಾಯಕ್ ಗೋಡ್ಸೆ ಸಭೆಯಲ್ಲಿ ಭಾಗಿಯಾಗಿದ್ದರು.

ಸಿಐಡಿ - ಇನ್ಫೋಸಿಸ್ ಪ್ರತಿಷ್ಠಾನ - ಡಿಸ್‌ಸಿಐ ನಡುವಿನ ಒಪ್ಪಂದ ನವೀಕರಣ

ಇದನ್ನೂ ಓದಿ: ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ.ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.